- Saturday
- March 7th, 2026
ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿಗಳು ಸುಮಾರು 20 ವರ್ಷಗಳಿಂದ ಸೇತುವೆ ನಿರ್ಮಾಣಕ್ಕಾಗಿ ಶಾಸಕರಿಗೆ ಹಾಗೂ ಸಚಿವರುಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಹಾಗೂ ಸೇತುವೆ ಮಾಡಿಸುವುದೆಂದು ಗುದ್ದಲಿಪೂಜೆ ನಡೆಸಲಾಗಿದ್ದು ಸೇತುವೆ ಆಗುವವರೆಗೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುತ್ತಿದ್ದೇವೆ ಎಂದು ಬ್ಯಾನರ್ ಅಳವಡಿಸಿ ಜನಪ್ರತಿನಿಧಿಗಳನ್ನು ಎಚ್ಚರಿಸಿದ್ದಾರೆ.
ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಗ್ರಾಹಕರಿಗೆ ಬಿಗ್ ಆಫರ್ ನೀಡುತ್ತಿದೆ. ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಸ್ವರ್ಣಶ್ರೀ ಸೌಹಾರ್ದ ಸಹಕಾರಿ ಸಂಘವು ಮಾರ್ಚ್ ತಿಂಗಳಿನಲ್ಲಿ ಇರಿಸಲಾಗುವ ಠೇವಣಿಗಳಿಗೆ ವಿಶೇಷ ಬಡ್ಡಿದರವನ್ನು ಪ್ರಕಟಿಸಿದೆ. ಈ ಆಫರ್ ಮಾರ್ಚ್ 2 ರಿಂದ ಮಾ.14 ರವರೆಗೆ ಲಭ್ಯವಿದ್ದು...
ಮಡಪ್ಪಾಡಿ ಗ್ರಾಮದ ದೇರುಮಜಲು ಶಿವಪ್ರಸಾದ್ ಮತ್ತು ಕುಕ್ಕುಜಡ್ಕದಲ್ಲಿರುವ ನವವೃಕ್ಷ ವಸ್ತ್ರಗಳ ಮಳಿಗೆಯ ಮಾಲಕರಾದ ಜಯಲತಾ ದಂಪತಿಗಳ ಪುತ್ರ ದರ್ಶನ್ ಡಿ.ಎಸ್ ಇವರು ಫೆಬ್ರವರಿ 21 ಮತ್ತು 22ರಂದು ದೆಹಲಿಯಲ್ಲಿ ನಡೆದ ಏಷಿಯನ್ ಲೆವೆಲ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ 2026 ರಲ್ಲಿ 4 ಚಿನ್ನದ ಪಡೆದಿದ್ದಾರೆ. ಇವರು ಎಸ್.ಡಿ.ಎಂ.ಕಾಲೇಜು ಉಜಿರೆಯಲ್ಲಿ ಅಂತಿಮ ವರ್ಷದ ಬಿ.ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ.
ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿಯಾದ ಆದಿತ್ಯ.ಆರ್ ವಿಜ್ಞಾನ ದಿನದ ಮಹತ್ವ ಮತ್ತು ವಿಶೇಷತೆಯ ಬಗ್ಗೆ ಸ್ತೂಲವಾಗಿ ವಿವರಿಸಿದರು. ಮತ್ತು ಇದರ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆ ಬಹುಮಾನವನ್ನು ಸಂಸ್ಥೆಯ ಅಧ್ಯಕ್ಷರಾದ ನ. ಸೀತಾರಾಮರವರು ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆ ಮುಖ್ಯೋಪಾಧ್ಯಯರಾದ ಗಿರೀಶ್ ಕುಮಾರ್...
📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 959196919701/03/2026 ಭಾನುವಾರ*01,🐏ಮೇಷರಾಶಿ🐏*📖,ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಸಿಗಬಹುದು. ಇದರಿಂದ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುವುವು. ಬೇರೆಯವರೊಂದಿಗೆ ನಿಮ್ಮ ಕೆಲಸಗಳನ್ನು ಅಂತಿಮಗೊಳಿಸುವಾಗ ಅವರು ನಿಮ್ಮನ್ನು ಕೆಲವು ಸಮಸ್ಯೆಗೆ ಸಿಲುಕಿಸಬಹುದು,ಗಮನಿಸಿ:-ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆಯಿದೆ...
ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘ(ಅಮುಕ್ತ)ದ ಅಧ್ಯಕ್ಷರಾಗಿ ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಡಾ. ಪುರುಷೋತ್ತಮ.ಕೆ.ವಿ ಕರಂಗಲ್ಲು ರವರು ಆಯ್ಕೆಯಾಗಿದ್ದಾರೆ.ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಡಾ. ಎಸ್.ಎ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ನಡೆದ 39ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.ಮಂಗಳೂರಿನ ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುರುಷೋತ್ತಮ.ಕೆ.ವಿ ರವರು ಈ ಹಿಂದೆ ಎರಡು ಅವಧಿಗೆ...
ಕೊಲ್ಲಮೊಗ್ರು : ಬಂಗ್ಲೆಗುಡ್ಡೆ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಪ್ರಯೋಗ ಮಾದರಿ ಹಾಗೂ ವಸ್ತು ಪ್ರದರ್ಶನ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರುವಿನಲ್ಲಿ ಶಾಲೆಯಲ್ಲಿ ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಪ್ರಯೋಗ ಮಾದರಿ ಹಾಗೂ ವಸ್ತು ಪ್ರದರ್ಶನವನ್ನು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಹಾಗೂ ಪ್ರತಿಯೊಂದನ್ನು ಪ್ರಶ್ನಿಸಿ ತಾರ್ಕಿಕವಾಗಿ ಚಿಂತನೆ ನಡೆಸುವ ಅಂಗವಾಗಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಶಾಲಾ ಹಳೆ ವಿದ್ಯಾರ್ಥಿ ಹಾಗೂ ಕಬಡ್ಡಿ ತಂಡದ ಶಾಲಾ ವಿದ್ಯಾರ್ಥಿಗಳಿಗೆ ಜರ್ಸಿಯನ್ನು ಹಾಗೂ ಕಬಡ್ಡಿ...
ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ಸುತ್ತುಕೋಟೆ ಜಾಗೂ ಮಿತ್ತಮಜಲು ಬಳಿ ಗುಡ್ಡಕ್ಕೆ ಬೆಂಕಿ ತಗುಲಿದ ಘಟನೆ ಇಂದು ಸಂಜೆ ನಡೆದಿದೆ. ವಿದ್ಯುತ್ ಲೈನ್ ನಿಂದ ಗುಡ್ಡಕ್ಕೆ ಬೆಂಕಿ ತಗುಲಿದ್ದು ಅಗ್ನಿಶಾಮಕ ದಳದವರು ಹಾಗೂ ನಾಗರಿಕರು ಬೆಂಕಿ ನಂದಿಸಿದರು.
ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ಸುತ್ತುಕೋಟೆ ಜಾಗೂ ಮಿತ್ತಮಜಲು ಬಳಿ ಗುಡ್ಡಕ್ಕೆ ಬೆಂಕಿ ತಗುಲಿದ ಘಟನೆ ಇಂದು ಸಂಜೆ ನಡೆದಿದೆ. ವಿದ್ಯುತ್ ಲೈನ್ ನಿಂದ ಗುಡ್ಡಕ್ಕೆ ಬೆಂಕಿ ತಗುಲಿದ್ದು ಅಗ್ನಿಶಾಮಕ ದಳದವರು ಹಾಗೂ ನಾಗರಿಕರು ಬೆಂಕಿ ನಂದಿಸಿದರು.
Loading posts...
All posts loaded
No more posts
