- Saturday
- March 7th, 2026
ಮಡಪ್ಪಾಡಿ ಗ್ರಾಮದ ತಳೂರು ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧರ್ಮಪಾಲ ರವರ ಧರ್ಮ ಪತ್ನಿ ಶ್ರೀಮತಿ ಪುಷ್ಪಾವತಿ ಯವರು ಅಲ್ಪಕಾಲದ ಅಸೌಖ್ಯದಿಂದ ಫೆ.11 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ಹರ್ಷಿತ್, ದೀಕ್ಷಿತ್, ಪುತ್ರಿ ದೀಕ್ಷಾ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಮರ್ಕಂಜ ಇದರ ವತಿಯಿಂದ ಬೊಳ್ಳಾಜೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಬೇರಿಕೆ ಹಾಗೂ ಪದ್ಮನಾಭ ನಿಡ್ಯಮಲೆ, ಸಂಜಿತ್ ಹೈದಂಗೂರ್, ಶಾಲಾ ಶಿಕ್ಷಕಿ ಮತ್ತು ಸಹಾಯಕಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮೊಗರ್ಪಣೆ ಮಸೀದಿ ಎದುರು ಕಾರು ಹಾಗೂ ಲಾರಿ ಮಧ್ಯೆ ಇದೀಗ ಅಪಘಾತ ನಡೆದಿದೆ. ಕೆಲ ಹೊತ್ತು ರಸ್ತೆ ಬ್ಲಾಕ್ ಆಗಿದ್ದು, ಪೋಲೀಸರು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದರು. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.
ಆಸರೆ ಇಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸ್ಸ್ ಗುತ್ತಿಗಾರು ಇಲ್ಲಿ ಪ್ರತೀ ವಾರಕ್ಕೆ ರೂ.200/- ರ ಪಾವತಿಯ ಹೊಸ "ಆಸರೆ ಉಳಿತಾಯ ಯೋಜನೆ" ಪ್ರಾರಂಭವಾಗಿದ್ದು, ಇದರ ಮೊದಲ ಉಚಿತ ಡ್ರಾ ಶಿವರಾತ್ರಿಯ ದಿನ ನಡೆಯಲಿದೆ. ಬಹುಪಯೋಗಿ ಮೌಲ್ಯಯುತವಾದ ವಸ್ತುಗಳನ್ನು ಪ್ರತೀ ವಾರ ಗೆಲ್ಲುವ ಅವಕಾಶವಾಗಿದ್ದು, ಆಸಕ್ತರು ಈ ಕೂಡಲೇ ತಮ್ಮ ವಿಳಾಸದೊಂದಿಗೆ ಈ ನಂಬರ್‌ಗೆ 7975652508 ಸಂಪರ್ಕಿಸಿ...
ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ ಫೆ.10 ರಂದು ನಡೆದ ಗ್ರಾಮ ಸಭೆಯಲ್ಲಿ ದೇವ ಗೆಳೆಯರ ಬಳಗವನ್ನು ಗುರುಸಿಸಿ ಸನ್ಮಾನಿಸಿದರು. ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುತ್ತಿರುವುದನ್ನು ಗುರುತಿಸಿ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಗೆಳೆಯರ ಬಳಗದ ಪದಾಧಿಕಾರಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ರಮೇಶ್ ಪಡ್ಪು, ಅಧ್ಯಕ್ಷ ಮುಕುಂದ ಹಿರಿಯಡ್ಕ, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು...
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.03 ಮಂಗಳವಾರದಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರೀ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ ಮಾಡಲಾಗಿದ್ದು, ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಪಸಂಸ್ಕಾರ ಪ್ರಾರಂಭ ಇಲ್ಲ : ಮಾ.02 ಸೋಮವಾರ ಮತ್ತು ಮಾ.03 ಮಂಗಳವಾರದಂದು ಸರ್ಪಸಂಸ್ಕಾರ ಪೂಜೆ ಪ್ರಾರಂಭವಿರುವುದಿಲ್ಲ. ಮಾ.03ರಂದು ಯಾವುದೇ ಸೇವೆಗಳು...
ಜಾತ್ಯಾತೀತ ಜನತಾದಳ ದ.ಕ ಜಿಲ್ಲಾಧ್ಯಕ್ಷರಾಗಿ ಜಾಕೆ ಮಾಧವ ಗೌಡರು ಪುನರಾಯ್ಕೆಗೊಂಡಿದ್ದು,ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡರು ಈ ನೇಮಕವನ್ನು ಮಾಡಿದ್ದಾರೆ.ಫೆ.07 ರಂದು ಬೆಂಗಳೂರಿನಲ್ಲಿ ನಡೆದ ಜೆ.ಡಿ.ಎಸ್ ಕಾರ್ಯಕಾರಿಣಿ ಸಭೆಯಲ್ಲಿ ನೇಮಕದ ಆದೇಶ ಪತ್ರವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಕೊಟ್ಟು ಶುಭಾಶಯ ಸಲ್ಲಿಸಿದರು.ಜಾಕೆ ಮಾಧವ ಗೌಡರು ಈ ಹಿಂದಿನ ಅವಧಿಗೂ ಅಧ್ಯಕ್ಷರಾಗಿದ್ದರು.
ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ಸಂಭ್ರಮ-2026 ಇಂದು(ಫೆ. 9) ಬೆಳಿಗ್ಗೆ 11 ಘಂಟೆಗೆ ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಬೆಳ್ಳಾರೆ ಅಂಗನವಾಡಿಯ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ದೇವಿಕಾ ಕೆ .ಅಧ್ಯಕ್ಷತೆಯನ್ನು ವಹಿಸಿದ್ದರು.ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್.ರೈ ಉದ್ಘಾಟನೆ ಕಾರ್ಯ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ...
ಸುಳ್ಯದ ಸಂತ ಜೋಸೆಫ್ ಶಾಲೆಯಲ್ಲಿ ರಾಷ್ಟ್ರಮಟ್ಟದ ಯೋಗ ಹಾಗೂ ರಾಜ್ಯಮಟ್ಟದ ಗೀತಾ ಗಾಯನ ಸ್ಪರ್ಧೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ತರಬೇತಿ ಹಾಗು ಪ್ರೋತ್ಸಾಹ ನೀಡಿದ ಶಿಕ್ಷಕರುಗಳಿಗೆ ಅಭಿನಂದನ ಕಾರ್ಯಕ್ರಮವು ಫೆ.09 ರಂದು ನಡೆಯಿತು. ಸಾಧಕರನ್ನು ಜ್ಯೋತಿ ಸರ್ಕಲ್ ನಿಂದ ಶಾಲಾ ವಠಾರದವರೆಗೆ ತೆರೆದ ಜೀಪಿನಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು...
ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ನೂತನ ವಿಸ್ತೃತ ಕಟ್ಟಡದಲ್ಲಿ ಪ್ರಾಂಶುಪಾಲರ ಕೊಠಡಿ ಮತ್ತು ಕಚೇರಿಯನ್ನು ಉದ್ಘಾಟಿಸಲಾಯಿತು. ಪುರೋಹಿತ್ ಶ್ರೀ ನಾಗರಾಜ ಭಟ್ಟರವರು ಗಣ ಹೋಮವನ್ನು ನೆರವೇರಿಸಿದರು. ನೂತನ ಕೊಠಡಿಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ನಿರ್ದೇಶಕರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಉದ್ಘಾಟಿಸಿ ಶುಭ ಹಾರೈಸಿದರು....
Loading posts...
All posts loaded
No more posts
