- Sunday
- March 8th, 2026
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿಯವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ, ಸನತ್ ಮುಳುಗಾಡು, ಉಷಾ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಉಪಸ್ಥಿತರಿದ್ದರು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಫೆ.1 ಮತ್ತು 2 ರಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಜ. 25 ರಂದು ಶ್ರೀ ದೇವರಿಗೆ ಮತ್ತು ದೈವಗಳಿಗೆ ಗೊನೆ ಮುಹೂರ್ತ ನೆರವೇರಿದ್ದು, ಫೆ. 01 ರಂದು ಬೆಳಿಗ್ಗೆ ಗಂಟೆ 8-00ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಗಂಟೆ 12-00ಕ್ಕೆ ನವ...
ಗುತ್ತಿಗಾರು ಗ್ರಾಮದ ಪೈಕ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ದಲ್ಲಿ (ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಸ್ಥಳ) ಜ. 19ರಂದು ಬೆಳಿಗ್ಗೆ 9-10ರಿಂದ 9-56ರರೊಳಗಿನ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೇಶ್ವರ ಪದ್ಮನಾಭ...
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.08 ರಿಂದ 10 ರವರೆಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಹಿರಿಯರಾದ ಬೆಳ್ಯಪ್ಪ ಗೌಡ ಮಡ್ತಿಲ ರವರು ಇಂದು ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿಕೋಡಿ ಹಾಗು ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾಭಿಮಾನಿಗಳು, ಅರ್ಚಕರು ಹಾಗೂ ಸಿಬ್ಬಂದಿಗಳು...
ಚಿತ್ರ : ಶಾಂತಲಾ ಸುಬ್ರಹ್ಮಣ್ಯಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ ೫೪ನೇ ವರ್ಷದ ಗಣೇಶೋತ್ಸವವು ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಜರುಗಿತು. ಈ ಧಾರ್ಮಿಕ ಕಾರ್ಯವು ಶ್ರೀ ಗಣಪತಿ ಶೋಭಾಯಾತ್ರೆ ಮೂಲಕ ಶುಕ್ರವಾರ ಸಂಪನ್ನಗೊAಡಿತು. ರಾತ್ರಿ ಪುಣ್ಯನದಿ ಕುಮಾರಧಾರದಲ್ಲಿ ಪುರೋಹಿತರು ವೈಧಿಕ ವಿದಿವಿಧಾನಗಳನ್ನು ನೆರವೇರಿಸಿದ ಬಳಿಕ ಶ್ರೀ...
ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಅಮರ ಸಂಘಟನ ಸಮಿತಿ (ರಿ) ಸುಳ್ಯ ಹಾಗೂ ನಾಗ ಸಾನಿಧ್ಯ- ಗುಳಿಗ ಸಾನಿಧ್ಯ ಪರಿವಾರ ಮರ್ಕಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ 5 ನೇ ವರ್ಷದ 'ಕಂಡಡೂಂಜಿ ದಿನ'' ಕಾರ್ಯಕ್ರಮ ವನ್ನು ಮರ್ಕಂಜದ ಪನ್ನೆಬೈಲಿನಲ್ಲಿ ಜುಲೈ 7ರಂದು ರೋಟರಿ ಪಿಯುಸಿಯ ವಿದ್ಯಾರ್ಥಿಗಳಿಗೆ ನಡೆಸಲಾಯಿತು.ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ...
*ದೇವಳದಲ್ಲಿ ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ* ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ, ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ, ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎ.10 ಮತ್ತು ಎ.11 ರಂದು ನಡೆಯಲಿದೆ.ಎ.10ರಂದು ರಾತ್ರಿ ಗಂಟೆ 7.00ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನ...
ಎಡಮಂಗಲ ಗ್ರಾಮದ ಜಾಲ್ತಾರು ಕೊಲ್ಲರ್ನೂಜಿ ಕುಟುಂಬದ ತರವಾಡು ಮನೆಯಲ್ಲಿ ಕೊಲ್ಲರ್ನೂಜಿ ಕುಟುಂಬಸ್ಥರ ಧರ್ಮದೈವ ಮತ್ತು ಉಪದೈವಗಳ ಧರ್ಮನಡಾವಳಿಯು ಮಾ.24 ಹಾಗೂ ಮಾ.25ರಂದು ಜರುಗಿತು. ಧರ್ಮನಡಾವಳಿಯ ಪ್ರಯುಕ್ತ ಮಾ.24ರಂದು ಬೆಳಗ್ಗೆ ಗಣಹೋಮ ನೆರವೇರಿತು. ಸಂಜೆ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಸತ್ಯದೇವತೆ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಧರ್ಮದೈವ ರುದ್ರಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಮಾ.01 ಶುಕ್ರವಾರ ಸೂರ್ಯೋದಯದಿಂದ ಮಾ.02 ಶನಿವಾರ ಸೂರ್ಯೋದಯದವರೆಗೆ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ 22ನೇ ವರ್ಷದ ಏಕಾಹ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.
Loading posts...
All posts loaded
No more posts
