Ad Widget

ಮರ್ಕಂಜ : ಆಗಸ್ಟ್ 03 ರಂದು ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ಮರ್ಕಂಜ ಯುವಕ ಮಂಡಲ(ರಿ.) ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ಆಗಸ್ಟ್ 03 ಆದಿತ್ಯವಾರದಂದು ಮರ್ಕಂಜ ಯುವಕ ಮಂಡಲ ಸಭಾಭವನದಲ್ಲಿ “ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ” ನಡೆಯಲಿದೆ ಎಂದು ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾದ ದಾಖಲಾತಿಗಳು :...

ಥ್ರೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಭವಿತಾ ಬೇರಿಕೆ

ಕಳಂಜ ಗ್ರಾಮದ ಭವಿತಾ ಬೇರಿಕೆ ಥ್ರೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಜುಲೈ 06 ರಂದು ಮಂಡ್ಯದಲ್ಲಿ ನಡೆದ ರಾಷ್ಟ್ರೀಯ ಥ್ರೋಬಾಲ್ ಅರ್ಹತಾ ಪಂದ್ಯಾಕೂಟಗಳಲ್ಲಿ ಭಾಗವಹಿಸಿ ಆಯ್ಕೆಯಾಗಿ, ಆಗಸ್ಟ್ 16 ರಿಂದ 18 ರವರೆಗೆ ಜಾರ್ಖಂಡ್‌ ನ ರಾಂಚಿಯಲ್ಲಿ ನಡೆಯಲಿರುವ 48ನೇ ಹಿರಿಯ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸ್ಟೇಟ್ ಸೀನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ತಂಡವನ್ನು ಪ್ರತಿನಿಧಿಸಲಿದ್ದಾರೆ....
Ad Widget

ಸಿ.ಇ.ಟಿ ಪರೀಕ್ಷೆಯಲ್ಲಾದ ಗೊಂದಲಗಳನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಘಟಕದಿಂದ ಪ್ರತಿಭಟನೆ

ಕೆ.ಸಿ.ಇ.ಟಿ ಅಭ್ಯರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ ಮತ್ತು ಸಾಫ್ಟ್‌ವೇರ್ ದೋಷದ ಹಿನ್ನೆಲೆಯಲ್ಲಿ ಎಂ.ಬಿ.ವಿ.ಪಿ ಸುಳ್ಯ ಘಟಕದಿಂದ ತಾಲೂಕು ಕಚೇರಿ ಎದುರು ರಾಜ್ಯಮಟ್ಟದ ಪ್ರತಿಭಟನೆ ನಡೆಯಿತು.ಎ.ಬಿ.ವಿ.ಪಿ ತಾಲೂಕು ಸಂಚಾಲಕರಾದ ನಂದನ್ ಪವಿತ್ರಮಜಲು ಮಾತನಾಡಿ “ವಿದ್ಯಾರ್ಥಿಗಳು ಈಗ ಅನುಭವಿಸುತ್ತಿರುವ ತೀವ್ರ ಒತ್ತಡ ಹಾಗೂ ಅನ್ಯಾಯದ ಕುರಿತು” ಆಕ್ರೋಶ ವ್ಯಕ್ತಪಡಿಸಿದರು.ಸಕ್ರಿಯ ಕಾರ್ಯಕರ್ತರು ಮುಳಿಯ ಸಾತ್ವಿಕ್ ಅವರು...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಕೊಲ್ಲಮೊಗ್ರು ಇದರ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಇಲ್ಲಿನ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಲಮೊಗ್ರು, ಸುಳ್ಯ ಇದರ ವತಿಯಿಂದ ಪರಿಸರ ಜಾಗೃತಿಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಇದರಲ್ಲಿ ತರಗತಿವಾರು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಗಳನ್ನು ವಿತರಿಸಿದರು. ಹಣ್ಣಿನ ಗಿಡಗಳನ್ನು ಶಾಲಾ ಮಂತ್ರಿಮಂಡಲದ ನಾಯಕರಿಗೆ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ವಲಯ ಒಕ್ಕೂಟದ ಅಧ್ಯಕ್ಷರು ಹಾಗೂ ಕೊಲ್ಲಮೊಗ್ರು A ಒಕ್ಕೂಟದ...

ನಾಳೆ(ಜು.22) ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

ಸುಬ್ರಾಯ ಸಂಪಾಜೆಯವರಿಗೆ ಸನ್ಮಾನ

ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 22ರಂದು ಪತ್ರಿಕಾ ದಿನಾಚರಣೆಯು ಸುಳ್ಯ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿಗಳಾದ ಗಿರೀಶ್ ಅಡ್ಪಂಗಾಯ ತಿಳಿಸಿದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷರಾದ ಲೋಕೇಶ್ ಪೆರ್ಲಂಪಾಡಿ ಅಧ್ಯಕ್ಷತೆ ವಹಿಸಲಿದ್ದು, ಆಕಾಶವಾಣಿ ಮಡಿಕೇರಿ ಕೇಂದ್ರದ ನಿವೃತ್ತ ಉದ್ಘೋಷಕರಾದ...

ಪೆರಾಜೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಉದ್ಘಾಟನೆ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪೆರಾಜೆಯಲ್ಲಿ ಜು.21 ಸೋಮವಾರದಂದು ಬೆಳಿಗ್ಗೆ 10:30ಕ್ಕೆ ಆಂಗ್ಲ ಮಾಧ್ಯಮ ಉದ್ಘಾಟನಾ(ದ್ವಿ-ಭಾಷಾ) ಕಾರ್ಯಕ್ರಮ ನೆರವೇರಿತು.ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ನೆಡ್ಚಿಲ್ ಅವರು ವಹಿಸಿಕೊಂಡರು.ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ ಅವರು ನೆರವೇರಿಸಿದರು. ಉದ್ಘಾಟನೆಯ ನಂತರ...

ಸುಳ್ಯ : ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರ 83ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ 83ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ರವರ ನೇತೃತ್ವದಲ್ಲಿ ಸುಳ್ಯ ಕಾಂಗ್ರೆಸ್ ಮುಖಂಡರು ಇಂದು ಸುಳ್ಯದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ...

ಆಸ್ತಿಕ್ ಬಾಳಿಕಳ ಪಾರ್ಥಿವ ಶರೀರ ಇಂದು ಅಪರಾಹ್ನ 2.15ಕ್ಕೆ ಸುಳ್ಯಕ್ಕೆ

ಸಂಜೆ ಮಡಪ್ಪಾಡಿ ಮನೆಯಲ್ಲಿ ಅಂತ್ಯಸಂಸ್ಕಾರ

ಕಣ್ಣೂರಿನ ಗೆಳೆಯನ ಮನೆಗೆ ತೆರಳಿದ್ದ ಆಸ್ತಿಕ್ ಬಾಳಿಕಳ ಕೆರೆ ನೀರಿನಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದರು.‌ ಇಂದು ಆಸ್ತಿಕ್ ರವರ ಪಾರ್ಥಿವ ಶರೀರ ಅಪರಾಹ್ನ 2.15ಕ್ಕೆ ಸುಳ್ಯಕ್ಕೆ  ತಲುಪಲಿರುವುದಾಗಿ ತಿಳಿದುಬಂದಿದೆ. ನಿವೃತ್ತ ವೈದ್ಯಾಧಿಕಾರಿ ಡಾ| ನಂದಕುಮಾರ್ ಬಾಳಿಕಳ ರವರ ಪುತ್ರ ಆಸ್ತಿಕ್ ರಾಘವ್ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜ್ ನಲ್ಲಿ ಪ್ರಥಮ ವರ್ಷದ...

ಎಲ್ಲಾ  ಓಕೆ, ಜಂಕ್ ಪುಡ್ ಯಾಕೆ..?

ಇಂದು ಜಂಕ್ ಫುಡ್ ಜಾಗೃತಿ ದಿನ

✍️ಡಾ| ಮುರಲೀ ಮೋಹನ್ ಚೂಂತಾರು“ಬದುಕುವುದಕ್ಕಾಗಿ ತಿನ್ನಿ, ತಿನ್ನಲಿಕ್ಕಾಗಿ ಬದುಕಬೇಡಿ” ಎಂಬ ಮಾತನ್ನು ಪ್ರಾಯಶಃ ಇಂದಿನ ಕಾಲಘಟ್ಟದಲ್ಲಿ ನಮ್ಮ ಯುವಜನತೆ ಮತ್ತು ಮಕ್ಕಳಿಗೆ ಪುನಃ ನೆನಪಿಸಿಕೊಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ. ನಮ್ಮ ದೇಹದ ದೈಹಿಕ, ಮಾನಸಿಕ ಬೌದ್ಧಿಕ ಮತ್ತು ಸರ್ವತೋಮುಖ ಬೆಳವಣಿಗೆಯಲ್ಲಿ ನಮ್ಮ ಆಹಾರ, ಬಹುಮುಖ್ಯ ಪಾತ್ರ ವಹಿಸುತ್ತದೆ. ಬಹಳಷ್ಟು ರೀತಿಯ ಆಧುನಿಕ...

ಅಂತಾರಾಜ್ಯ ಸಂಪರ್ಕಿಸುವ ಪೆರಾಜೆ ಕೂರ್ನಡ್ಕ ರಸ್ತೆ ಅವ್ಯವಸ್ಥೆ

ಶ್ರಮದಾನದ ಮುಖಾಂತರ ರಸ್ತೆ ದುರಸ್ತಿ ಮಾಡಿದ ನಿವಾಸಿಗಳು

ಅಂತಾರಾಜ್ಯ ಸಂಪರ್ಕಿಸುವ ಕೇರಳ ಗಡಿಭಾಗದ ಸಮೀಪದಲ್ಲಿ ಹಾದುಹೋಗುವ ಪೆರಾಜೆ ಕೂರ್ನಡ್ಕ ರಸ್ತೆ ಕೆಲವೆಡೆ ತೀರ ಹದಗೆಟ್ಟಿದ್ದು ಜನಪ್ರತಿನಿಧಿಗಳು ಹಾಗೂ ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ಈ ಭಾಗದ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ.‌ಇದೀಗ ಗ್ರಾಮಸ್ಥರೇ ಸೇರಿ ಶ್ರಮದಾನ ನಡೆಸಿ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ.‌ ಶ್ರಮದಾನದಲ್ಲಿ ಚಿದಾನಂದ ಮಾವಾಜಿ, ಸಂದೇಶ್ ಗರುಗುಂಜ, ಜಯಪ್ರಕಾಶ ಹೊದ್ದೆಟ್ಟಿ, ಅನಂತ ಗರುಗುಂಜ, ವಿನಯ ಗರುಗುಂಜ, ಪವಿತ್ರ...
Loading posts...

All posts loaded

No more posts

error: Content is protected !!