- Saturday
- April 19th, 2025

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ. 26ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ಜರಗಲಿರುವುದು. ಏ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪಂಚವಿಂಶತಿ, ಕಲಶಪೂಜೆ, ಮಧ್ಯಾಹ್ನ ಶ್ರೀದೇವರಿಗೆ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ....

ದೇವಚಳ್ಳ ಗ್ರಾಮದ ತಳೂರು ಶ್ರೀ ರಾಜ್ಯದೈವ ಪುರುಷದೈವ ದೈವಸ್ಥಾನದ ಜಾತ್ರೋತ್ಸವ ಏ.7 ರಿಂದ ಏ.8ವರೆಗೆ ನಡೆಯಲಿದೆ.ಏ.7ರಂದು ರಾತ್ರಿ 7 ಗಂಟೆಯಿಂದ ತಳೂರು ಅಂಗನವಾಡಿ ಪುಟಾಣಿಗಳಿಂದ, ತಳೂರು-ಮೆತ್ತಡ್ಡ ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲ ತಳೂರು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಲರವ, ರಾತ್ರಿ 9.30ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ...

ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ವತಿಯಿಂದ ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಿತು. ಮಾ.19 ರಂದು ಸಂಜೆ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯಲಾಯಿತು. ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಿತು. ಮಾ.20 ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ...

ಐತಿಹಾಸಿಕ ಹಿನ್ನೆಲೆಯುಳ್ಳ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವವು ಮಾ. 17 ರಂದು ಅತ್ಯಂತ ವೈಭವದಿಂದ ಜರುಗಿತು. ಮಾ. 15 ರಂದು ಮಹಾಗಣಪತಿ ಹವನ, ರಾತ್ರಿ 7 ಗಂಟೆಗೆ ಎಣ್ಮೂರು ಬೀಡಿನಿಂದ ಉಳ್ಳಾಕುಲು ಭಂಡಾರ ಹೊರಟು, ಬಳಿಕ ಉಳ್ಳಾಕುಲು ಮತ್ತು ಕಾಜುಕುಜುಂಬ ನೇಮ, ಕೈಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಾ. 16...

ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ವತಿಯಿಂದ ಕಳಂಜ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಲಿದೆ.ಮಾ.19 ರಂದು ಸಂಜೆ ಗಂಟೆ 6.00 ಕ್ಕೆ ಸ್ಥಾನದಿಂದ ಭಂಡಾರ ತೆಗೆಯುವುದು.ರಾತ್ರಿ ಗಂಟೆ 7.30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ಗಂಟೆ 9.00 ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 11.00 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಲಿದೆ.ಮಾ.20...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾ.14(ನಾಳೆ) ಸೋಮವಾರದಂದು ರಾತ್ರಿ ಗಂಟೆ 8.00ಕ್ಕೆ ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯಲಿದೆ. ಅಗೇಲು ಸೇವೆ ಮಾಡಿಸುವ ಭಕ್ತಾದಿಗಳು ಒಂದು ದಿನ ಮುಂಚಿತವಾಗಿ ತಿಳಿಸುವಂತೆ ವಿನಂತಿಸಲಾಗಿದೆ. ಅದೇ ದಿನ ಸಂಜೆ ಗಂಟೆ 5.00ಕ್ಕೆ ಶ್ರೀ ಉಳ್ಳಾಕುಲು, ಮೈಷಂತಾಯ ದೈವಗಳಿಗೆ ಪೇರಾರ್ಚನೆ ಹಾಗೂ ಶ್ರೀ ಪಿಲಿಭೂತ ದೈವಕ್ಕೆ ತಂಬಿಲ...

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು – ಬೆಳ್ಳಾರೆಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಮಾ.14 ಮತ್ತು ಮಾ.15 ರಂದು ನಡೆಯಲಿದ್ದು ಆ ಪ್ರಯುಕ್ತ ಮಾ.5 ರಂದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು ಆಮಂತ್ರಣ ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್...

ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ , ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಾ.04 ರಂದುಶ್ರೀ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ 20ನೇ ವರ್ಷದ ಏಕಾಹ ಭಜನೆ ಆರಂಭಗೊಂಡಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪ್ರಾರ್ಥನೆಯೊಂದಿಗೆ ಸಹ ಅರ್ಚಕ ರಾಮಚಂದ್ರ ಶಬರಾಯ ದೀಪ ಬೆಳಗಿಸಿದರು....

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಮಾ.01ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದ್ದು, ಸಂಜೆ ಗಂಟೆ 6.00ರಿಂದ ಶತರುದ್ರಾಭಿಷೇಕ, ರಂಗಪೂಜೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.00ರಿಂದ ರಾಮ ಜೋಯಿಸ ಬೆಳ್ಳಾರೆಯವರ ಸಂಯೋಜನೆಯಲ್ಲಿ ಪ್ರಸಿದ್ಧ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆಯಲ್ಲಿ "ಜಾಂಬವತಿ ಕಲ್ಯಾಣ" ಯಕ್ಷಗಾನ ಬಯಲಾಟ ನಡೆಯಲಿದೆ. ಮುಮ್ಮೇಳದಲ್ಲಿ ತೆಂಕುತಿಟ್ಟಿನ...

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.01ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದ್ದು ಈ ಪ್ರಯುಕ್ತ ದೇವಳದಲ್ಲಿ ಸಂಜೆ ಗಂಟೆ 5.00ರಿಂದ ಶತರುದ್ರಾಭಿಷೇಕ, ರಾತ್ರಿ ಗಂಟೆ 9.30ಕ್ಕೆ ಮಹಾಪೂಜೆ ನಡೆಯಲಿರುವುದು. ನಂತರ ರಾತ್ರಿ ಗಂಟೆ 10.00ರಿಂದ ಅಮ್ಮ ಕಲಾವಿದರು ಕುಡ್ಲ ಅಭಿನಯಿಸುವ ಶಿವಾನಂದ ಶೆಟ್ಟಿ ಸಾರಥ್ಯದ ಕುಸಲ್ದರಸೆ ನವೀನ್.ಡಿ ಪಡೀಲ್ ಇವರ ಸಲಹೆ ಸಹಕಾರದೊಂದಿಗೆ ಸೋಮನಾಥ ಶೆಟ್ಟಿ...

All posts loaded
No more posts