ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ ಇಲ್ಲಿನ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೇಖಾ ಶೇಟ್ ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಪಟ್ಟಣ ಗ್ರಾಮದ ದಂಪತಿಗಳಾದ ಶಾಂತಾ ಎಸ್ ಶೇಟ್ ಮತ್ತು ಸರ್ವೋತ್ತಮ ಪಿ.ಶೇಟ್ ದಂಪತಿಗಳ ದ್ವಿತೀಯ ಪುತ್ರಿಯಾಗಿ ಜನಿಸಿದ ರೇಖಾರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊಸಪಟ್ಟಣ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಶ್ರೀ ತರಳಬಾಳು ಜಗದ್ಗುರು ಮಹಿಳಾ ಕಾಲೇಜಿನಲ್ಲಿ ಪಡೆದುಕೊಂಡರು . ಶಿಕ್ಷಕ ತರಬೇತಿಯನ್ನು ಚಿಕ್ಕಮಗಳೂರು ಡಯಟ್ ನಲ್ಲಿ ಪಡೆದುಕೊಂಡು ಸಿ.ಇ.ಟಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಮಿತ್ತಡ್ಕ ಮರ್ಕಂಜ ಸ.ಹಿ.ಪ್ರಾ . ಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ವನ್ನು ಪ್ರಾರಂಭಿಸಿದರು. ಬಾಲ್ಯದಿಂದಲೇ ಕಲಿಕೆಯಲ್ಲಿ ಆಸಕ್ತಿಯನ್ನು ಹೊಂದಿದ ಇವರು ತರಗತಿಗಳಲ್ಲಿ ಯಾವಾಗಲೂ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದರು . ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಅನೇಕ ಪಡೆದುಕೊಂಡಿದ್ದರು
ನೃತ್ಯ , ಸಂಗೀತ , ನಾಟಕ , ಹಾಗೂ ಏಕಪಾತ್ರಾ ಭಿನಯಗಳಲ್ಲಿ ಅಭಿನಯಿಸಿ ಬಹುಮಾನ ಗಳಿಸಿದ್ದರು . ಹಿಂದಿ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು . ಕಲಿಕೋಪಕರಣ ಹಾಗೂ ಪ್ರಬಂಧ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು . ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಯನ್ನು ಸುಲಭವಾಗಿ ಕಲಿಸಲು ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುತ್ತಾರೆ . ಪ್ರತಿಭಾ ಕಾರಂಜಿ ಸ್ಪರ್ಧೆ ಗಳಲ್ಲಿ ಸಮಗ್ರ ಪ್ರಶಸ್ತಿ ಬರಲು ಶ್ರಮಿಸಿದ್ದಾರೆ . ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಆಂಗ್ಲಭಾಷಾ ಕಂಠಪಾಠದಲ್ಲಿ ಮಾನ ಗಳಿಸುವಂತೆ ಪ್ರೋತ್ಸಾಹಿಸಿದ್ದಾರೆ . ಶಾಲೆಯಲ್ಲಿ ಯೋಗ ತರಗತಿಗಳನ್ನು ನಡೆಸಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರಯತ್ನಿಸಿದ್ದಾರೆ . ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ನಿಭಾಯಿಸಿದ್ದಾರೆ . ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಕರಿಸಿರುತ್ತಾರೆ . ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದ್ದಾರೆ. 2002 ರಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಇಲಾಖೆಯು ಹಲವಾರು ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ್ದಾರೆ ನಲಿಕಲಿ , ಆಂಗ್ಲಭಾಷೆ , ಹಿಂದಿಯಲ್ಲದೇ ಇನ್ನಿತರ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿರುತ್ತಾರೆ. ಸುಳ್ಯ ತಾಲೂಕನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನಲ್ಲಿ ಇಲಾಖೆಯ ಸಹಯೋಗದಲ್ಲಿ ಉತ್ತಮ ನಲಿಕಲಿ ಶಾಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ . ಪಡೆ , ಭಾರತ್ ಬಡೇ ಭಾರತ್ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಉತ್ತಮವಾಗಿ ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ . ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವಲ್ಲಿ ಪ್ರಯತ್ನ ಸಿದ್ದಾರೆ. ಗುತ್ತಿಗಾರು ಕ್ಲಸ್ಟರ್ ಸಮೂಹ ಸಂಪನ್ಮೂಲ
ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸಿರುತ್ತಾರೆ. ರೋಟರಿ ಸಂಸ್ಥೆಯವರಿಂದ ಅನೇಕ ಕೊಡುಗೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸುಳ್ಯ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಶಾಲೆಯಲ್ಲಿ ಇನ್‌ಸ್ಟೆರ್‌ಆಂಗ್ಲಭಾಷಾ ಮಾಸಪತ್ರಿಕೆಯನ್ನು ಹಾಗೂ ಶಾಲಾ ಹಸ್ತಪ್ರತಿಯನ್ನು ಪ್ರಾರಂಭಿಸಿದ್ದರು . ಇವರ ಪತಿ ಶ್ರೀನಾಥ್ ವಿ.ಶೇಟ್ ಬೆಂಗಳೂರಿನಲ್ಲಿ ಮಂಗಳೂರು ಜ್ಯುವೆಲ್ಲರಿ ವರ್ಕ್ ನ ಮಾಲೀಕರಾಗಿದ್ದು , ಇವರ ಪ್ರಥಮ ಪುತ್ರ ಅಕ್ಷಯ್ , ಎಸ್ ಶೇಟ್ ಕಾರ್ಯಕಾರಿ ನಿರ್ಮಾಪಕನಾಗಿ , ಸಹನಿರ್ದೇಶಕನಾಗಿ , ಹಾಗೂ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದ್ವಿತೀಯ ಪುತ್ರ ಭರತ್ .ಎಸ್.ಶೇಟ್ ಮೆಟ್ರೋಮೈಂಡ್ಸ್ ಕಂಪನಿಯ ಸಂಸ್ಥಾಪಕ ಮಾಲಕರಾಗಿದ್ದು ಕ್ರಿಕೆಟ್ ಕೋಚ್ ಆಗಿಯೂ , ಮಿಮಿಕ್ರಿ ಕಲಾವಿದನಾಗಿಯೂ , ಪೆನ್ಸಿಲ್ ಸ್ಕೆಚ್ ಕಲಾವಿದನಾಗಿಯೂ , ಫ್ರೀಲಾನ್ಸ್ ಪತ್ರಕರ್ತನಾಗಿಯೂ ಹವ್ಯಾಸ ಬೆಳೆಸಿಕೊಂಡಿರುತ್ತಾರೆ . ರೇಖಾರವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ ಇಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಸುವಿಚಾರ ಸಾಹಿತ್ಯ ವೇದಿಕೆಯ ಸಕ್ರಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಕಳೆದ ಬಾರಿ ಸುಳ್ಯ ರೋಟರಿ ಕ್ಲಬ್ ವತಿಯಿಂದ ರೋಟರಿ ನೇಶನ್ ಬಿಲ್ಡರ್ ಅವಾರ್ಡ್ ಪಡೆದಿರುತ್ತಾರೆ . ಅಷ್ಟೇ ಅಲ್ಲದೆ ಕೆ.ವಿ.ಜಿ.ಸುಳ್ಯ ಹಬ್ಬದ ಸ್ಪರ್ಧಾ ಸಮಿತಿಯ ಸಂಘಟಕರಾಗಿ,ಸಾಂಸ್ಕೃತಿಕ ಕಾರ್ಯಕ್ರಮದ ಸಂಘಟಕರಾಗಿ, ತಾಲೂಕು ಮಟ್ಟದ ಯೋಗ ಮತ್ತು ನೈತಿಕ ಶಿಕ್ಷಣ ಸ್ಪರ್ಧೆಗಳ ಸಂಘಟಕರಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಜಿಲ್ಲಾ , ರಾಜ್ಯ ಮಟ್ಟದ ಅನೇಕ ತರಬೇತಿ ಗಳಲ್ಲಿ ಭಾಗವಹಿಸಿ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುತ್ತಾರೆ.ಭಾಷಾ ಚಟುವಟಿಕೆಗಳ ರಚನಾ ಹೊತ್ತಿಗೆಯ ಸಂಪನ್ಮೂಲ ವ್ಯಕ್ತಿಯಾಗಿಯೂ, ರಾಜ್ಯ ಮಟ್ಟದ KSQAAC ಪ್ರಶ್ನಾಪತ್ರಿಕೆ ರಚನಾಕಾರರಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಶಿಕ್ಷಕರ ಯಕ್ಷಗಾನ ಒಕ್ಕೂಟದ ಸದಸ್ಯರಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಹೆತ್ತವರ ಪರಿಶ್ರಮದ ಜತೆಗೆ, ಸ್ನೇಹಿತರ ಮತ್ತು ಅಧಿಕಾರಿ ವೃಂದದವರ ಪ್ರೋತ್ಸಾಹ, ಪತಿಯ ಸಹಕಾರ ಮತ್ತು ಮಕ್ಕಳ ಬೆಂಬಲದಿಂದ ಈ ಎಲ್ಲಾ ಸಾಧನೆ ಮಾಡಿದ್ದಾರೆ.
- Friday
- November 22nd, 2024