“ಸಮಾಜ ಸೇವೆಯೇ ರೋಟರಿಯ ಮುಖ್ಯ ಧ್ಯೇಯ” : ರೋ. ಜಯಪ್ರಕಾಶ್ ; ಕುಂತೂರು ಶಾಲೆಗೆ ಕೊಡುಗೆ ಹಸ್ತಾಂತರ

ಜೂನ್ 30 : “ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಮುಖ್ಯವಾಗಿ ಸಮಾಜ ಸೇವೆಗಾಗಿ ಹುಟ್ಟಿಕೊಂಡಿದ್ದು, ಸಮಾಜದಲ್ಲಿರುವ ದೀನದಲಿತರ, ಅಶಕ್ತರ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಅದರೊಂದಿಗೆ ಶಾಲಾ ಕಾಲೇಜುಗಳು, ಅಂಗನವಾಡಿ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಗುರುತಿಸಿ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆ ರೀತಿಯಾಗಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆಯು ತನ್ನದೇ ಆದ ಚಾಪನ್ನು ಮೂಡಿಸುತ್ತಾ ಬಂದಿದೆ” ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಎಂ.ಪಿ.ಎಚ್.ಎಫ್ ಜಯಪ್ರಕಾಶ್.ಆರ್ ನುಡಿದರು. ಸೋಮವಾರ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುಂತೂರಿನಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ದಿ. ಪ್ರಾಚಾರ್ಯ ವಿಠಲ್ ರಾವ್ ರವರ ಸ್ಮರಣಾರ್ಥ ಅವರ ಮಗಳು ರಕ್ಷಾ ರಾವ್ ಕೊಡ ಮಾಡಿದ ಆಕ್ಸಿಕ್ಯೂಟಿವ್ ಚಯರ್ಗಳನ್ನ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಗೌಡ ಎರ್ಮಾಳ ಕೊಡಮಾಡಿದ ಟಿಫಾಯಿಯನ್ನು ಹಸ್ತಾಂತರಿಸಲಾಯಿತು.

. . . . . . . . .

ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಖಾಸಿಂ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ರೈ , ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ, ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಮಲ್ಲಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ಸೇವನೆಯ ಅನಾಹುತಗಳು ಹಾಗೂ ನಶಾ ಮುಕ್ತ ಭಾರತವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರತಿಜ್ಞೆ ಬೋಧಿಸಿದರು. 

. . . . . . .

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ಉಮೇಶ್ ಕೆ.ಎನ್, ವಿಶ್ವನಾಥ್ ನಡುತೋಟ, ಗೋಪಾಲ ಎಣ್ಣೆಮಜಲು, ಡಾl ರವಿ ಕಕ್ಕೆಪದವು, ಮೈಲಪ್ಪ ಸಂಕೇಶ, ವಿದ್ಯಾರ್ಥಿಗಳ ಪೋಷಕರು, ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಪದವೀಧರ ಶಿಕ್ಷಕಿ ಶ್ರುತಿ ಬಿ.ಎಚ್ ಸ್ವಾಗತಿಸಿ, ಗೋಪಾಲ್ ಎಣ್ಣೆಮಜಲು ಪ್ರಸ್ತಾವನೆಗೈದು ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ರಾಮಕೃಷ್ಣ ಮಲ್ಲಾರ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading