Ad Widget

ದೇವಚಳ್ಳ : ಕೃಷಿಕರಿಗೆ ಏಣಿ ವಿತರಣೆ – ಸೌಲಭ್ಯ ಪಡೆದ 110 ಜನ ಫಲಾನುಭವಿಗಳು

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ., ಕೇಂದ್ರ ವಿಟ್ಲ ಇವರ ವತಿಯಿಂದ ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿಕರಿಗೆ ಏಣಿಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ದೇವಚಳ್ಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅಧಿಕಾರಾವಧಿಯ ಕೊನೆಯ ದಿನವಾದ ಫೆ.17 ರಂದು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ಲಭ್ಯವಿರುವ ವಿವಿಧ ಕೃಷಿ ಸೌಲಭ್ಯಗಳು, ರೇಷ್ಮೆ ಹಾಗೂ ತಾಳೆ ಕೃಷಿ ಕುರಿತು ಪ್ರಾಥಮಿಕ ಮಾಹಿತಿಯನ್ನು ಶ್ರೀಮತಿ ಮೋಹಿನಿ ವಿಶ್ವನಾಥ್ (ನಿಶಾ ) ಸಂಪಾಜೆ ನೀಡಿದರು. ದೇವಚಳ್ಳ ಗ್ರಾಮಕ್ಕೆ ಸಂಸ್ಥೆಯ ಯೋಜನೆಯನ್ನು ಪರಿಚಯಿಸಿ ಕೃಷಿಕರಿಗೆ ಏಣಿಗಳನ್ನು ಕೊಡಿಸುವಲ್ಲಿ ಸಹಕರಿಸಿದ ರಾಜೇಶ್ ಬಟ್ಟಕಜೆ ಹಾಗೂ ಶ್ವೇತಾ ಬಟ್ಟಕಜೆ ಅವರನ್ನು ಪಂಚಾಯತ್ ವತಿಯಿಂದ ಗೌರವಿಸಿ, ಇವರ
ಸಹಕಾರದಿಂದ ಈ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ತಲುಪಿಸಲು ಸಾಧ್ಯವಾಯಿತು ಎಂದು ತಿಳಿಸಿ, ಇನ್ನು ಮುಂದೆಯೂ ಇವರ ಸಹಕಾರದಿಂದಲೇ
ಗ್ರಾಮ ಪಂಚಾಯತ್ ಮುಖಾಂತರವೇ ವಿತರಣೆ ಕಾರ್ಯ ನಡೆಯುತ್ತದೆ ಎಂದು ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಅತಿಥಿಯಾಗಿ ಗುತ್ತಿಗಾರು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ಭಾಗವಹಿಸಿ ಫಲಾನುಭವಿಗಳಿಗೆ ಏಣಿ ವಿತರಿಸಿದರು. ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಧಿಕಾರಿ ರಾಜಣ್ಣ ಪಿಡಿಒ, ಅಜಿತ್
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾದ ಲೀಲಾವತಿ ಸೇವಾಜೆ,ಸದಸ್ಯರಾದ, ಪ್ರೇಮಲತಾ ಕೇರ,ರಮೇಶ್ ಪಡ್ಪು,ದುರ್ಗಾದಾಸ್ ಮೆತ್ತಡ್ಕ,ಪ್ರಶಾಂತ ಮೆದು ,ಸುಲೋಚನಾ ದೇವ , ಭವಾನಿ ಶಂಕರ್ ಮುಂಡೋಡಿ , ರಾಜೇಶ್ವರಿ ಮಾವಿನಕಟ್ಟೆ, ಸೀತಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮದ ಕೃಷಿಕರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಸಭೆಯಲ್ಲಿ ಭಾಗವಹಿಸಿದರು.ಒಟ್ಟು ಗ್ರಾಮದ 110 ಜನ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading