Ad Widget

ಹರಿಹರ ಪಳ್ಳತ್ತಡ್ಕ : ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ ; ನಾಳೆ(ಫೆ.20) “ಹಸಿರು ಕಾಣಿಕೆ ಸಮರ್ಪಣೆ” – ಹಸಿರು ಕಾಣಿಕೆ ಸಮರ್ಪಣೆಯ ವಿವರ ಇಲ್ಲಿದೆ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ(ಫೆ.20) ಬಾಳುಗೋಡು, ಐನೆಕಿದು ಹಾಗೂ ಹರಿಹರ ಪಳ್ಳತ್ತಡ್ಕ ಗ್ರಾಮಗಳ ಗ್ರಾಮಸ್ಥರಿಂದ ಶ್ರೀ ದೇವರಿಗೆ “ಹಸಿರು ಕಾಣಿಕೆ ಸಮರ್ಪಣೆ” ನೆರವೇರಲಿದ್ದು, ಬಾಳುಗೋಡು ಗ್ರಾಮದಿಂದ ಬೆಳಿಗ್ಗೆ 8:00 ಗಂಟೆಗೆ ಉಪ್ಪುಕಳ ದೇವಸ್ಥಾನ, ಕೊತ್ನಡ್ಕ ಶಾಲಾ ವಠಾರ, ಮಾನಡ್ಕ, ಮುಂಡೋಕಜೆ, ಬಾಳುಗೋಡು ಭೂತಚಾವಡಿ, ಪದಕ ಬಸ್ ನಿಲ್ದಾಣ, ಬಸವನಗುಡಿ, ಕಾಂತುಕುಮೇರಿ, ಕುಡುಮುಂಡೂರು, ಉರಿಯಪ್ಪೇಶ್ವರ ದೇವಸ್ಥಾನ, ಶಿವಾಲ, ಗೋರ್ತಿಲ ಹಾಗೂ ಬೆಳಿಗ್ಗೆ 9:00 ಗಂಟೆಗೆ ಬೆಟ್ಟುಮಕ್ಕಿ, ಕಿರಿಭಾಗ, ಕಿರಿಭಾಗ ಭೂತಚಾವಡಿ ಮತ್ತು ಕೊಪ್ಪತ್ತಡ್ಕ ಭಾಗಗಳಿಂದ ಹಸಿರು ಕಾಣಿಕೆ ವಾಹನಗಳು ಹೊರಡಲಿವೆ….. ಐನೆಕಿದು ಗ್ರಾಮದಿಂದ ಬೆಳಿಗ್ಗೆ 8:00 ಗಂಟೆಗೆ ನೂಜಿಬೆಟ್ಟು, ಕೋಟೆಅಂಗಡಿ, ಕೊಪ್ಪಲಗದ್ದೆ, ನೆತ್ತಾರ, ಐನೆಕಿದು ಶಾಲೆ, ನವಗ್ರಾಮ, ಕಟ್ರಮನೆ, ಐಪಿನಡ್ಕ, ಗುಂಡಡ್ಕ, ಕುಜುಂಬಾರು, ಇಜಿನಡ್ಕ, ಪೈಲಾಜೆ ಮತ್ತು ಕೆದಿಲ ಭಾಗಗಳಿಂದ ಹಸಿರು ಕಾಣಿಕೆ ವಾಹನಗಳು ಹೊರಡಲಿವೆ….. ಹರಿಹರ ಪಳ್ಳತ್ತಡ್ಕ ಗ್ರಾಮದಿಂದ ಬೆಳಿಗ್ಗೆ 8:00 ಗಂಟೆಗೆ ಕಜ್ಜೋಡಿ, ಗುಂಡಿಹಿತ್ಲು, ಪಳ್ಳತ್ತಡ್ಕ, ಹರಿಹರಪೇಟೆ, ಕೊಪ್ಪತ್ತಡ್ಕ, ಕುಕ್ಕುಂದ್ರಡ್ಕ, ಕೆರೆಕ್ಕೋಡಿ, ಎಲ್ಲಪಡ್ಕ, ಕರಂಗಲ್ಲು, ಮುಳ್ಳುಬಾಗಿಲು ಹಾಗೂ ಬೆಳಿಗ್ಗೆ 10:00 ಗಂಟೆಗೆ ಬೆಂಡೋಡಿ, ಕಲ್ಲೇಮಠ ಹಾಗೂ ಬೆಳಿಗ್ಗೆ 11:00 ಗಂಟೆಗೆ ಮಲ್ಲಾರದಿಂದ ಹಸಿರು ಕಾಣಿಕೆ ವಾಹನ ಹೊರಡಲಿದೆ….. ಪೂರ್ವಾಹ್ನ 10:30ಕ್ಕೆ ಹರಿಹರ ಪಳ್ಳತ್ತಡ್ಕದ ಬಸ್ ನಿಲ್ದಾಣದ ಮುಂಭಾಗದಲ್ಲಿ ಮೂರು ಗ್ರಾಮಗಳ ಭಕ್ತಾದಿಗಳು ಹಸಿರು ಕಾಣಿಕೆ ವಾಹನಗಳ ಜೊತೆಗೂಡಿ ಆರತಿ ಬೆಳಗುವುದರೊಂದಿಗೆ ವಾದ್ಯಘೋಷ, ಗೊಂಬೆ ಕುಣಿತ ಹಾಗೂ ಭಜನಾ ಹಿಮ್ಮೇಳದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ಶ್ರೀ ಹರಿಹರೇಶ್ವರ ದೇವರಿಗೆ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಸಿರು ಕಾಣಿಕೆ ಸಮರ್ಪಣೆ ಮಾಡಲಾಗುವುದು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading