- Tuesday
- November 26th, 2024
ದೂರದರ್ಶನ ಚಂದನ ವಾಹಿನಿಯಲ್ಲಿ ಇಂದಿನಿಂದ ಆಗಸ್ಟ್ 14 ರವರೆಗೆ ವಿಡಿಯೋ ಪಾಠಗಳ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗಲಿದೆ.ಈ ಅವಧಿಯಲ್ಲಿ ಹಿಂದಿನ ತರಗತಿಗಳ ವಿಷಯಗಳನ್ನು ಬೋಧಿಸಲಾಗುತ್ತದೆ. ಸದ್ಯಕ್ಕೆ ಕನ್ನಡ ಮಾಧ್ಯಮದಲ್ಲಿ ಬೋಧನೆ ಇರುತ್ತದೆ. ಆದರೆ ಕನ್ನಡ ಮಾತೃಭಾಷೆಯಾಗಿರುವ ಇಂಗ್ಲೀಷ್ ಹಾಗೂ ಇತರೆ ಮಾಧ್ಯಮಗಳ ವಿದ್ಯಾರ್ಥಿಗಳು ನೋಡಿದಲ್ಲಿ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ರಾಜ್ಯ ಪಠ್ಯಕ್ರಮ ಬಿಟ್ಟು ಕೇಂದ್ರ ಪಠ್ಯ ಕ್ರಮ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜ್ ಸುಬ್ರಹ್ಮಣ್ಯ ದ ರಂಗ ಘಟಕ ಕುಸುಮ ಸಾರಂಗವೂ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕೊರೋನ ಸಂಕಷ್ಟದ ಸಮಯದಲ್ಲಿ ಆಸಕ್ತ ಪ್ರತಿಭೆಗಳಿಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು...
ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು 2020-21 ನೇ ಸಾಲಿನ ಪ್ರಥಮ ಪದವಿ ವಿಧ್ಯಾರ್ಥಿಗಳಿಗೆ ಆನ್ ಲೈನ್ ದಾಖಲಾತಿಗಾಗಿ ಆರಂಭವಾಗಿದ್ದು ಲಾಕ್ ಡೌನ್ ವೇಳೆಯಲ್ಲಿ ಪ್ರಥಮ ಹೆಜ್ಜೆಯಿರಿಸಿದೆ. ಪ್ರವೇಶಾತಿಯನ್ನು ಬಯಸುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಗೂಗಲ್ ಲಿಂಕ್ ಉಪಯೋಗಿಸಿ ಆನ್ ಲೈನ್ ಅರ್ಜಿ ಭರ್ತಿಗೊಳಿಸುವುದು. ಭರ್ತಿಗೊಳಿಸಿದ ಮಾತ್ರಕ್ಕೆ ಪ್ರವೇಶಾತಿ ಅಂಗೀಕಾರವಾಗಿದೆ ಎಂದು ಭಾವಿಸತಕ್ಕದ್ದಲ್ಲ. ಈ ಮಾಹಿತಿಯನ್ನು...
ಪಿ.ಯು.ಸಿ ಫಲಿತಾಂಶದದಲ್ಲಿ ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿ ಶ್ರದ್ಧಾ . ಯು ಒಟ್ಟು 567 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ . ಈಕೆ ಉಳುವಾರು ಪುರುಷೋತ್ತಮ ಭಾರತಿ ದಂಪತಿ ಪುತ್ರಿ . ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಕಲಿಕೆಯೊಂದಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ .
ಕೊರೋನ ಭಯದಿಂದ ಅಲ್ಲೋಲ ಕಲ್ಲೋಲವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣದಿಂದ ವಂಚಿತವಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳ ಹಿತದೃಷ್ಟಿಯಿಂದ ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರ ಅಪೇಕ್ಷೆ ಮೇರೆಗೆ ಶಾಲಾ ಶಿಕ್ಷಕಿ ಶ್ರೀಮತಿ ಶ್ವೇತಾ ಅವರಿಂದ ವಿಶೇಷ ಶಿಕ್ಷಣ ವ್ಯವಸ್ಥೆ ಆರಂಭವಾಗಿರುವುದು ಪ್ರಯೋಗ ಶೀಲ ಹಾಗೂ ಪ್ರಶಂಸನೀಯವಾಗಿದೆ. ಸದ್ಯಕ್ಕೆ ತರಗತಿ ಕಲಿಕೆ ಸಾಧ್ಯವಿಲ್ಲ ಆನ್ ಲೈನ್...
✒️ ಅನ್ಸಾರ್ ಬೆಳ್ಳಾರೆ ವಾಚ್ ಬಾಬಚ್ಚ ಅಂದ್ರೆ ಸುಳ್ಯ ನಾಡಿನಾದ್ಯಂತ ಪರಿಚಿತರು.. ಅಪರಿಚಿತರು ಬಂದ್ರೆ ಪರಿಚಿತರಂತೆ ಮಾತನಾಡುವ ಮುಗ್ದತೆಯ ಮನಸ್ಸಿನವರು…ಇಂದು ಬಾಬಚ್ಚನ ಮಗಳು ಕೇವಲ ಸುಳ್ಯ ಮಾತ್ರವಲ್ಲದೇ ತಾಲೂಕಿನಾದ್ಯಂತ ಪರಿಚಿತಳಾದಳು… ಎಸ್…ಈಕೆಯ ಹೆಸರು ಮರಿಯಂ ರಫಾನ..ಕುರುಂಜಿ ವೆಂಕಟ್ರಾಮಣ ಗೌಡ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.. ಈ ವರ್ಷದ...
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಎಲ್.ಕೆ.ಜಿ ವಿಭಾಗಕ್ಕೆ ತಾತ್ಕಾಲಿಕವಾಗಿ ಶಿಕ್ಷಕಿ / ಶಿಕ್ಷಕರು ಬೇಕಾಗಿದ್ದಾರೆ .ಶಿಕ್ಷಕಿ ಶಿಕ್ಷಕ ಹುದ್ದೆಗಳು :1ಅರ್ಹತೆಗಳು: ಪಿಯುಸಿಯಲ್ಲಿ ಶೇ.50 ಅಂಕಗಳಿಸಿರಬೇಕು. NCTE ಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ 2 ಅಥವಾ ಹೆಚ್ಚಿನ ವರ್ಷದ ಡಿಪ್ಲೋಮ ಇನ್ ನರ್ಸರಿ ತರಬೇತಿ ಪಡೆದಿರಬೇಕು. ಮೇಲಿನ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಪಿಯುಸಿ ಶೇ 50...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕ ಇದರ ಆಶ್ರಯದಲ್ಲಿ ಜು.9ರಂದು ರಾಷ್ಟೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತಿದೆ. ಜುಲೈ 9ರಂದು ಎಬಿವಿಪಿ ಯ ಸ್ಥಾಪನ ದಿನವಾಗಿದ್ದು ಹಲವಾರು ವರ್ಷಗಳಿಂದ ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಜು.9 ರಂದು ಪೂ.10 ಗಂಟೆಗೆ ವನದುರ್ಗಾ ದೇವಿ ದೇವಸ್ಥಾನದ...
2019-20 ನೇ ಸಾಲಿನ ಶ್ರೀ ಗೋಕರ್ಣ ನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಗಾಂಧಿನಗರ ಮಂಗಳೂರು ಇಲ್ಲಿ ನಡೆದ ಬಿ.ಎಡ್ ಪರೀಕ್ಷೆಯಲ್ಲಿ ಕುಮಾರಿ ಸುಶ್ಮಿತಾ ಎಸ್ .ಕೆ ಇವರು ಅತ್ಯುತ್ತಮ ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಗೊಂಡಿರುತ್ತಾರೆ.ಇವರು ಸೂರ್ತಿಲ ಮನೆ ಸುಳ್ಯ ಎಸ್ .ಕುಶಾಲಪ್ಪ ಗೌಡ ಮತ್ತು ರೇವತಿ ಇವರ ಪುತ್ರಿಯಾಗಿರುತ್ತಾರೆ.
Loading posts...
All posts loaded
No more posts