Ad Widget

ಗುತ್ತಿಗಾರು :- ಮಕ್ಕಳ ಶಾಲಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಇದರ ವತಿಯಿಂದ ಗುತ್ತಿಗಾರು ವಲಯದ ಗುತ್ತಿಗಾರು ಪಿ.ಯಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಶಾಲಾ ಶಿಬಿರವನ್ನು ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಯಿತು.

. . . . . . . . .

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಎ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ರವರು ಬಣ್ಣದ ಪೇಪರ್ ನಲ್ಲಿ ಹೂ ಗುಚ್ಛ ತಯಾರು ಮಾಡುವುದರೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ “ಕಲರ್ ಪೇಪರ್ ನಲ್ಲಿ ವಿವಿಧ ರೀತಿಯ ನಕ್ಷತ್ರಗಳು, ಪಕ್ಷಿಗಳ ಆಕೃತಿ ಪೇಪರ್ ನಲ್ಲಿ ಹೂಗುಚ್ಛ ತಯಾರು ಮಾಡುವುದರ ಮುಖಾಂತರ ಮಕ್ಕಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡ ಗ್ರಾಮಾಭಿವೃಧಿಯ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.

. . . . . . .

ವಲಯದ ಮೇಲ್ವಿಚಾರಕರಾದ ರಾಜೇಶ್.ಪಿ ರವರು ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಶಾಲೆಗಳಿಗೆ ಬೆಂಚು ಡೆಸ್ಕ್ ವಿತರಣೆ ಹಣ್ಣಿನ ಗಿಡ ನಾಟಿ ಹಾಗೂ ಜ್ಞಾನ ದೀಪ ಶಿಕ್ಷಕಿಯ ಒದಗಣೆ ಮತ್ತು ಕಟ್ಟಡ ಕಾಮಗಾರಿಗಳಿಗೆ ಸಮುದಾಯ ಅಭಿವೃದ್ಧಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಉಮಾವತಿ, ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯಾದ ಲೋಕೇಶ್ವರ ಡಿ. ಆರ್ ಮತ್ತು ಹಿರಿಯ ಶಿಕ್ಷಕರಾದ ಪೂರ್ಣಿಮಾ ಹಾಗೂ ಮಕ್ಕಳಿಗೆ ವಿವಿಧ ಕ್ರಾಪ್ಟ್ ಚಟುವಟಿಕೆಯನ್ನು ಗುತ್ತಿಗಾರು ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಶಿಕ್ಷಕಿಯಾದ ಶ್ರೀಮತಿ ಚೂಡಾಮಣಿ ರವರು ನಡೆಸಿಕೊಟ್ಟರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading