ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ “ವಾಯ್ಸ್ ಅಂಡ್ ವಿಷನ್” ತರಬೇತಿ ಕಾರ್ಯಕ್ರಮ ಮತ್ತು ಶಾರದಾ ಪೂಜೆ

ಸರಕಾರಿ ನೇಮಕಾತಿಗಳು, ಬ್ಯಾಂಕಿಂಗ್, ಸಶಸ್ತ್ರ ಪಡೆಗಳ ನೇಮಕಾತಿ, ಖಾಸಗಿ ಉದ್ಯೋಗ, ಕೌಶಲ್ಯ ತರಬೇತಿ ನೀಡುವ ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ ವಾಯ್ಸ್ ಅಂಡ್ ವಿಷನ್ ಎಂಬ ಭಾಷಣ ಕಲೆ ಮತ್ತು ನಾಯಕತ್ವ ವೃದ್ಧಿಯನ್ನು ಸಂಯೋಜಿಸುವ ಕಾರ್ಯಕ್ರಮವನ್ನು ಅ. 12 ರಿಂದ 14ರವರೆಗೆ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಆಲೋಚನಾ ಶಕ್ತಿ, ಭವಿಷ್ಯದ ದೃಷ್ಟಿಕೋನ, ಮಾತುಗಾರಿಕೆಗಳನ್ನು...

“ಯುವಕರಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಲು ಯುವ ಸಂಸತ್ತು ಮಾದರಿ” : ತಹಶೀಲ್ದಾರ್ ಮಂಜುಳಾ ಎಂ

ಯುವಜನತೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಹಾಗೂ ಸಂಸದೀಯ ವ್ಯವಸ್ಥೆಯ ಕಾರ್ಯವೈಖರಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಯುವ ಸಂಸತ್ತು-2026 ಕಾರ್ಯಕ್ರಮ ಅ. 16ರಂದು ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ...
Ad Widget

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಸೈಬರ್ ಕ್ರೈಂ ಮತ್ತು ಮನಿ ಮ್ಯೂಲ್ ಕುರಿತು ಜಾಗೃತಿ ಕಾರ್ಯಕ್ರಮ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ 'ಕೆನರಾ ಸ್ಮಾರ್ಟ್ ಝೆಡ್ - ಸೈಬರ್ ಕ್ರೈಮ್ ಮತ್ತು ಮನಿ ಮ್ಯೂಲ್' ಕುರಿತು ಜಾಗೃತಿ ಕಾರ್ಯಕ್ರಮವು ಅ. 15 2026 ರಂದು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ನ ಸಹಯೋಗದೊಂದಿಗೆ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರು ಡಾ. ಲೀಲಾಧರ್ ಡಿ ವಿ ಅವರು...

ನೆಟ್ಟಾರು ಶಾಲೆಯಲ್ಲಿ ಅ. 25ರಂದು ಸ್ನೇಹ ಸಂಗಮ ಕ್ರೀಡಾ ಸಂಭ್ರಮ

ನೆಟ್ಟಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಟ್ಟಾರು ಇದರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಕ್ಟೋಬರ್ 25ರ ಭಾನುವಾರ ಶಾಲಾ ವಠಾರದಲ್ಲಿ ಸ್ನೇಹ ಸಂಗಮ ಕ್ರೀಡಾ ಸಂಭ್ರಮ–2026 ಆಯೋಜಿಸಲಾಗಿದೆ.ಹಳೆ ವಿದ್ಯಾರ್ಥಿಗಳ ಸ್ನೇಹ-ಸೌಹಾರ್ದವನ್ನು ಗಟ್ಟಿಗೊಳಿಸುವುದು, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ಒಗ್ಗೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಕ್ರಿಕೆಟ್, ವಾಲಿಬಾಲ್,...

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕ ಶಿವಪ್ರಸಾದ್ ಜಿ.ಎಸ್. ಹೃದಯಾಘಾತದಿಂದ ನಿಧನ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಶಿವಪ್ರಸಾದ್ ಜಿ.ಎಸ್. ರವರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ವರದಿಯಾಗಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಜ್ವರದಿಂದ ಬಳಲುತ್ತಿದ್ದ ಅವರಿಗೆ ಮುಂಜಾನೆ 2ರ ಸುಮಾರಿಗೆ ಎದೆನೋವು ಕಾಣಿಸಿತೆಂದು, ಮನೆಯವರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಸುಳ್ಯ ಉಬರಡ್ಕ ಹುಳಿಯಡ್ಕ ನಿವಾಸಿಯಾಗಿರುವ ಶಿವರಾಮರವರ ಪುತ್ರ ಶಿವ...

ಎನ್ನೆಂಸಿ : ವಾರ್ಷಿಕ ಕ್ರೀಡೋತ್ಸವ 2026 ; ಸುವರ್ಣ ಸಂಭ್ರಮದ ವರ್ಷಕ್ಕೆ ವಿಶೇಷ ಮೆರುಗು

ಸುಳ್ಯ ಅ.13: ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಅಕ್ಟೋಬರ್ 13 ಮಂಗಳವಾರದಂದು ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಎನ್.ಎಂ.ಸಿ.ಯ ಹಿರಿಯ ವಿದ್ಯಾರ್ಥಿ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ಉದ್ಘಾಟಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಕ್ರೀಡೋತ್ಸವಕ್ಕೆ ಶುಭಹಾರೈಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಸಂಭ್ರಮ...

ಅಡಿಕೆ ರೋಗಗಳ ಪತ್ತೆ ಮತ್ತು ವರ್ಗೀಕರಣ ಕುರಿತು ಸಂಶೋಧನೆ | ಪ್ರಮೋದ್ ಕುಮಾರ್ ಪಿ.ಎಂ. ಅವರಿಗೆ ಪಿಎಚ್.ಡಿ.

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಉಪನ್ಯಾಸಕ ಪ್ರಮೋದ್ ಕುಮಾರ್ ಪಿ.ಎಂ. ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ತಿಪಟೂರಿನ ಕಲ್ಪತರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್) ವಿಭಾಗದ ಮುಖ್ಯಸ್ಥ ಡಾ. ರವಿಪ್ರಕಾಶ್ ಎಂ.ಎಲ್. ಅವರ ಮಾರ್ಗದರ್ಶನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು)...

“ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮ ಖಂಡನೀಯ, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ” : ಶ್ರೀಕಾಂತ್ ಮಾವಿನಕಟ್ಟೆ

"ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿರುವುದು ಅವರ ಹಬ್ಬದ ಸಂಭ್ರಮ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿದರೆ ವಿದ್ಯಾರ್ಥಿಗಳು ಹಬ್ಬವನ್ನು ಹೇಗೆ ಸಂಭ್ರಮಿಸಲು ಸಾಧ್ಯ" ಎಂದು ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಸುಳ್ಯ ಮಂಡಲದ ಅಧ್ಯಕ್ಷ ಶ್ರೀಕಾಂತ್...

ಕರಾವಳಿಯ ಯುವಜನತೆಯ ಉದ್ಯೋಗ ಸ್ವಪ್ನಕ್ಕೆ ‘ವಿದ್ಯಾಮಾತಾ’ ಆಸರೆ : ಬರಿ ಅಂಕಗಳಷ್ಟೇ ಅಲ್ಲ, ಬದುಕನ್ನು ಗೆಲ್ಲುವ ಕೌಶಲ್ಯವೇ ನಿಜವಾದ ಶಕ್ತಿ

ಪುತ್ತೂರು : ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಕರಾವಳಿ ಭಾಗದಲ್ಲಿ ಪದವೀಧರರ ಮಹಾಪೂರವಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿವಿಲ್ ಸರ್ವೀಸಸ್ ಹಾಗೂ ರಕ್ಷಣಾ ಪಡೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಭಾಗದ ಯುವಕರ ಭಾಗವಹಿಸುವಿಕೆ ಹಿಂದಿನಿಂದಲೂ ಕಡಿಮೆಯಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಉದ್ಯೋಗಗಳು ಅಥವಾ ಗಲ್ಫ್ ದೇಶಗಳ ವಲಸೆಗೆ ಸೀಮಿತರಾಗಿದ್ದರು. ಸ್ಪರ್ಧಾತ್ಮಕ ಜಾಗೃತಿಯಿಲ್ಲದ ಇಂತಹ ವಾತಾವರಣದಲ್ಲೂ ದಕ್ಷಿಣ...

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಸಂಘದ ವತಿಯಿಂದ “ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ಉದಯೋನ್ಮುಖ ಕೌಶಲ್ಯಗಳು ಹಾಗೂ ವೃತ್ತಿ ಅವಕಾಶಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಅಕ್ಟೋಬರ್ 09ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ವಹಿಸಿದ್ದರು. ಕರ್ನಾಟಕ ಬ್ಯಾಂಕ್‌...
Loading posts...

All posts loaded

No more posts

error: Content is protected !!