- Wednesday
- November 6th, 2024
ನೂಜಿಬಾಳ್ತಿಲ : ನಿರಂತರವಾಗಿ ಸುರಿದ ಮಳೆಗೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಕುಸಿದು ಅಪಾರ ಹಾನಿ ಸಂಭವಿಸಿದ ಘಟನೆ ನ.23ರ ಮಂಗಳವಾರ ರಾತ್ರಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ನಡೆದಿದೆ.ರೆಂಜಿಲಾಡಿ ಗ್ರಾಮದ ನೂಜಿ ಕೆಂಚರಣ್ಯ ಎಂಬುವವರ ಪತ್ನಿ ಕುಂಞಮ್ಮ ಎಂಬುವವರ ಮನೆಗೆ ಹಾನಿಯಾಗಿದೆ. ಮನೆಯ ಮೇಲ್ಚಾವಣಿ ಕುಸಿದಿದ್ದು, ಹಂಚು ಸಹಿತ ಪೀಠೋಪಕರಣಗಳು ನಾಶಗೊಂಡಿವೆ. ಘಟನೆ ವೇಳೆ ಮನೆ...
ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಡಾ| ನಾರಾಯಣ ಮೂರ್ತಿಯವರ ಧರ್ಮಪತ್ನಿ ಶ್ರೀಮತಿ ಸುಧಾ ಮೂರ್ತಿಯವರು ನ.23 ರಂದು ಸಾಯಂಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ನ.24 ರಂದು ಶ್ರೀ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುದರ್ಶನ್ ಜೋಯಿಸ್, ಗುರು ಭಟ್, ರವೀಂದ್ರ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ...
ಚಿಗುರು ಯುವಕ ಮಂಡಲ ಪೆರಾಜೆ ಮತ್ತು ಜ್ಯೋತಿ ಪ್ರೌಢಶಾಲೆ ಪೆರಾಜೆ ಕೊಡಗು ಇವರ ಜಂಟಿ ಆಶ್ರಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ಹಾಗೂ ಮಧುಮೇಹ ಮತ್ತು ರಕ್ತದೊತ್ತಡ ಬರದಂತೆ ತಡೆಯುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಡಿ.4 ರಂದು ಶನಿವಾರ ದಂದು ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ನಡೆಯಲಿದೆ. ಈ...
ಬಿಸಿ ಸಾಂಬಾರು ಬಿದ್ದು ಗಾಯಗೊಂಡ ಬೇಬಿ ಹೃತಿಕಾ ಳ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ. ಸಹೃದಯಿಗಳು ಈ ಕೆಳಗೆ ಕಾಣಿಸಿದ ಖಾತೆಗೆ ಧನಸಹಾಯ ಮಾಡಿ ನೆರವಾಗಬಹುದು.
ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿ.15 ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ.ಡಿ.9ರಂದು ಚಂಪಾಷಷ್ಠಿಯ ವೈಭವದ ಬ್ರಹ್ಮ ರಥೋತ್ಸವ ಕ್ಷೇತ್ರದಲ್ಲಿ ಜರುಗಲಿದೆ. ಉದ್ಯಮಿ ದಿ.ಮುತ್ತಪ್ಪ ರೈ ಸೇವಾ ರೂಪದಲ್ಲಿ ನೀಡಿದ ಬ್ರಹ್ಮರಥದಲ್ಲಿ...
ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಹಾಡುಹಗಲೇ ಕಾಡಾನೆಗಳು ಮನೆ ಅಂಗಳಕ್ಕೆ ಹಾಗೂ ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಭೀತಗೊಳಿಸುತ್ತಿರುವ ಘಟನೆ ನಡೆದಿದ್ದು, ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕಡ್ಯ ಕೊಣಾಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಗಲಲ್ಲೂ ತೋಟಗಳಿಗೆ ನುಗ್ಗಿ ಕೃಷಿ ನಾಶಪಡಿಸುತ್ತಿರುವ ದೂರುಗಳು ಕೇಳಿಬಂದಿವೆ.ಮಧುಸೂದನ್ ಭಟ್ ಕಡ್ಯ, ನರಸಿಂಹ...
ದಕ್ಷಿಣ ಕನ್ನಡ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದು ಇಂದು ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ, ಬಿಜೆಪಿ ಜಿಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಶ್ರೀಯುತ ಹರೇಕಳ ಹಾಜಬ್ಬ ಅವರನ್ನು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ವಸಂತ ಶೆಟ್ಟಿ ಬೆಳ್ಳಾರೆ ಹಾಗೂ ಕಾರ್ಯದರ್ಶಿಗಳಾದ ಶ್ರೀ ಡಾ.ಎಂ ಎಸ್ ಶಶಿಕುಮಾರ್, ಶಾಲೆಯ ಪ್ರಾಂಶುಪಾಲರು ಹಾಗೂ ಸದಸ್ಯರು ಮತ್ತು ಪೋಷಕರು ಸೇರಿ ವಿಮಾನ...
ಎ.ಯು. ಕ್ರಿಯೇಶನ್ ನಿರ್ಮಾಣದ "ಸಂಘಧ್ಯೇಯ" ಎಂಬ ಕನ್ನಡ ಕಿರುಚಿತ್ರದ ಮುಹೂರ್ತವು ಉಪ್ಪಿನಂಗಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು. ಕಿರುಚಿತ್ರದ ನಾಯಕನಾಗಿ ನವನೀತಕೃಷ್ಣ ಜೋಗಿಯಡ್ಕರವರು ಬಣ್ಣ ಹಚ್ಚಲಿದ್ದು, ಕಥೆ,ಚಿತ್ರಕಥೆ,ಸಂಭಾಷಣೆ ಮತ್ತು ನಿರ್ದೇಶನವನ್ನು ಅಚಲ್ ಉಬರಡ್ಕ ಮಾಡಲಿದ್ದಾರೆ. ಈ ಕಿರುಚಿತ್ರದಲ್ಲಿ ಶ್ರೀವತ್ಸ ಭಾರಧ್ವಾಜ, ಕಿರಣ್ ಕುಮಾರ್ ಶಾಂತಿನಗರ ಮತ್ತಿತರರು ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಛಾಯಾಗ್ರಾಹಕರಾಗಿ ವಿನಯ್ ರೈ...
Loading posts...
All posts loaded
No more posts