- Monday
- November 25th, 2024
ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಸುಳ್ಯ ಮಂಡಲ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಪ್ರಥಮ ಕಾರ್ಯಕಾರಿಣಿ ಸಭೆಯು ಸುಳ್ಯ ಬಿಜೆಪಿ ಕಛೇರಿಯಲ್ಲಿ ಇಂದು ಜರುಗಿತು.ಸಭೆಯಲ್ಲಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರುದತ್ ನಾಯಕ್, ಪ್ರ.ಕಾರ್ಯದರ್ಶಿ ಸುದರ್ಶನ ಬಿಸಿರೋಡ್, ಕಾರ್ಯದರ್ಶಿ ಸುಧಾಕರ್ ಧರ್ಮಸ್ಥಳ, ಸುಳ್ಯ ಮಂಡಲ ಪ್ರದಾನ...
ಮಾಹಿತಿ ಹಕ್ಕು ಕಾರ್ಯಕರ್ತ ಡಿ.ಎಂ.ಶಾರೀಕ್ ವೆನ್ಲಾಕ್ ಆಸ್ಪತ್ರೆಯ ಆಧಿಕಾರಿಗಳಿಗೆ ಪತ್ರ ಬರೆದು ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ, ಹಾಗೂ ಎಷ್ಟು ಖರ್ಚು ಆಗಿದೆ ಮತ್ತು ಸರಕಾರದಿಂದ ಎಷ್ಟು ಅನುದಾನ ಬಿಡುಗಡೆ ಯಾಗಿದೆ ಎಂದು ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕೋವಿಡ್ ರೋಗಿಗಳಿಗೆ ಟೆಸ್ಟ್ ಮತ್ತು ಎಲ್ಲಾ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ. ಚಿಕಿತ್ಸೆಯ ಉಪಕರಣಗಳ ಖರೀದಿಗೆ ರೂ...
2019-20 ನೇ ಸಾಲಿನ SSLC ಪರೀಕ್ಷೆಯಲ್ಲಿ 625/625 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಕಡಬ ತಾಲೂಕಿಗೆ ಕೀರ್ತಿ ತಂದ ಅನುಷ್ ಎ.ಎಲ್. ರನ್ನು ಎಸ್.ಕೆ.ಎಸ್.ಎಸ್.ಎಫ್. ತ್ವೌಲಬ ವಿಂಗ್ ಕಡಬ ಝೋನ್ (SKSSF TWALABA WING KADABA ZONE) ವತಿಯಿಂದ ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಕಡಬ ಝೋನ್ ಇದರ ಕೋಶಾಧಿಕಾರಿ ಆದಂ...
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಕೊರೋನಾ ಸೋಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಇದರಲ್ಲಿ ಹಲವಾರು ಮಂದಿ ಗುಣಮುಖರಾಗಿ ತೆರಳಿದ್ದಾರೆ. ಬಡವರು ಅಧಿಕ ಹಣವನ್ನು ಚಿಕಿತ್ಸೆಗಾಗಿ ವೆಚ್ಚ ಭರಿಸಲು ಸಾಧ್ಯವಾಗದೆ ಇರುವವರು ಸರ್ಕಾರಿ ಆಸ್ಪತ್ರೆಯನ್ನೇ ನಂಬಿರುತ್ತಾರೆ.ಆದರೆ ನಮ್ಮ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಯ ಸೋಲಾರ್ ನೀರಿನ ಟ್ಯಾಂಕ್ ಗಳು ಲಕ್ಷಾಂತರ ರೂಪಾಯಿಯ...
ಉದಾರತೆ, ಶಾಂತಿ ಶುಚಿತೆಗಳಲ್ಲಿ ಮಾನವೀಯತೆಯು ತುತ್ತ ತುದಿ ತಲುಪಿರುವ ಅನೇಕ ಋಷಿಮುನಿಗಳ ತಪೋ ಭೂಮಿ ಭಾರತ.ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ಭಾವಿಸಿ ಜನ್ಮ ಕೊಟ್ಟ ಇರಲು ನೆಲವಿತ್ತ ಭಾರತ ಮಾತೆಗೆ ಪ್ರಾಣವನ್ನೇ ಬಲಿದಾನ ಮಾಡಿ ಜೀವವನ್ನೇ ಭಾರತಾಂಬೆಯ ಸೇವೆಗೆ ಮುಡಿಪಾಗಿಟ್ಟ ವೀರ ಮಹಾತ್ಮರ ಭಗೀರಥ ಹೋರಾಟದ ಫಲವಾಗಿ ಪರರ ದಾಸ್ಯತನದ ಸಂಕೋಲೆಯಿಂದ ಬಿಡುಗಡೆ ಹೊಂದಿರುವ...
ನಾಳೆ (ಆ. 16) ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳ್ಯಕ್ಕೆ ಆಗಮಿಸಲಿದ್ದಾರೆ.ಬೆಳಗ್ಗೆ 11 ಕ್ಕೆ ತಾ.ಪಂ.ಸಭಾಂಗಣದಲ್ಲಿ ಮರಳು, ಆನೆ ಕಂದಕ ಮತ್ತಿತರ ವಿಷಯದ ಬಗ್ಗೆ ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ನಡೆಸಲಿದ್ದಾರೆ ಎಂದು ತಹಶಿಲ್ದಾರ್ ಅನಂತ ಶಂಕರ ತಿಳಿಸಿದ್ದಾರೆ.
ಕೊಡಗು ಮಡಿಕೇರಿ ಮೂಲದ ರೋಗಿಯೊಬ್ಬರನ್ನು ತುರ್ತಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಬೇಕು ದ,ಕ,ಜಿಲ್ಲೆಯಲ್ಲಿ ಸ್ವಲ್ಪ ಸಹಾಯ ಮಾಡಿ ಎಂಬಂತೆ ಸುಳ್ಯದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರಿಗೆ ಬಂದ ಬೇಡಿಕೆಯನ್ನು ಅನುಸರಿಸಿ ಸುಳ್ಯ ಮೂಲಕ ತುರ್ತು ವಾಹನ ಹಾದುಹೋಗಲು ಪಣತೊಡುತ್ತಾರೆ.ಶರೀಫ್ ರವರು ತಕ್ಷಣ ಸುಳ್ಯ ವಿಕಾಯ ಸಂಘಟನೆಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿಯವರಿಗೆ ಮಾಹಿತಿ ನೀಡಿ ತುರ್ತಾಗಿ ಒಂದು...
ಮಡಿಕೇರಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯೊಬ್ಬರಿಗೆ ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗುತ್ತಿದ್ದು, ಮದ್ಯಾಹ್ನ 2.30 ರ ಸಮಯಕ್ಕೆ ಮಡಿಕೇರಿಯಿಂದ ಮಂಗಳೂರಿಗೆ ಆಂಬುಲೆನ್ಸ್ ಹೊರಟಿದೆ. 3.20 ಕ್ಕೆ ಆಂಬುಲೆನ್ಸ್ ಸುಳ್ಯ ತಲುಪಲಿದ್ದು, ಸುಳ್ಯದ ಜನತೆ ಜೀರೋ ಟ್ರಾಫಿಕ್ ಮಾಡಿ ಅಂಬ್ಯುಲೆನ್ಸ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ...
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ವತಿಯಿಂದ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಇವರ ಮಾತೃಶ್ರೀ ವನಜಾಕ್ಷಿ ಜಯರಾಮ ಇವರ ಸ್ಮರಣಾರ್ಥ ನೀಡುವ 7ನೇ ವರ್ಷದ ವನಜ ರಂಗಮನೆ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿಯನ್ನು ಅಗಸ್ತ್ 28 ರಂದು ಪ್ರಸ್ತುತ ಅವರು ವಾಸವಿರುವ,ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ ಮನೆಯಲ್ಲಿ ನೀಡಲು...
ಹರಿಹರ,ಕೊಲ್ಲಮೊಗ್ರ ಮತ್ತು ಕಲ್ಮಕಾರು ಊರಿನ ಮುಖಂಡರು ಮತ್ತು ರಾಜಕೀಯ ನಾಯಕರ ಸಭೆ ಆ.14 ರಂದು ಅಪರಾಹ್ನ 2 ಗಂಟೆಗೆ ಕೊಲ್ಲಮೊಗ್ರದಲ್ಲಿ ನಡೆಯಲಿದೆ ಎಂದು ಹೋರಾಟದ ಸಂಚಾಲಕ ಉದಯ ಶಿವಾಲ ತಿಳಿಸಿದ್ದಾರೆ.ಸುಬ್ರಹ್ಮಣ್ಯದಲ್ಲಿ 300 ಮೀಟರ್ ನಷ್ಟು ಕೇಬಲ್ ಅಳವಡಿಕೆ ಪ್ರಕ್ರಿಯೆ ಮಾತ್ರ ಬಾಕಿ ಇದ್ಡು ಇದಕ್ಕೆ ಒಂದು ತಿಂಗಳಿಂದ ಕೆಲವೊಂದು ತೊಡಕುಗಳು ಉಂಟಾಗಿದೆ. ನಮ್ಮ ಐದು ಗ್ರಾಮಗಳು...
Loading posts...
All posts loaded
No more posts