Ad Widget

ಮೀನುಗಾರಿಕಾ ಬೋಟ್ ಬಂಡೆಗೆ ಡಿಕ್ಕಿ

ಮಲ್ಪೆ: ಸಮುದ್ರದಿಂದ ತೀರಕ್ಕೆ ಸಮೀಪಿಸುತ್ತಿದ್ದ ಬೋಟ್ ಒಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಮುಳುಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.ಇದು ಮೀನುಗಾರಿಕೆಗೆ ತೆರಳಿದ್ದ ಬೋಟ್ ಆಗಿತ್ತು ಎಂದು ತಿಳಿದುಬಂದಿದೆ. ಅಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿದೆ. ಗಾಳಿ ಜೋರಾಗಿ ಬೀಸಿದ್ದರ ಪರಿಣಾಮವಾಗಿ ಬೋಟ್ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ.

ದ.ಕ.‌ ಜಿಲ್ಲಾಧಿಕಾರಿ ವರ್ಗಾವಣೆಗೆ ಷಡ್ಯಂತ್ರ

ಕೊರೊನಾ ವಿಪತ್ತು ನಿರ್ವಹಣೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ವಿರುದ್ಧ ವಿಫಲರಾಗಿದ್ದಾರೆ ಎನ್ನುವ ಆರೋಪ ಹೆಣೆಯುವ ಮೂಲಕ ಈ ಷಡ್ಯಂತ್ರ ನಡೆಯುತ್ತಿದೆ.ಸ್ವತ ಅಧಿಕಾರಿಗಳಿಂದಲೇ ಈ ರೀತಿಯ ವ್ಯವಸ್ಥಿತ ಸಂಚು ನಡೆಯುತ್ತಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ. ಸಿಂಧು ಬಿ ರೂಪೇಶ್ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೊರೊನಾ ಮಹಾಮಾರಿಯಂತ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅನಿವಾರ್ಯ...
Ad Widget

ಬಾಳೆಕೋಡಿ ಶಶಿಕಾಂತಮಣಿ ಸ್ವಾಮೀಜಿ ವಿಧಿವಶ

ಬಾಳೆ ಕೋಡಿಮಠದ ಮಠಾಧೀಶರಾದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರು ಮೇ. 18 ರಂದು ರಾತ್ರಿ ಇಹಲೋಕ ತ್ಯಜಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮುರ ಬಾಳೆ ಕೋಡಿಮಠದ ಮಠಾಧೀಶರಾದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಸಾಹಿತ್ಯ ಪ್ರೇಮಿಗಳು, ಅನೇಕ ಪ್ರಶಸ್ತಿ ಪುರಸ್ಕೃತರು, ಗೌರವ ಡಾಕ್ಟರೇಟ್ ಪದವಿಧರರು, ಮಠದ ಮೂಲಕ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು...

ಮಡಿಕೇರಿಯಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕ : ಸುಳ್ಯದಲ್ಲಿ ಅಸ್ವಸ್ಥಗೊಂಡಾಗ ಉಪಚರಿಸಿದ ಸ್ಥಳೀಯರು

ಸುಳ್ಯದ ಕೆಲವು ಯುವಕರು ಮಾನವೀಯತೆ ಮೆರೆದು ಕಾಲ್ನಡಿಗೆಯಲ್ಲಿ ಹೊರಟಿದ್ದ ವ್ಯಕ್ತಿ ಅಸ್ವಸ್ಥಗೊಂಡು ಸುಳ್ಯದಲ್ಲಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಸ್ವಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿದ ಘಟನೆ ಮೇ ೧೭ ನಡೆದಿದೆ. ಮಂಗಳೂರಿನ ಕಟೀಲು ನಿವಾಸಿ ನಾರಾಯಣ ರೈ ಯವರು ಮಡಿಕೇರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ದೇಶದಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಊರಿಗೂ ತೆರಳಲಾಗದೆ...

ಕೊರೊನಾ ಮಹಾಮಾರಿಗೆ 5ನೇ ಬಲಿ : ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ವೃದ್ದೆ ಸಾವು

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿನಿಂದ 80 ವರ್ಷದ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೇ ಬಲಿ ಪಡೆದಿದೆ. ಮಂಗಳೂರು ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರದಲ್ಲಿ ವೃದ್ದೆಯನ್ನು ಕೋವಿಡ್...
error: Content is protected !!