- Saturday
- June 13th, 2026
ದೇವಚಳ್ಳ ಗ್ರಾಮದ ಚಳ್ಳದಲ್ಲಿ ನಿರ್ಮಾಣವಾಗಲಿರುವ ಸುಮಾರು 400 ವರ್ಷಗಳ ಇತಿಹಾಸವಿರುವ ಪಂಚ ಶಕ್ತಿ ಕೇಂದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು ದೈವಗಳ ಕ್ಷೇತ್ರದಲ್ಲಿಂದು ಬಾಲಾಲಯ ಪ್ರತಿಷ್ಠೆ ನಡೆಯಿತು. ಬ್ರಹ್ಮಶ್ರೀ ವೇ। ಮೂ। ತಂತ್ರಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯರ ನೇತೃತ್ವದಲ್ಲಿ ಬಾಲಾಲಯ ಪ್ರತಿಷ್ಠೆ, ವರುಣ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಟ್ರಸ್ಠ್ ನ ಅಧ್ಯಕ್ಷ ಚಂದ್ರಶೇಖರ...
ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ಇದರ ವತಿಯಿಂದ 38ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವವು ವಿಜೃಂಭಣೆಯಿಂದ ಅ.02ರಂದು ಬೆಳ್ಳಾರೆ ಮೇಲಿನ ಪೇಟೆ ಅಚಲಾಪುರ ಕಟ್ಟೆಯಲ್ಲಿ ಜರುಗಿತು. ಬೆಳಿಗ್ಗಿನಿಂದ ಸಂಜೆಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ಸಂಜೆ ವಾಹನಗಳಿಗೆ ಪೂಜೆ ನಡೆಯಿತು. ಮುಸ್ಸಂಜೆ ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ತುಳುನಾಡ ಗಾನಗಂಧರ್ವ...
ಅಜ್ಜಾವರ : ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆ ಆಚರಣೆ ನಡೆಯಿತು.ಬೆಳಗ್ಗೆ 9:00 ಗಂಟೆಗೆ ಶ್ರೀ ಮುತ್ತು ಮಾರಿಯಮ್ಮ ದೇವಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಪ್ರಸಾದ ವಿತರಣೆ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ 7:00ಗಂಟೆಗೆ ವಿಶೇಷ ಅಲಂಕಾರ ಪೂಜೆ ಹಾಗೂ ವಾಹನಗಳಿಗೆ...
ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ಇದರ ವತಿಯಿಂದ 38ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.02ರಂದು ಬೆಳ್ಳಾರೆ ಮೇಲಿನ ಪೇಟೆ ಅಚಲಾಪುರ ಕಟ್ಟೆಯಲ್ಲಿ ಜರುಗಲಿದೆ.ಬೆಳಿಗ್ಗೆ ಘಂಟೆ 10:00ರಿಂದ ಸಂಜೆ 4:00ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಸಂಜೆ 4:00 ಘಂಟೆಯಿಂದ 6:00ರ ವರೆಗೆ ವಾಹನ ಪೂಜೆ ನಡೆಯಲಿದೆ.ಸಂಜೆ 6:00ರಿಂದ ಕಲರ್ಸ್ ಕನ್ನಡ ಖ್ಯಾತಿಯ,...
ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುಧ ಪೂಜೆಯನ್ನು ಅ.01ರಂದು ಅರ್ಚಕರಾದ ಶ್ರೀ ನಾರಾಯಣ ಭಟ್ ರವರ ನೇತೃತ್ವದಲ್ಲಿ ನಡೆಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಲೀಲಾಧರ ಡಿ.ವಿ ಅವರ ನೇತೃತ್ವದಲ್ಲಿ ಪೂಜಾ ಆರಂಭಗೊಂಡು ಬಳಿಕ ಸಂಸ್ಥೆಯ ಎಲ್ಲಾ ವಿಭಾಗಗಳಿಗೂ, ವಾಹನಗಳಿಗೂ ಆಯುಧ ಪೂಜೆ ನಡೆಯಿತು.ನಂತರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ...
ಸುಬ್ರಹ್ಮಣ್ಯ : "ಯುವ ಜನಾಂಗದಲ್ಲಿ ಕಲಾ ಸಂಸ್ಕೃತಿಯ ಔನತ್ಯಕ್ಕೆ ಉತ್ಸವಗಳು ಅಡಿಗಲ್ಲಾಗಿದೆ. ಆಧುನಿಕ ಜನತೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಂಬಿಸುವ ಕಲಾ ಪ್ರಾಕಾರಗಳತ್ತ ಆಕರ್ಷಿತರಾಗಲು ಹಬ್ಬಾಚರಣೆಗಳು ಪ್ರೇರಣೆಯಾಗುತ್ತದೆ. ಅಲ್ಲದೆ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯೂ ಆಚರಣೆಗಳಿಂದ ದೊರಕುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಆನಂದ ನೀಡುವುದು ಮಾತ್ರವಲ್ಲದೆ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಸ್ಪೂರ್ತಿಯಾಗುತ್ತದೆ” ಎಂದು...
ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಸೆ.21 ರಿಂದ ಪ್ರಾರಂಭಗೊಂಡಿದ್ದು, ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ವತಿಯಿಂದ ಕರಸೇವೆ ನಡೆಯಿತು.ರವಿವಾರ ರಾತ್ರಿ ರಥಬೀದಿಯ ಒಂದು ಬದಿಯಲ್ಲಿ ಬಂಟಿಂಗ್ಸ್ ಅಳವಡಿಕೆ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಶ್ರೀ ಕ್ಷೇತ್ರ ಬಸವನ ಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೆ.25 ಗುರುವಾರದಂದು ಬೆಳಿಗ್ಗೆ 8:00 ಗಂಟೆಯಿಂದ “ತೆನೆ ಮುಹೂರ್ತ(ನವಾನ್ನ)” ಹಾಗೂ “ಸಾಮೂಹಿಕ ಚಂಡಿಕಾ ದುರ್ಗಾ ಹವನ” ನಡೆಯಲಿದ್ದು, ರಾತ್ರಿ 6:00 ಗಂಟೆಯಿಂದ “ಶ್ರೀ ದುರ್ಗಾ ಪೂಜೆ ನಡೆಯಲಿದ್ದು, ಆ ಪ್ರಯುಕ್ತ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು...
ಮಲೆನಾಡಿನ ಪ್ರಕೃತಿ ಆರಾಧನೆ ಸಂಸ್ಕೃತಿಯ ಉಳಿವಿಗಾಗಿ ಪ್ರತೀ ವರ್ಷವೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ನಡೆಯುತ್ತಿರುವ “ನದಿ ಪೂಜನಾ ಕಾರ್ಯಕ್ರಮ”ವು ಸೆ.22 ಸೋಮವಾರದಂದು ಬೆಳಿಗ್ಗೆ 10:30ಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
Loading posts...
All posts loaded
No more posts
