- Friday
- April 11th, 2025

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನಡೆಯುತ್ತಿದ್ದು ಇಂದು ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ ನಡೆಯಿತು. ರಾತ್ರಿ ದೇವಸ್ಥಾನದಲ್ಲಿ ಶ್ರೀದೇವರ ಪೂಜೆ ನಡೆದು ಬಳಿಕ ಅಚಲಾಪುರ ಕಟ್ಟೆಯವರೆಗೆ ದೇವಸ್ಥಾನದ ವತಿಯಿಂದ ನಿರ್ಮಿಸಲಾದ ನೂತನ ಲಾಲ್ಕಿಯಲ್ಲಿ ಶ್ರೀ ದೇವರ ವೈಭವದ ಉತ್ಸವ ಮೆರವಣಿಗೆ ನಡೆಯಿತು. ಬಳಿಕ ಅಚಲಾಪುರ ಕಟ್ಟೆಯಲ್ಲಿ...

ನಾಲ್ಕೂರು ಗ್ರಾಮದ ಹಲ್ಗುಜಿ ಶ್ರೀ ಶಿರಾಡಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು 2022 ರ ಜ.13 ರಿಂದ ಜ.16 ರವರೆಗೆ ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ಅ.27 ರಂದು ನಡೆಯಿತು. ಇದೇ ಸಂದರ್ಭದಲ್ಲಿ ಶಿಲ್ಪಿ ವೆಂಕಟ್ರಮಣ ಮರ್ಕಂಜ ಅವರು ದಾರಂದ ಮಹೂರ್ತ ಕಾರ್ಯಕ್ರಮ ನೆರವೇರಿಸಿದರು.ಈ ಸಂದರ್ಭದಲ್ಲಿ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಗಳಿದ್ದು ವಿವಿಧ...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಉದ್ಯೋಗದಲ್ಲಿರುವ ಯತೀಶ್ ಕಾನಾವುಜಾಲು ಅವರು ಶ್ರೀ ಕ್ಷೇತ್ರಕ್ಕೆ ಪ್ರಿಂಟರ್ ಕೊಡುಗೆಯಾಗಿ ನೀಡಿದರು. ಹಸ್ತಾಂತರ ಸಂದರ್ಭದಲ್ಲಿ ಪೆರುವಾಜೆ ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ ಪೆರುವಾಜೆ, ಕಾರ್ಯದರ್ಶಿ ವಸಂತ ಪೆರುವಾಜೆ, ಯಶವಂತ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಮಡಪ್ಪಾಡಿಒಕ್ಕೂಟದ ಬಾಳಿಕಳ ಬೂಡು ಉಳ್ಳಾಕುಲು ಮತ್ತು ಪದ್ಮಾಂಬ ದೇವಿ ಹಾಗೂ ಪರಿವಾರ ದೈವಗಳ ದೈವ ಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಸಹಾಯಧನ 1ಲಕ್ಷ ಮಂಜೂರು ಮಾಡಿದ್ದು ಮಂಜೂರಾದ ರೂ.1,00,000/- ಮೊತ್ತದ ಡಿಡಿ ಯನ್ನು ತಾಲೂಕಿನ...

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನವರಾತ್ರಿ ಪೂಜೆ ಹಾಗೂ ಆಯುಧ ಪೂಜಾ ಕಾರ್ಯಕ್ರಮ ಅ.14 ರಂದು ನಡೆಯಲಿದೆ. ಅ.14 ರಂದು ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ, 8.00 ರಿಂದ ಭಜನಾ ಕಾರ್ಯಕ್ರಮ, ಬೆಳಿಗ್ಗೆ 9.30 ರಿಂದ ನವರಾತ್ರಿ ಪೂಜೆ ಪ್ರಾರಂಭ, ಮಧ್ಯಾಹ್ನ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ ಎಂದು ಸಾರ್ವಜನಿಕ ಆಯುಧ ಪೂಜಾ...

ಇತಿಹಾಸ ಪ್ರಸಿದ್ದವಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಿಂದೂ ದಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವಂತಹ ವಸ್ತ್ರಗಳನ್ನು ಧರಿಸಿಕೊಂಡು ದೇಗುಲ ಪ್ರವೇಶಿಸುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟುಮಾಡುತ್ತಿದೆ. ಆದ್ದರಿಂದ ಶೀಘ್ರವೇ ದೇವಸ್ಥಾನದ ಆಡಳಿತ ಮಂಡಳಿಯು ಹಿಂದೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ಭಕ್ತಾದಿಗಳಿಗೆ ಸೂಚನೆಯನ್ನು ನೀಡಬೇಕಾಗಿ ವಿನಂತಿ ಹಾಗೂ ಪಾಶ್ಚಿಮಾತ್ಯ ಹಾಗೂ ದೇಹದ ಅಂಗಾಂಗಳನ್ನು...

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ ಭಕ್ತಿಗೀತೆಯನ್ನು ಸೆ.10 ರ ಗಣೇಶ ಚತುರ್ಥಿ ಹಬ್ಬದ ದಿನದಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಯಂತ್ ನಾಯ್ಕ್ ಎಲ್ಲಪಡ್ಕ, ಗಿರೀಶ್ ಕಾಂತುಕುಮೇರಿ, ಸಂತೋಷ್ ನಾಯ್ಕ್ ಗಡಿಕಲ್ಲು, ಶ್ರೀಕಾಂತ್ ಪಂಜ, ಗಣೇಶ್ ಮಂಚಿಕಟ್ಟೆ, ರಾಮಣ್ಣ ಮಂಚಿಕಟ್ಟೆ, ದಯಾನಂದ ಏನೆಕಲ್ಲು,...

ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ...

ಕಾಯರ್ತೋಡಿ ಶ್ರೀ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷರಾಗಿ ವಾಸುದೇವ ಬೆಳ್ಳಿಪ್ಪಾಡಿ, ಕಾರ್ಯದರ್ಶಿಯಾಗಿ ಶೇಷಪ್ಪ ನಾಯ್ಕ ಪರಿವಾರಕಾನ, ಕೋಶಾಧಿಕಾರಿಯಾಗಿ ವಸಂತ ಬಿಳಿಯಾರು, ಉಪಾಧ್ಯಕ್ಷರಾಗಿ ವೆಂಕಟ್ರಮಣ ದೇಂಗೋಡಿ, ವೆಂಕಟ್ರಮಣ ಕುದ್ಪಾಜೆ, ಶ್ರೀಮತಿ ಯಶೋಧ ರಾವ್‌ರವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಮೊಕ್ತೇಸರರಾದ ಡಿ.ಎಸ್.ಗಿರೀಶ್, ಡಿ.ಎಸ್.ಕುಶಾಲಪ್ಪ...

All posts loaded
No more posts