Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ


ದಿನಾಂಕ:20-02-2026 ಶುಕ್ರವಾರ


*01,🐏ಮೇಷ ರಾಶಿ🐏*
🕊️,ಇಂದು ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಹಿಂದಿನ ತಪ್ಪುಗಳನ್ನು ಪುನರಾವರ್ತಿಸಬೇಡಿ. ಶೈಕ್ಷಣಿಕ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಕಷ್ಟು ಪ್ರಗತಿ ಸಾಧಿಸುವಿರಿ. ಕೈಗೊಂಡಕೆಲಸಗಳುನಿಧಾನವಾಗಿ, ಸಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಧೈರ್ಯದಿಂದ ಮುನ್ನಡೆಯುತ್ತೀರಿ.ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆಗಳುಅನುಕೂಲಕರವಾಗಿರುತ್ತದೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ವ್ಯವಹಾರದಲ್ಲಿ ನಿಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ,
ಗಮನಿಸಿ:-ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ,
ಪರಿಹಾರ:-ಶ್ರೀ ಮಹಾಲಕ್ಷ್ಮಿ ಪೂಜೆ ಮಾಡಿ,
*02,🐂ವೃಷಭ ರಾಶಿ🐂*
🕊️,ಇಂದು ನಿಮಗೆ ತುಂಬಾ ಶುಭ ದಿನ. ವೃತ್ತಿಪರ ಜೀವನದಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ಪ್ರಯಾಣದ ಸಮಯದಲ್ಲಿ ಹಳೆಯ ಸ್ನೇಹಿತನನ್ನು ಭೇಟಿಯಾಗುವ ಸಾಧ್ಯತೆಯಿದೆ. ಆಸ್ತಿಗೆ ಸಂಬಂಧಿಸಿದಂತೆ ಕಾನೂನು ವಿವಾದಗಳು ಉಂಟಾಗಬಹುದು. ಕೆಲವು ವಿಚಾರಗಳಲ್ಲಿ ಇತರರೊಂದಿಗೆ, ಭಿನ್ನಾಭಿಪ್ರಾಯ ಉಂಟಾಗುತ್ತದೆ. ನಿಗದಿತ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳದೆಮುಂದೂಡಲಾಗುತ್ತದೆ.ಹೊಸವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಸಣ್ಣ ಆರ್ಥಿಕನಷ್ಟಗಳುಉಂಟಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಸಹೋದ್ಯೋಗಿಗಳೊಂದಿಗೆ ಭಿನ್ನಭಿಪ್ರಾಯ ಇರುತ್ತದೆ,
ಗಮನಿಸಿ:-ಮಕ್ಕಳಆರೋಗ್ಯಕ್ಕೆವೈದ್ಯಕೀಯ ಸಮಾಲೋಚನೆ ಅಗತ್ಯ,
ಪರಿಹಾರ:-ನಿರ್ಗತಿಕರಿಗೆ ಅನ್ನದಾನ ಮಾಡಿ,
*03,🧚‍♀️ಮಿಥುನ ರಾಶಿ🧚‍♀️*
🕊️,ಇಂದು ನಿಮ್ಮ ಪ್ರೀತಿಪಾತ್ರರ ಆರೋಗ್ಯಕ್ಕೆ ಗಮನ ಕೊಡಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ಉದ್ಯೋಗ ಸಂದರ್ಶನಗಳಿಂದ ನಿಮಗೆ ಸಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ. ನಿಮ್ಮ ಫಿಟ್‌ನೆಸ್ ಗುರಿಗಳತ್ತ ಗಮನಹರಿಸಿ. ಪ್ರಮುಖ ವ್ಯವಹಾರಗಳಲ್ಲಿ ಅಪ್ರಯತ್ನವಾಗಿ ಯಶಸ್ಸು ಸಾಧಿಸುತ್ತೀರಿ. ಸೋದರ ಸಂಬಂಧಿಗಳೊಂದಿಗೆ ಭೂಮಿ ವಿವಾದಗಳಿಂದ ಮುಕ್ತಿ ದೊರೆಯುತ್ತದೆ. ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಮನೆಯಲ್ಲಿ ಹಿರಿಯರ ನೆರವಿನಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಸಂಬಳ ಭತ್ಯೆಗಳ ಬಗ್ಗೆ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ, ಗಮನಿಸಿ:-ಆರ್ಥಿಕ ಪ್ರಗತಿ ಉಂಟಾಗುತ್ತದೆ,
ಪರಿಹಾರ:-ಗೋಮಾತೆಗೆ ಮೇವನ್ನು ನೀಡಿ,
*04,🦀ಕಟಕ ರಾಶಿ🦀*
🕊️,ಇಂದು ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ವ್ಯಾಪಾರ-ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ. ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ. ಇದು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ. ನಿರೀಕ್ಷಿತಆದಾಯದೊರೆಯುವುದಿಲ್ಲ. ಮನೆಯ ಹೊರಗೆ ಅನಿರೀಕ್ಷಿತ ಖರ್ಚುಗಳು ಎದುರಾಗುತ್ತವೆ. ಹಣದ ವಿಷಯದಲ್ಲಿ ಬೇರೆಯವರಿಗೆ ಮಾತು ಕೊಟ್ಟು ತೊಂದರೆಗೆ ಸಿಲುಕುತ್ತೀರಿ.ದೂರಪ್ರಯಾಣವನ್ನು,ಮುಂದೂಡುವುದು ಉತ್ತಮ.ಉದ್ಯೋಗದಲ್ಲಿ ಸ್ವಲ್ಪನಿರುತ್ಸಾಹವಾತಾವರಣವಿರುತ್ತದೆ, ಗಮನಿಸಿ:-ದೈವಿಕಚಿಂತನೆಹೆಚ್ಚಾಗುತ್ತದೆ,
ಪರಿಹಾರ:-ಶ್ರೀ ಲಲಿತಾ ಸಹಸ್ರನಾಮ ಪಠಿಸಿ,
*05,🦁ಸಿಂಹ ರಾಶಿ🦁*
🕊️,ಇಂದು ಕಠಿಣ ಪರಿಶ್ರಮವು ಉದ್ಯೋಗ ಮತ್ತು ವ್ಯವಹಾರದಲ್ಲಿ ಫಲಿತಾಂಶವನ್ನು ನೀಡುತ್ತದೆ. ಅನಾರೋಗ್ಯಕರ ಆಹಾರಗಳನ್ನು ತಪ್ಪಿಸಿ. ಹೊಸ ಕೌಶಲ್ಯಗಳನ್ನು ಕಲಿಯಿರಿ. ಆರೋಗ್ಯ ಸಮಸ್ಯೆಗಳಿಂದ ಕೊಂಚ ಪರಿಹಾರ ಸಿಗುತ್ತದೆ. ಹಳೆಯ ಸಾಲಗಳನ್ನು ತೀರಿಸಲು ಹೊಸಸಾಲಗಳನ್ನುಮಾಡಲಾಗುತ್ತದೆ,ವೃತ್ತಿಪರವ್ಯವಹಾರಗಳು ಲಾಭದಾಯಕವಾಗಿರುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ಅಂತ್ಯಗೊಳ್ಳುತ್ತವೆ. ಮಕ್ಕಳು ಶೈಕ್ಷಣಿಕ ವಿಷಯಗಳ ಬಗ್ಗೆ ಕಾಳಜಿವಹಿಸಬೇಕು, ಗಮನಿಸಿ:-ನಿಮ್ಮಕಾರ್ಯಶೈಲಿಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ,
ಪರಿಹಾರ:-ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಬೆಳಗಿ,
*06,👩‍🦰ಕನ್ಯಾ ರಾಶಿ👩‍🦰*
🕊️,ಇಂದು ಉದ್ಯೋಗಿಗಳ ಬಡ್ತಿ ಅಥವಾ ಮೌಲ್ಯಮಾಪನದ ಸಾಧ್ಯತೆಗಳು ಹೆಚ್ಚಾಗುತ್ತವೆ.ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಿಸುತ್ತದೆ. ಹೊಸ ಹೂಡಿಕೆ ಆಯ್ಕೆಗಳ ಬಗ್ಗೆ ಗಮನವಿರಲಿ. ಆಲೋಚನೆಗಳು ಬೇರ್ಪಡುವುದರಿಂದ ನೀವು ನಕಾರಾತ್ಮಕ ಭಾವನೆ ಹೊಂದಬಹುದು. ಕುಟುಂಬ ಸದಸ್ಯರ ಬೆಂಬಲ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರಗಳುಆಶಾದಾಯಕವಾಗಿರುತ್ತವೆ.ಪ್ರಮುಖಕೆಲಸಗಳನ್ನುಸಕಾಲದಲ್ಲಿಪೂರ್ಣಗೊಳಿಸುತ್ತೀರಿ.ಭೂಮಿ ಖರೀದಿ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಹೊಸ ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ,
ಗಮನಿಸಿ:-ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ,
ಪರಿಹಾರ:-ಶ್ರೀಸೂಕ್ತ ಪಾರಾಯಣ ಮಾಡಿ,
*07,⚖️ತುಲಾ ರಾಶಿ⚖️*
🕊️,ಇಂದು ನಿಮ್ಮ ಕೆಲಸ ಮತ್ತು ಸ್ವಭಾವದಿಂದ ಜನರು ಸಂತೋಷವಾಗಿರುತ್ತಾರೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಠಿಣ ಪರಿಶ್ರಮ ಪಡಿರಿ. ಇದರಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಪ್ರಮುಖ ವ್ಯವಹಾರಗಳಲ್ಲಿ ಅಡೆತಡೆಗಳಿದ್ದರೂ ಸಮಯಕ್ಕೆ ಸರಿಯಾಗಿಪೂರ್ಣಗೊಳಿಸುತ್ತೀರ. ವೃತ್ತಿಪರ ಉದ್ಯೋಗಗಳಲ್ಲಿ ನಿರ್ಧಾರಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ.ವ್ಯರ್ಥಖರ್ಚುಗಳ,ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಿ. ಮಕ್ಕಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ,
ಗಮನಿಸಿ:-ವೃತ್ತಿಪರ ಉದ್ಯೋಗಗಳಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ,
ಪರಿಹಾರ:-ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಪೂಜಿಸಿ,
*08,🦂ವೃಶ್ಚಿಕ ರಾಶಿ🦂*
🕊️,ಇಂದು ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ವ್ಯಾಪಾರ ಪಾಲುದಾರಿಕೆಗೆ ಹೊಸ ಅವಕಾಶಗಳು ದೊರೆಯುತ್ತವೆ. ಕುಟುಂಬ ಸದಸ್ಯರಿಂದ ಆರ್ಥಿಕ ಸಹಾಯ ದೊರೆಯದೆತೊಂದರೆಉಂಟಾಗುತ್ತದೆ. ಉದ್ಯೋಗದಲ್ಲಿ ಇತರರೊಂದಿಗೆ ವಾದ ಮಾಡದಿರುವುದು ಉತ್ತಮ. ಹೊಸ ವ್ಯಾಪಾರವನ್ನು ವಿಸ್ತರಿಸುವ ಪ್ರಯತ್ನಗಳು ಫಲ ನೀಡುವುದಿಲ್ಲ,
ಗಮನಿಸಿ:-ದೂರದ ಪ್ರಯಾಣಗಳು ಕೂಡಿ ಬರುವುದಿಲ್ಲ,
ಪರಿಹಾರ:-ಶ್ರೀ ಕಾಲಭೈರವ ಸ್ವಾಮಿಯನ್ನು ಪೂಜಿಸಿ,
*10,🏹ಧನುಸ್ಸು ರಾಶಿ🏹*
🕊️,ಇಂದು ದೀರ್ಘಕಾಲ ಬಾಕಿ ಇರುವ ಕೆಲಸದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ವ್ಯವಹಾರದಲ್ಲಿ ವಿಸ್ತರಣೆ ಕಂಡುಬರಲಿದೆ. ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತೀರಿ ಮತ್ತು ಸಮಯಕ್ಕೆ ಸರಿಯಾಗಿ ಕೆಲಸಗಳನ್ನುಪೂರ್ಣಗೊಳಿಸುತ್ತೀರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಪ್ರಶಂಸೆ ದೊರೆಯುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಹೂಡಿಕೆಗಳು ದೊರೆಯುತ್ತವೆ,
ಗಮನಿಸಿ:-ವೃತ್ತಿ ಮತ್ತು ಉದ್ಯೋಗಗಳಲ್ಲಿ ಅಧಿಕಾರಿಗಳ ಬೆಂಬಲ ಹೆಚ್ಚಾಗುತ್ತದೆ,
ಪರಿಹಾರ:-ಶ್ರೀಸಿದ್ದಲಿಂಗೇಶ್ವರರ ಪ್ರಾರ್ಥನೆ ಮಾಡಿ,
*10,🐊ಮಕರ ರಾಶಿ🐊*
🕊️,ಇಂದು ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಉದ್ಯೋಗಿಗಳಿಗೆ ಹೊಸ ಪ್ರೋತ್ಸಾಹ ಸಿಗುತ್ತದೆ. ಬಂಧು ಮಿತ್ರರ ಆಗಮನ ಸಂತಸ ತರುತ್ತದೆ. ಆಸ್ತಿ ವಿವಾದಗಳನ್ನು ಪರಿಹರಿಸುವ ಪ್ರಯತ್ನಗಳು ಕೂಡಿಬರುತ್ತವೆ.ಆಲೋಚನೆಗಳು, ಕಾರ್ಯರೂಪಕ್ಕೆ ಬರುತ್ತವೆ. ನಿರುದ್ಯೋಗ ಪ್ರಯತ್ನಗಳು ವೇಗಗೊಳ್ಳುತ್ತವೆ,
ಗಮನಿಸಿ:-ಶತ್ರುಗಳು ಸಹ ಸ್ನೇಹಿತರಾಗಿ ಪರಸ್ಪರ ಸಹಾಯ ಮಾಡುತ್ತಾರೆ, ಪರಿಹಾರ:-ಲಕ್ಷ್ಮೀವೆಂಕಟೇಶ್ವರನ ದರ್ಶನ ಪಡೆಯಿರಿ,
*11,⚱️ಕುಂಭ ರಾಶಿ⚱️*
🕊️,ಇಂದು ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ.ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜಿನ ಕ್ಷಣಗಳನ್ನು ಆನಂದಿಸಿ. ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ದೀರ್ಘಾವಧಿ ಸಾಲಗಳು ಸ್ವಲ್ಪ ಮಟ್ಟಿಗೆ ಇತ್ಯರ್ಥವಾಗುತ್ತವೆ. ನಿರುದ್ಯೋಗಿಗಳಿಗೆಉದ್ಯೋಗಾವಕಾಶಗಳು ದೊರೆಯುತ್ತವೆ. ದೂರದ ಸಂಬಂಧಿಕರಿಂದ ಶುಭ ಸುದ್ದಿದೊರೆಯುತ್ತದೆ .ವ್ಯಾಪಾರಗಳಲ್ಲಿ,ಗೊಂದಲಮಯ ಸನ್ನಿವೇಶಗಳಿರುತ್ತವೆ. ಕುಟುಂಬದ ಸದಸ್ಯರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ,
ಗಮನಿಸಿ:-ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಆಲೋಚನೆಗಳನ್ನು ಆಚರಣೆಗೆ ತರಲಾಗುತ್ತದೆ,
ಪರಿಹಾರ:-ದುರ್ಗಾ ದೇವಿ ಪ್ರಾರ್ಥನೆಯಿಂದಶುಭವಾಗುವುದು,
*12,🐬ಮೀನ ರಾಶಿ🐬*
🕊️,ಇಂದು ಉದ್ಯೋಗ ಮತ್ತು ವ್ಯಾಪಾರದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ಕೆಲವು ವ್ಯವಹಾರಗಳಲ್ಲಿ ಆಪ್ತ ಸ್ನೇಹಿತರುನಿಮ್ಮೊಂದಿಗೆಭಿನ್ನಾಭಿಪ್ರಾಯ,ಹೊಂದುತ್ತಾರೆ. ಕೆಲಸದ ಒತ್ತಡ ಹೆಚ್ಚಾಗಿ, ಮಾನಸಿಕ ಆತಂಕ ಹೆಚ್ಚಾಗುತ್ತದೆ. ವಾಹನ ಪ್ರಯಾಣದಲ್ಲಿಜಾಗರೂಕರಾಗಿರಿ. ವೃತ್ತಿಪರ ವ್ಯವಹಾರಗಳಲ್ಲಿ ಶತ್ರುಗಳಸಮಸ್ಯೆಗಳುಹೆಚ್ಚಾಗುತ್ತವೆ. ಕೈಗೊಂಡ ಕೆಲಸಗಳು ಮುಂದೂಡಲ್ಪಡುತ್ತವೆ,
ಗಮನಿಸಿ:-ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ,
ಪರಿಹಾರ:-ಬಡ ಮಕ್ಕಳಿಗೆ ಬಟ್ಟೆ ದಾನ ಮಾಡಿ
📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading