Ad Widget

ಹರಿಹರ ಪಳ್ಳತ್ತಡ್ಕ : ಫೆ.28ರಂದು ನಡೆಯಲಿರುವ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಅಟಲ್ ಅಭಿಮಾನಿ ಬಳಗ ಹರಿಹರ ಪಳ್ಳತ್ತಡ್ಕ-ಬಾಳುಗೋಡು ಇದರ ಆಶ್ರಯದಲ್ಲಿ ಅಟಲ್ ಜನ್ಮಶತಾಬ್ಧಿ ಪ್ರಯುಕ್ತ ಫೆ.28ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆಯಲಿರುವ ಲೀಗ್ ಮಾದರಿಯ 8 ತಂಡಗಳ ಸೂರ್ಯ ಬೆಳಕಿನ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.19ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್, ಪ್ರಮುಖರಾದ ಚಂದ್ರಹಾಸ ಶಿವಾಲ, ರವೀಂದ್ರ ಗೋಳ್ಯಾಡಿ, ರಾಧಾಕೃಷ್ಣ ಕಟ್ಟೆಮನೆ, ಯತೀಶ್ ವಾಡ್ಯಪ್ಪನಮನೆ, ಉಲ್ಲಾಸ್ ಮುಚ್ಚಾರ, ಕುಮಾರ್ ಕುಕ್ಕುಂದ್ರಡ್ಕ, ರಾಮಕೃಷ್ಣ ಕಟ್ಟೆಮನೆ, ಪ್ರವೀಣ್ ಕಟ್ಟೆಮನೆ, ಭವಿತ್ ಕಟ್ಟೆಮನೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಈ ಪಂದ್ಯಾಟದಲ್ಲಿ ಸನ್ ರೈಸರ್ಸ್ ಕೋಲ್ಚಾರ್, ಸಾನಿಧ್ಯ ಕೊಲ್ಲಮೊಗ್ರು, ಅಮೋರ ಶ್ರೀ ಕಿರಿಭಾಗ, ವಿನಯ್ ಕೆಟರರ್ಸ್ ಉಬರಡ್ಕ, ಗೌಡ ಕೆಟರರ್ಸ್ ಗುತ್ತಿಗಾರು, ಲತಾಶ್ವಿ ಫ್ರೆಂಡ್ಸ್ ಬಾಳುಗೋಡು, ರಾಜ್ ಸೌಂಡ್ಸ್ ಉಬರಡ್ಕ ಹಾಗೂ ರೈನ್‌ಬೋ ಸ್ಟ್ರೈಕರ್ಸ್ ಕಲ್ಮಕಾರು ತಂಡಗಳು ಭಾಗವಹಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading