- Friday
- November 1st, 2024
ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ...
ಕಾಯರ್ತೋಡಿ ಶ್ರೀ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷರಾಗಿ ವಾಸುದೇವ ಬೆಳ್ಳಿಪ್ಪಾಡಿ, ಕಾರ್ಯದರ್ಶಿಯಾಗಿ ಶೇಷಪ್ಪ ನಾಯ್ಕ ಪರಿವಾರಕಾನ, ಕೋಶಾಧಿಕಾರಿಯಾಗಿ ವಸಂತ ಬಿಳಿಯಾರು, ಉಪಾಧ್ಯಕ್ಷರಾಗಿ ವೆಂಕಟ್ರಮಣ ದೇಂಗೋಡಿ, ವೆಂಕಟ್ರಮಣ ಕುದ್ಪಾಜೆ, ಶ್ರೀಮತಿ ಯಶೋಧ ರಾವ್‌ರವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಮೊಕ್ತೇಸರರಾದ ಡಿ.ಎಸ್.ಗಿರೀಶ್, ಡಿ.ಎಸ್.ಕುಶಾಲಪ್ಪ...
ನವಚೇತನ ಯುವಕ ಮಂಡಲ (ರಿ )ಬೊಳುಬೈಲು ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಕೆ. ವಿ. ಜಿ. ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ |ಮನೋಜ್ ಅಡ್ಡಂತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡಿದರು. ಜಾಲ್ಸುರು ಗ್ರಾಮ ಪಂಚಾಯತ್ ಅಧ್ಯಕ್ಷರು ಕೆ. ಎಂ. ಬಾಬು ಶುಭಹಾರೈಸಿ ಯುವಕ ಮಂಡಲದ ನೂತನ ಯೋಜನೆ ಸ್ಥಳೀಯ ಶಾಲಾ...
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಣ್ವ ವೃಕ್ಷ ಸಂವರ್ಧನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂರ ಎಂಟು (108) ಬಿಲ್ವಪತ್ರೆ ಗಿಡಗಳನ್ನು ಪೂಜಾಕೈಂಕರ್ಯ ನೆರವೇರಿಸಿ ನೆಡಲಾಯಿತು.ಇದೇ ಸಂದರ್ಭ ಟ್ರಸ್ಟ್ ನ ಅಧ್ಯಕ್ಷರಾದ ಪುರುಷೋತ್ತಮ ಕಿರ್ಲಾಯ, ಕಾರ್ಯದರ್ಶಿ ಪ್ರದೀಪ್ ರೈ ಪನ್ನೆ, ಡಾ.ಯಶೋಧ ರಾಮಚಂದ್ರ, ಅಡ್ಯಡ್ಕ ಕರುಣಾಕರ ಮತ್ತಿತರ ಸದಸ್ಯರು, ದೇವಸ್ಥಾನ ಮೊಕೇಸ್ತರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕುಡೇಕಲ್ಲು...
ಶ್ರೀ ಜಲದುರ್ಗಾದೇವೀ ದೇವಸ್ಥಾನ ಪೆರುವಾಜೆಯಲ್ಲಿ ಗಣಪತಿ ಹೋಮ ಮತ್ತು ದುರ್ಗಾ ಪೂಜೆ ಜು.17 ರಿಂದ ಆರಂಭಗೊಂಡಿದೆ. ಶ್ರೀ ಕ್ಷೇತ್ರದಲ್ಲಿ 48 ದಿನಗಳ ಪೂಜೆ ನಡೆಯಲಿದೆ
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ತಿಂಗಳ ಬೆಳಿಗ್ಗೆ ಗಣಪತಿ ಹೋಮ ಮತ್ತು ರಾತ್ರಿ ದುರ್ಗಾ ಪೂಜೆ ಪ್ರಾರಂಭಗೊಂಡಿದ್ದು ಸೆ.2 ರ ತನಕ ಪೂಜೆ ನಡೆಯಲಿದೆ.ಸೇವೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಛೇರಿಯಲ್ಲಿ (ಮೊಬೈಲ್: 9902050424) ವಿಚಾರಿಸಬೇಕಾಗಿದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಪದ್ಮನಾಭಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.
ಮಾನವನ ಜೀವನವು ಸಾರ್ಥಕ್ಯವನ್ನು ಸಾಧಿಸಲು ಗುರಿ ಪ್ರಧಾನವಾಗಿರುತ್ತದೆ.ಯುವ ಜನಾಂಗವು ದೇಶದ ಸಂಪತ್ತಾಗಿದ್ದು ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ನಿರಂತರ ಪ್ರೋತ್ಸಾಹ ಅಗತ್ಯ. ಜೀವನದಲ್ಲಿ ಹಣ ಸಂಪತ್ತು ಮಾತ್ರ ಗೌರವ ನೀಡುವುದಲ್ಲ.ಬದಲಾಗಿ ಭಾರತೀಯವಾದ ಭವ್ಯವಾದ ಸನಾತನ ಸಂಸ್ಕೃತಿಯ ಅನುಷ್ಠಾನ ಯುವ ಜನಾಂಗದ ಅಭ್ಯುದಯಕ್ಕೆ ಸಂಪತ್ತಾಗಿದೆ.ಮಹಾಪುರುಷರನ್ನು ಅವರ ಗುಣ ನಡತೆ, ಪರಿಶ್ರಮ ಮತ್ತು ಸಾಧನೆಯಿಂದ ಅವರನ್ನು ಗೌರವಿಸುತ್ತೇವೆ.ಬದಲಾಗಿ ಅವರಲ್ಲಿನ...
ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಯಲ್ಲಿ ತ್ಯಾಗ, ಬಲಿದಾನದ ಬಕ್ರೀದ್ ಹಬ್ಬ ವನ್ನು ಕೋವಿಡ್ 2ನೇ ಅಲೆಯಿಂದಾಗಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಅರಂತೋಡು ಜುಮ್ಮಾ ಮಸೀದಿ ಖತೀಬ್ ಆಲ್ ಹಾಜ್ ಇಸ್ಹಾಕ್ ಬಾಖವಿ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು. ಮರಣ ಹೊಂದಿದವರಿಗೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಜಮಾತ್ ಪದಾಧಿಕಾರಿಗಳು, ಎಸೋಸಿಯೇಶನ್ ಪದಾಧಿಕಾರಿಗಳು,ಎಸ್ ಕೆ ಎಸ್ ಎಸ್...
ದೇವಚಳ್ಳ ಗ್ರಾಮದ ಚಳ್ಳದಲ್ಲಿ ಜೀರ್ಣೋದ್ಧಾರಗೊಳ್ಳದೇ ಅವನತಿ ಹೊಂದಿದ್ದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾಲ ಕೂಡಿಬಂದಿದ್ದು ಎ.20 ರಂದು ಭಕ್ತಾಭಿಮಾನಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ದೇವಚಳ್ಳ, ನೆಲ್ಲೂರುಕೆಮ್ರಾಜೆ, ಅಮರ ಮುಡ್ನೂರು ಗ್ರಾಮದ ದೇವಸ್ಥಾನ ಹಾಗೂ ಮನೆಗಳಲ್ಲಿ ಪ್ರಶ್ನೆ ಚಿಂತನೆ ನಡೆದ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಆಗಬೇಕೆಂದು ಕಂಡುಬಂದಿತ್ತು. ಹಳ್ಳದಲ್ಲಿ ದೇವಸ್ಥಾನ ಇತ್ತೆಂಬ ಜಾಗದಲ್ಲಿ ಕೆರೆ ಹಾಗೂ...
Loading posts...
All posts loaded
No more posts