Ad Widget

ಹರಿಹರ ಪಳ್ಳತ್ತಡ್ಕ : ಫೆ.28ರಂದು “ಅಟಲ್ ಟ್ರೋಫಿ ವಾಲಿಬಾಲ್ ಪಂದ್ಯಾಟ”

ಅಟಲ್ ಅಭಿಮಾನಿ ಬಳಗ ಬಾಳುಗೋಡು-ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಫೆ.28 ಶನಿವಾರದಂದು ಅಪರಾಹ್ನ 1:00 ಗಂಟೆಯಿಂದ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಮೈದಾನದಲ್ಲಿ ಆಯ್ದ 8 ತಂಡಗಳ ಲೀಗ್ ಮಾದರಿಯ ಸೂರ್ಯ-ಹೊನಲು ಬೆಳಕಿನ “ಅಟಲ್ ಟ್ರೋಫಿ ವಾಲಿಬಾಲ್ ಪಂದ್ಯಾಟ” ನಡೆಯಲಿದ್ದು, ಅಪರಾಹ್ನ 1:30ಕ್ಕೆ ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ಪಂದ್ಯಾಟವನ್ನು ಉದ್ಘಾಟನೆ ಮಾಡಲಿದ್ದು, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ತಾಲೂಕು ಅಟಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೌರವ ಉಪಸ್ಥಿತರಾಗಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ, ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಗದೀಶ್ ಪಡ್ಪು, ಸುಳ್ಯ ತಾಲೂಕು ಪಂಚಾಯತ್‌ರಾಜ್ ಇಂಜಿನಿಯರ್ ಮಣಿಕಂಠನ್, ಸಹಕಾರ ಭಾರತಿ ಸುಳ್ಯ ತಾಲೂಕು ಸಮಿತಿ ಮತ್ತು ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಸದಸ್ಯರಾದ ಚಂದ್ರಹಾಸ ಶಿವಾಲ ಹಾಗೂ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಹಿಮ್ಮತ್.ಕೆ.ಸಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಗುತ್ತಿಗಾರು ವಲಯ ಪಶು ಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ವೆಂಕಟಾಚಲಪತಿ, ಭಾರತೀಯ ಭೂಸೇನೆಯ ನಿವೃತ್ತ ಯೋಧರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಪ್ರಥಮ ದರ್ಜೆ ಪರಿವೀಕ್ಷಕರಾದ ಶ್ರೀಧರ್.ಎಸ್.ಪಿ ಹಾಗೂ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ನಿಕಟಪೂರ್ವ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪಂದ್ಯಾಟದಲ್ಲಿ ಸನ್‌ರೈಸರ್ಸ್ ಕೋಲ್ಚಾರ್, ಸಾನಿಧ್ಯ ಕೊಲ್ಲಮೊಗ್ರು, ಅಮೋರ ಶ್ರೀ ಕಿರಿಭಾಗ, ವಿನಯ್ ಕೆಟರರ್ಸ್ ಉಬರಡ್ಕ, ಗೌಡ ಕೆಟರರ್ಸ್ ಗುತ್ತಿಗಾರು, ಲತಾಶ್ವಿ ಫ್ರೆಂಡ್ಸ್ ಬಾಳುಗೋಡು, ರಾಜ್ ಸೌಂಡ್ಸ್ ಉಬರಡ್ಕ ಹಾಗೂ ರೈನ್‌ಬೋ ಸ್ಟ್ರೈಕರ್ಸ್ ಕಲ್ಮಕಾರು ತಂಡಗಳು ಭಾಗವಹಿಸಲಿದ್ದು, ಪಂದ್ಯಾಟದ ಪ್ರಥಮ ಬಹುಮಾನವಾಗಿ 15 ಸಾವಿರ ರೂಪಾಯಿ ನಗದು ಮತ್ತು ಅಟಲ್ ಟ್ರೋಫಿ, ದ್ವಿತೀಯ ಬಹುಮಾನವಾಗಿ 10 ಸಾವಿರ ರೂಪಾಯಿ ನಗದು ಮತ್ತು ಅಟಲ್ ಟ್ರೋಫಿ, ತೃತೀಯ ಬಹುಮಾನವಾಗಿ 7 ಸಾವಿರ ರೂಪಾಯಿ ನಗದು ಮತ್ತು ಅಟಲ್ ಟ್ರೋಫಿ ಹಾಗೂ ಚತುರ್ಥ ಬಹುಮಾನವಾಗಿ 5 ಸಾವಿರ ರೂಪಾಯಿ ನಗದು ಮತ್ತು ಅಟಲ್ ಟ್ರೋಫಿ ಇರಲಿದ್ದು, ಉತ್ತಮ ಹೊಡೆತಗಾರ, ಉತ್ತಮ ಎತ್ತುವಿಕೆ ಹಾಗೂ ಸರ್ವಾಂಗೀಣ ಆಟಗಾರ ಎಂಬ ವೈಯಕ್ತಿಕ ಬಹುಮಾನಗಳು ಇರಲಿವೆ ಎಂದು ಪಂದ್ಯಾಟದ ಸಂಘಟಕರು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ 9483167488(ಯತೀಶ್ ವಾಡ್ಯಪ್ಪನಮನೆ) ಅಥವಾ 9481387647(ರಾಧಾಕೃಷ್ಣ ಕಟ್ಟೆಮನೆ) ಸಂಪರ್ಕಿಸಬಹುದಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading