Ad Widget

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಅರಂತೋಡು ಮಾದರಿ ಗ್ರಾಮ ಪಂಚಾಯತ್ ಗೆ ಅಧ್ಯಯನ ಬೇಟಿ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಾದರಿ ಗ್ರಾಮ ಪಂಚಾಯತ್ ರಾಜ್ಯದ ಆರು ಮಾದರಿ ಗ್ರಾಮ ಪಂಚಾಯತ್ ಗಳಲ್ಲಿ ಒಂದಾಗಿರುವ ಸುಳ್ಯ ತಾಲೂಕಿನ ಏಕೈಕ ಪಂಚಾಯತ್ ಎಂದು ಹೆಗ್ಗಳಿಕೆ ಗಳಿಸಿರುವ ಅರಂತೋಡು ಗ್ರಾಮ ಪಂಚಾಯತ್ ಗೆ ಅಧ್ಯಯನ ನಡೆಸಲು ಮತ್ತು ಮಾಹಿತಿ ಪಡೆದು ಕೊಳ್ಳಲು ಬೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾದರಿ ರೆಕಾರ್ಡ್ ರೂಮ್ ನ ಸಂಪೂರ್ಣ ಮಾಹಿತಿಯನ್ನು ನಿಕಟ ಪೂರ್ವ ಅಧ್ಯಕ್ಷರಾದ ಕೇಶವ ಅಡ್ತಲೆ ನೀಡಿದರು. ಕೇರಳ ಮಾದರಿಯಲ್ಲಿ ವಿನ್ಯಾಸ ಗೊಳಿಸಲಾಗಿದೆ ಎಂದು ತಿಳಿಸಿದರು. ಮೂರರಿಂದ ಐದು ನಿಮಿಷಗಳಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ಎಂದು ತಿಳಿಸಿದರು. ಆದರೆ ಕೇವಲ ಒಂದೇ ನಿಮಿಷದಲ್ಲಿ ದಾಖಲೆಗಳನ್ನು ನೀಡಿದನ್ನು ನೋಡಿ ವಿದ್ಯಾರ್ಥಿಗಳು ಅಚ್ಚರಿಗೊಂಡರು. ನಂತರ ಪಂಚಾಯತ್ ಕಲಿಕಾ ಕೇಂದ್ರಕ್ಕೆ ಬೇಟಿ ನೀಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಪಂಚಾಯತ್ ಅಧ್ಯಯನಕ್ಕಾಗಿ ಬರುವವರು ಉಚಿತವಾಗಿ ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಘನತ್ಯಾಜ್ಯ ನಿರ್ವಹಣಾ ಘಟಕ, ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ವಸತಿ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ ಪಿ.ಪಿ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕರಾದ ಪದ್ಮಕುಮಾರ್ ಜಿ.ಆರ್ ಮತ್ತು ಪಂಚಾಯತ್ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading