Ad Widget

ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಕೆ ಕಳ್ಳತನ ಆರೋಪಿಗಳ ಖುಲಾಸೆ

ಸುಳ್ಯ ತಾಲೂಕು ಕಳಂಜ ಗ್ರಾಮದ ಮುಂಡುಗಾರು ಎಂಬಲ್ಲಿನ ನಿವಾಸಿಗಳಾದ ಹರಿಯಪ್ಪ ಗೌಡ, ರಾಘವ ಮತ್ತು ಲೋಕೇಶ್ವರಿ ಎಂಬುವರು ದಿನಾಂಕ 30-12-2021 ರಂದು ಎಂ.ಸುಬ್ರಹ್ಮಣ್ಯ ಎಂಬುವವರ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆಯನ್ನು ಕದ್ದು ತೆಗೆದು ಕೊಂಡು ಹೋಗಿರುತ್ತಾರೆ ಎಂದು ಆರೋಪಿಸಿ ಎಂ.ಸುಬ್ರಮಣ್ಯ ರವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂದಿನ ಪೋಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ ಪ್ರಕರಣದ ತನಿಖೆಯನ್ನು ನಡೆಸಿ ರುಕ್ಮ ನಾಯಕ್ .ಎ ರವರು ಸುಳ್ಯ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

. . . . . . . . .

ಈ ಪ್ರಕರಣದಲ್ಲಿ ಸುಮಾರು 10 ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದು, ಆರೋಪಿಗಳು ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕಳ್ಳತನ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅಭಿಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಸುಳ್ಯದ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾವರಾದ ಶಿವಣ್ಣ ಹೆಚ್.ಆರ್ ರವರು ದಿನಾಂಕ 25-02-2026ರಂದು ಆರೋಪಿಗಳನ್ನು ಬಿಡುಗಡೆಗೊಳಿಸಿ ತೀರ್ಪು ನೀಡಿರುತ್ತಾರೆ.

. . . . . . .

ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ ರವರು ವಾದಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading