Ad Widget

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರೇಖಾ ಶೇಟ್

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ ಇಲ್ಲಿನ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೇಖಾ ಶೇಟ್ ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಪಟ್ಟಣ ಗ್ರಾಮದ ದಂಪತಿಗಳಾದ ಶಾಂತಾ ಎಸ್ ಶೇಟ್ ಮತ್ತು ಸರ್ವೋತ್ತಮ ಪಿ.ಶೇಟ್ ದಂಪತಿಗಳ ದ್ವಿತೀಯ ಪುತ್ರಿಯಾಗಿ ಜನಿಸಿದ ರೇಖಾರವರು ತಮ್ಮ...

ಸುಳ್ಯಕ್ಕೆ ಇಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಭೇಟಿ

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಯವರು ಇಂದು ಸುಳ್ಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅವರಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನ.ಪಂ.ಸದಸ್ಯ ವಿನಯ ಕುಮಾರ್ ಕಂದಡ್ಕ, ಮಾಜಿ ನ.ಪಂ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಜಿನ್ನಪ್ಪ ಪೂಜಾರಿ, ಸುಧಾಕರ, ಬೂಡು ರಾಧಾಕೃಷ್ಣ...
Ad Widget

ರಾಜ್ಯದಲ್ಲಿ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದ ಎಂಬಿ ಫೌಂಡೇಶನ್ ಸುಳ್ಯ ಇದರ ವಿದ್ಯಾಗಮ ಯೋಜನೆ

ಇಡೀ ವಿಶ್ವದಾದ್ಯಂತ ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಹಲವಾರು ರೀತಿಯ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಸವಾಲುಗಳನ್ನು ಇಡೀ ವಿಶ್ವವೇ ಎದುರಿಸುತ್ತಿದ್ದು ಈ ಬಾರಿಯ ಶೈಕ್ಷಣಿಕ ವರ್ಷವೂ ವಿದ್ಯಾರ್ಥಿಗಳ ಬಾಳಿನಿಂದ ದೂರ ಸರಿಯಲು ಆರಂಭಿಸಿದೆ. ಹಲವಾರು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಶೈಕ್ಷಣಿಕ ಕನಸುಗಳನ್ನು ಹೊತ್ತು ಮುಂದೇನು ಎಂಬ ದಾರಿಕಾಣದೆ ಪ್ರಸ್ತುತ ಪರಿಸ್ಥಿತಿಯನ್ನು...

ಬಿಜೆಪಿಯ ದಾವಣಗೆರೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮುಳುಗಾಡು

ಭಾರತೀಯ ಜನತಾ ಪಾರ್ಟಿ ದಾವಣಗೆರೆ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಜಯಪ್ರಕಾಶ್ ಮುಳುಗಾಡು ನಿಯುಕ್ತಿಗೊಂಡಿರುತ್ತಾರೆ. ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಮುಳುಗಾಡು ಚಂದ್ರಶೇಖರ ಹಾಗೂ ಪದ್ಮಾವತಿ ದಂಪತಿಗಳ ಪುತ್ರ. ಇವರು ಸುಳ್ಯದಲ್ಲಿ ಎಬಿವಿಪಿ ಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಎ.ವಿ.ತೀರ್ಥರಾಮ ಆಯ್ಕೆ

ಭಾರತೀಯ ಜನತಾ ಪಾರ್ಟಿಯ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಅಂಬೆಕಲ್ಲು ಎ.ವಿ.ತೀರ್ಥರಾಮ ರವರು ಆಯ್ಕೆಯಾಗಿದ್ದಾರೆ.

ಬೆಳಂದೂರು- ಪೆರುವಾಜೆ ಕಾಂಕ್ರೀಟಿಕೃತ ರಸ್ತೆಯನ್ನು ಉದ್ಘಾಟಿಸಿದ ಸಂಸದರು

ರೂ. 55 ಲಕ್ಷ ವೆಚ್ಚದಲ್ಲಿ ಶಾಸಕರ ಮಳೆಹಾನಿ ನಿಧಿಯಲ್ಲಿ ದುರಸ್ತಿಗೊಂಡ ಬೆಳಂದೂರು- ಪೆರುವಾಜೆ ಕಾಂಕ್ರೀಟಿಕೃತ ರಸ್ತೆಯ ಉದ್ಘಾಟನೆಯನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಶ್ರೀ ಎಸ್ ಅಂಗಾರ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ಶ್ರೀ ಹರೀಶ್ ಕಂಜಿಪಿಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀ...

ನಾರ್ಕೊಡು ಅಜ್ಜಾವರ ಪೇರಾಲು ಸಡಕ್ ರಸ್ತೆಗೆ ಸಂಸದರಿಂದ ಗುದ್ದಲಿಪೂಜೆ

ರೂ. 6.54 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಸುಳ್ಯ ತಾಲೂಕಿನ ನಾರ್ಕೊಡು- ಅಜ್ಜಾವರ- ಪೇರಾಲು ರಸ್ತೆ ಕಾಮಗಾರಿಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕ ಶ್ರೀ ಎಸ್ ಅಂಗಾರ, ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ...

ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ಎಸ್. ರೈ, ಕಾರ್ಯದರ್ಶಿ ತೇಜಸ್ವಿನಿ ಕಟ್ಟಪುಣಿ

ತೇಜಸ್ವಿನಿ ಕಟ್ಟಪುಣಿ ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ನೂತನ ಸಮಿತಿ ರಚನೆಯಾಗಿದ್ದು, ಇಂದು ಪದಗ್ರಹಣ ಸಮಾರಂಭ ನಡೆಯಿತು. ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಶುಭದಾ ಎಸ್. ರೈ, ಉಪಾಧ್ಯಕ್ಷೆಯರಾಗಿ ಸರೋಜಿನಿ ಬಿಳಿನೆಲೆ, ಜಯಂತಿ ಜಟ್ಟಿಪಳ್ಳ, ಮಾಲಿನಿ ಪ್ರಸಾದ್ ಬಾಳಿಲ, ಶಶಿಕಲಾ ಗುಂಡ್ಯಡ್ಕ , ಪ್ರ.ಕಾರ್ಯದರ್ಶಿ ತೇಜಸ್ವಿನಿ ಕಟ್ಟಪುಣಿ, ಕಾರ್ಯದರ್ಶಿಗಳಾಗಿ ಗೀತಾ ಯು.ಎಸ್. ಉಳುವಾರು, ತ್ರಿವೇಣಿ ಪಿ....

ಆ.27,28 ರಂದು ಕಡಬದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

ಆ.27,28 ರಂದು ಕಡಬದಲ್ಲಿ ಉಚಿತವಾಗಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ. ಕಡಬದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.00ರ ತನಕ ನಡೆಯಲಿದ್ದು, ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಆಸಕ್ತರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತರಬೇಕಾಗಿ ಬಿಜೆಪಿ ಮಂಡಲ ಸಮಿತಿ...

ಹಿರಿಯ ಪತ್ರಕರ್ತ ದಿ.ನಾರಾಯಣ ನಾಯ್ಕ ಅಮ್ಮುಂಜೆ ಕುಟುಂಬಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದಿಂದ ಆರ್ಥಿಕ ನೆರವು.

ಪುತ್ತೂರು : ಅಕಾಲಿಕವಾಗಿ ಇತ್ತೀಚಿಗೆ ಮೃತಪಟ್ಟ ಪುತ್ತೂರಿನ ಹಿರಿಯ ಪತ್ರಕರ್ತ ನಾರಾಯಣ ನಾಯ್ಕ ಅಮ್ಮುಂಜೆ ಕುಟುಂಬಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘ (ರಿ) ವತಿಯಿಂದ ಅರ್ಥಿಕ ಸಹಕಾರವನ್ನು ನೀಡಲಾಯಿತ್ತು. ಇಂದು ಅವರ ಮನೆಗೆ ತೆರಳಿದ ಸಂಘದ ಪದಾಧಿಕಾರಿಗಳು ಅರ್ಥಿಕ ನೆರವಿನ ಚೆಕ್ ಅನ್ನು ಕುಟುಂಬ ಸದಸ್ಯರಿಗೆ ವಿತರಿಸಿದರು.ನಾರಾಯಣ ನಾಯ್ಕ ಅಮ್ಮುಂಜೆಯವರು ಪುತ್ತೂರು ಪತ್ರಕರ್ತರ ಸಂಘದ ಹಾಲಿ...
Loading posts...

All posts loaded

No more posts

error: Content is protected !!