- Saturday
- March 7th, 2026
ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮೇ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ರೈತರು, ಕೃಷಿಕೂಲಿಗಾರರು ಹಾಗೂ ಗ್ರಾಮೀಣ ಕಸುಬುದಾರರ ಸಂಕಷ್ಟದ ತಕ್ಷಣದ ಪರಿಹಾರಕ್ಕೆ ಆಗ್ರಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಯೊಂದಿಗೆ ಪ್ರತಿಭಟನಾ ಸಭೆ ನಡೆಸಿ ಸಹಾಯಕ ಕಮೀಷನರ್ ಮೂಲಕ...
ಭಾರತ ತನ್ನ ಭೂಭಾಗದೊಳಗೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನೇ ನೆಪವಾಗಿಟ್ಟುಕೊಂಡು ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಬೆದರಿಕೆಯೊಡ್ಡುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ . ಗಡಿಯುದ್ದಕ್ಕೂ ಚೀನಾ ಎಲ್ಲೆಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಜಮಾವಣೆ ಮಾಡಿದೆಯೋ ಅಲ್ಲೆಲ್ಲಾ ಸಮಬಲ ರೀತಿಯಲ್ಲಿ ಸೈನಿಕರ ನಿಯೋಜನೆ ಮಾಡಲು ಹಾಗೂ ಚೀನಾ ಆಕ್ಷೇಪಿಸುತ್ತಿರುವ ರಸ್ತೆ ಕಾಮಗಾರಿ ಮುಂದುವರಿಸಲು ನಿರ್ಧರಿಸಿದೆ...
ಲಾಕ್ಡೌನ್ ಬಳಿಕ ಸುಮಾರು ಎರಡು ತಿಂಗಳಿಂದ ಬಂದಾಗಿದ್ದ ಧಾರ್ಮಿಕ ಕೇಂದ್ರಗಳು ಜೂನ್ 1 ರಿಂದ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿಯಮಾನುಸಾರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಲವು ನಿಯಮಗಳನ್ನು ಪಾಲಿಸುವ ಮೂಲಕ ಭಕ್ತರು ದೇವರ...
ಸುಳ್ಯದ ಕಾಂಗ್ರೆಸ್ ನಾಯಕರಿಗೆ ವಿವಿಧ ಬ್ಲಾಕ್ ಗಳ ಉಸ್ತುವಾರಿಗಳಾಗಿ ನೇಮಕ ಮಾಡಿದ್ದಾರೆ. ಎಂ.ವೆಂಕಪ್ಪ ಗೌಡ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ, ಟಿ.ಎಂ.ಶಹೀದ್ ರಿಗೆ ವಿರಾಜಪೇಟೆ ಬ್ಲಾಕ್ ಉಸ್ತುವಾರಿ, ಭರತ್ ಮುಂಡೋಡಿಯವರಿಗೆ ಕಾರ್ಕಳ ಬ್ಲಾಕ್ ಉಸ್ತುವಾರಿ ಹಾಗೂ ಧನಂಜಯ ಅಡ್ಪಂಗಾಯರನ್ನು ಬೇಲೂರು ಬ್ಲಾಕ್ ಉಸ್ತುವಾರಿ ಗಳನ್ನಾಗಿ ನೇಮಿಸಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಮಾಡಿದ್ದಾರೆ.ಸುಳ್ಯ ಬ್ಲಾಕ್ ಕಾಂಗ್ರೆಸ್...
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡ್ಕದ ನಿಶಾಂತ್‌ನನ್ನು ಕಾಪಾಡಲು ಹಬ್ಬದ ಖುಷಿಯಲ್ಲಿದ್ದ ಸಂದರ್ಭದಲ್ಲಿಯೂ ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಧುಮುಕಿ ರಕ್ಷಣೆಗೆ ಮುಂದಾಗಿದ್ದರು. ಯುವಕರ ಈ ಸಾಹಸ ಮಾನವೀಯತೆಗೆ ಸಾಕ್ಷಿಯಾಗಿತ್ತು. ಇದನ್ನು ಗುರುತಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಸನ್ಮಾನಿಸಲಾಯಿತು.
ರಬ್ಬರ್ ಶೀಟ್ ಮತ್ತು ಸ್ಕ್ರಾಪ್ ಕಳವು ಮಾಡಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರುಯಶಸ್ವಿಯಾಗಿದ್ದಾರೆ ಮಡಿಕೇರಿ ತಾಲ್ಲೂಕು ಪಿ.ಪೆರಾಜೆ ಗ್ರಾಮದ ನಿವಾಸಿ ಆರ್.ಎ ಶರತ್ ಎಂಬುವವರು ಅವರ ರಬ್ಬರ್ ತೋಟದಿಂದ ಟ್ಯಾಪಿಂಗ್ ಮಾಡಿ ಸಂಗ್ರಹಿಸಿ ಇಟ್ಟಿದ್ದ 2,10,000 ರೂ ಬೆಲೆಬಾಳುವ 1300 ಕೆ.ಜಿ ರಬ್ಬರ್ ಶೀಟ್ ಮತ್ತು 900...
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರು, ಜೂ.7 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದಾರೆ. ಇದೇ ಸಂದರ್ಭ ಏಕ ಕಾಲದಲ್ಲಿ ರಾಜ್ಯದ ಸುಮಾರು 6,500 ಪ್ರದೇಶಗಳಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ....
ಅರಬ್ ರಾಷ್ಟ್ರವಾದ ಬಹರೈನ್ ನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಕೇರ್ ಅಂಡ್ ಶೇರ್ ಚಾರಿಟೇಬಲ್ ಟ್ರಸ್ಟ್ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದೆ. ಕೋವಿಡ್ 19 ನಿಂದ ನಮ್ಮ ದೇಶ ಮಾತ್ರವಲ್ಲ ವಿದೇಶಗಳು ಕೂಡ ಕಷ್ಟಕ್ಕೀಡಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲೂ ವಿದೇಶದಲ್ಲಿ ಕಷ್ಟಕ್ಕೀಡಾಗಿರುವ ಭಾರತೀಯರಲ್ಲಿ ಹಲವರ ಪರಿಸ್ಥಿತಿ ಕೇಳಿದರೆ ಕಣ್ಣೀರು ಬರುವ...
ಕಾಂಗ್ರೆಸ್ ವತಿಯಿಂದ ಕೇರಳ ರಾಜ್ಯಗಳಿಗೆ ತೆರಳಲು ಅಪೇಕ್ಷಿಸಿದ ಕೇರಳದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಂದು ಕಲ್ಪಿಸಲಾಗಿತ್ತು.25 ಜನ ಇರುವ ಮೊದಲ ಬಸ್ ಸೇವೆ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಬಾಗದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ರವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ...
ಪ್ರಧಾನಮಂತ್ರಿಗೆ ಬರೆದ ಪತ್ರಕ್ಕೆ ಎಚ್ಚರಗೊಂಡ ಅಧಿಕಾರಿಗಳು ಕೊಲ್ಲಮೊಗ್ರ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಜನರ ಸಮಸ್ಯೆ ಕೇಳೋರೆ ಇಲ್ಲದಂತಾಗಿದೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಇರುವ ಒಂದೇ ಆಗಿರುವುದರಿಂದ ಜನ ತುರ್ತು ಸೇವೆಗಳಿಗೆ ಪರದಾಡುವಂತ ಪರಿಸ್ಥಿತಿ ಬಂದಿದೆ. ಶಾಸಕರು ಸಂಸದರೂ ಬಿಎಸ್ಎನ್ ಎಲ್ ನೆಟ್ವರ್ಕ್ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಂತಿಲ್ಲ. ಮತ್ತೆ ಸ್ಥಳೀಯ ಜನಪ್ರತಿನಿಧಿಗಳು ಏನೂ...
Loading posts...
All posts loaded
No more posts
