Ad Widget

ಅಡಿಕೆ ಕೃಷಿಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಯವರಿಗೆ ಸುಪ್ರೀತ್ ಮೋoಟಡ್ಕ ಮನವಿ

ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿಯವರನ್ನು ಸುಪ್ರೀತ್ ಮೋoಟಡ್ಕ ರವರು ಸಚಿವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಹಳದಿ ರೋಗ ಹಾಗೂ ಚುಕ್ಕಿರೋಗ ಬಾಧೆ ಕುರಿತು ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ವಿನಂತಿಸಿದರು. ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸುಳ್ಯ ಕ್ಷೇತ್ರದಲ್ಲಿ ಅಡಿಕೆ ಬೆಳೆಗೆ ತೀವ್ರವಾಗಿ ಹಳದಿ ರೋಗ ಹಾಗೂ ಎಲೆ ಚುಕ್ಕಿರೋಗ(ಎಲೆ ಚಿಕ್ಕಿ ರೋಗ) ವ್ಯಾಪಕವಾಗಿ ಹರಡಿಕೊಂಡಿದ್ದು ಇದರಿಂದ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಕ್ಷೇತ್ರದ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ವಿಶೇಷವಾಗಿ ಅಡಿಕೆ ಬೆಳೆ ಮುಖ್ಯ ಆದಾಯದ ಮೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ರೋಗಬಾಧೆಯಿಂದ ಬೆಳೆ ನಾಶವಾಗುತ್ತಿದ್ದು, ಕೃಷಿಕರ ಜೀವನೋಪಾಯ ಕಷ್ಟಕರ ಪರಿಸ್ಥಿತಿಗೆ ತಲುಪಿದೆ. ಹಳದಿ ರೋಗ ಮತ್ತು ಎಲೆ ಚುಕ್ಕಿರೋಗ ನಿಯಂತ್ರಣಕ್ಕೆ ವಿಶೇಷ ಅನುದಾನ ಒದಗಿಸಬೇಕು. ತಜ್ಞರ ತಂಡದಿಂದ ತಕ್ಷಣದ ಸಮೀಕ್ಷೆ ಹಾಗೂ ಶಾಶ್ವತ ಪರಿಹಾರ ಕ್ರಮ, ನಷ್ಟ ಪರಿಹಾರ ಧನವನ್ನು ನೇರವಾಗಿ ಕೃಷಿಕರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಮತ್ತು ಸಾಲ ಮನ್ನಾ ಪರಿಗಣನೆ. ರೋಗ ನಿರೋಧಕ ತಳಿಗಳ ಸಂಶೋಧನೆ ಮತ್ತು ಉಚಿತ ಸಸಿಗಳ ವಿತರಣೆ ಸೇರಿದಂತೆ ಕೃಷಿಕರ ಹಿತದೃಷ್ಟಿಯಿಂದ ಸುಳ್ಯ ಕ್ಷೇತ್ರದ ರೈತರಿಗೆ ಸ್ಪಂದಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ಪಂದಿಸಿದ ಸಚಿವರಾದ ಚಲುವರಾಯ ಸ್ವಾಮಿ ಯವರು ಇದರ ಬಗ್ಗೆ ಕೂಡಲೇ ಇಲಾಖೆಯ ಅಧಿಕಾರಿಗಳಿಂದ ವರದಿ ಪಡೆಯುವದಾಗಿ ತಿಳಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading