- Saturday
- April 25th, 2026
ಕರ್ನಾಟಕದಲ್ಲಿಂದು 5,324 ಹೊಸ ಕೊರೊನಾಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು 1 ಲಕ್ಷ ಗಡಿ ದಾಟಿದೆ ದಕ್ಷಿಣ ಕನ್ನಡದಲ್ಲಿ ಇಂದು 119 ಪಾಸಿಟಿವ್ ದಾಖಲಾಗಿದೆ.ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 61,819 ಇದ್ದು ಇದುವರೆಗೂ 37,685 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಚಿಕಿತ್ಸೆ ಫಲಿಸದೇ ಇಂದು 75 ಜನ ಸಾವನ್ನಪ್ಪಿದ್ದು, ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,953...
ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಶುಭದಾ ರೈಯವರು ಕಡಬ ತಾಲೂಕು ಪಂಚಾಯತ್ ವ್ಯಾಪ್ತಿಗೆ ಸೇರಿರುವುದರಿಂದ ತೆರವಾಗಿರುವ ಇಲ್ಲಿಯ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಉಪಾಧ್ಯಕ್ಷ ತೆಗೆ ಅರಂತೋಡು ಕ್ಷೇತ್ರದ ತಾ.ಪಂ.ಸದಸ್ಯೆ ಪುಷ್ಪಾ ಮೇದಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ನೂತನ ತಾ.ಪಂ.ಉಪಾಧ್ಯಕ್ಷೆಯಾಗಿ ಪುಷ್ಪಾ ಮೇದಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್...
ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಕೃಷ್ಣ ಪ್ರಸಾದ್ ದೋಳ ದ.ಕ. ಜಿಲ್ಲಾ ನೋಟರಿಯಾಗಿ ಕೇಂದ್ರ ಸರಕಾರದಿಂದ ನೇಮಕಗೊಂಡಿದ್ದಾರೆ.ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ದೋಳ ಮನೆಯ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಗೌಡ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ತಂಗಮ್ಮ ಡಿ.ಬಿ.ಯವರ ಪುತ್ರ. ಇವರ ಪತ್ನಿ ಶ್ರೀಮತಿ ಸೌಮ್ಯ ಪಿ.ಎನ್. ಸುಳ್ಯದಲ್ಲಿ ಉಪವಲಯಾ ರಣ್ಯಾಧಿಕಾರಿಯಾಗಿದ್ದಾರೆ. ಕೃಷ್ಣ ಪ್ರಸಾದರು ಪದವಿ ಪೂರ್ವ...
ಭಾನುವಾರದ ಲಾಕ್ ಡೌನ್ ಜಾರಿಯಲ್ಲಿದ್ದು ಸುಳ್ಯ ವಿಖಾಯ ತಂಡವು ಸಂಪಾಜೆ ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಹದಿಮೂರು ಪ್ರಯಾಣಿಕ ಬಸ್ ತಂಗುದಾಣ ಹಾಗೂ ಪರಿಸರ ಶುಚಿಗೊಳಿಸಿ,ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಿ ಭಾನುವಾರದ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ಸಮಿತಿ ಅಧ್ಯಕ್ಷರಾದ ಜಿ, ಕೆ,ಹಮೀದ್...
ಅವಿವಾಹಿತ ಯುವತಿಯೊಬ್ಬಳು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಚೆಂಬು ಗ್ರಾಮದ ಕುದುರೆಪಾಯ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದಳು. ಮೂಲತಃ ಯುವತಿ ತೊಡಿಕಾನ ಗ್ರಾಮದವಳೆಂದು ತಿಳಿದು ಬಂದಿದೆ.
ಕುಕ್ಕೆ ಸುಬ್ರಮಣ್ಯದ ದೇವಸ್ಥಾನದಲ್ಲಿ ನಾಗರಪಂಚಮಿಯಂದು ಪ್ರತ್ಯಕ್ಷವಾದ ನಾಗ. ನಾಗ ಮಂಟಪದಲ್ಲಿ ಅಭಿಷೇಕ ನೆರವೇರಿಸುವ ಪೂಜೆ ವೇಳೆ ಹೊರಾಂಗಣದಲ್ಲಿ ಪ್ರತ್ಯಕ್ಷರಾದ ನಾಗರಾಜ. ಹಾವನ್ನು ಕಂಡ ಪುರೋಹಿತರು ಅಲ್ಲಿಗೆ ಹಾಲೆರೆದರೆ ಹಾಲನ್ನು ಸ್ವೀಕರಿಸಿ ತೆರಳಿದೆಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ ನಡೆದಿದ್ದು ಆ ಪ್ರಯುಕ್ತ ಸೀಯಾಳ, ಹಾಲು ಅಭಿಷೇಕ ನಡೆದು ಪೂಜಾ ಕಾರ್ಯ ನೆರವೇರಿತು....
ಇಂದು ರಾಜ್ಯದಲ್ಲಿ 5007, ಬೆಂಗಳೂರು 2267, ಬಳ್ಳಾರಿ 136, ಬೆಳಗಾವಿ 116,ಗದಗ 108, ಕೊಪ್ಪಳ 39, ಜನರಿಗೆ ಸೊಂಕು ತಗುಲಿದೆ. ಮೈಸೂರು 281, ಉಡುಪಿ 190, ಬಾಗಲಕೋಟ 184, ದಕ್ಷಿಣ ಕನ್ನಡ 180, ಧಾರವಾಡ 174, ,ಕಲಬುರಗಿ 159, ವಿಜಯಪುರ 158, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107, ,ಚಿಕ್ಕಬಳ್ಳಾಪುರ 92,...
ಯು.ಚೆಂಬು ಗ್ರಾಮದ ಬಾಲೆಂಬಿ ನಿವಾಸಿ ಯಶೋಧ ರವರ ರಬ್ಬರ್ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಂಡು ಬಂದು ಅದನ್ನು ಸೆರೆ ಹಿಡಿದು ಮೀಸಲು ಅರಣ್ಯಕ್ಕೆ ಬಿಡಲಾಯಿತು . ಹೆಬ್ಬಾವು ಹಿಡಿಯು ಕಾರ್ಯಚರಣೆಯಲ್ಲಿ ಕಲ್ಲುಗುಂಡಿಯ ನಿವಾಸಿಗಳಾದ ಶರತ್ ಕೀಲಾರ್, ರಾಕೇಶ್ ಮತ್ತು ದಬ್ಬಡ್ಕ ಕಉಪ ವಲಯ ಅರಣ್ಯಾಧಿಕಾರಿ ಪಿ.ಜೆ ರಾಘವ ಹಾಗೂ ಸಿಬ್ಬಂದಿಗಳಾದ ಚಂದ್ರಪ್ಪ ಕಾರ್ತಿಕ್ ಹಾಗೂ...
ಸುಳ್ಯದ ಕಲ್ಲುಮುಟ್ಟು ನಿವಾಸಿಯಾಗಿರುವ ಮಹಿಳೆಗೆ ಕೊರೊನ ಭಾದಿಸಿದ್ದು ಜು.23 ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರು ಈ ಮೊದಲು ಪೆರ್ಲಂಪಾಡಿ ನಿವಾಸಿಯಾಗಿದ್ದರು. ಪಾಸಿಟಿವ್ ಬಂದ ಬಳಿಕ ಅನಾರೋಗ್ಯಕ್ಕೊಳಗಾಗಿದ್ದ ಮಂಗಳೂರಿನ ಯುನಿಟಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Loading posts...
All posts loaded
No more posts
