Ad Widget

ಕುಕ್ಕೆ ಸುಬ್ರಹ್ಮಣ್ಯ : ಶಿವರಾತ್ರಿಯ ಪ್ರಯುಕ್ತ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು

ಸುಬ್ರಹ್ಮಣ್ಯ ಫೆಬ್ರವರಿ 16 : ಮಹಾಶಿವರಾತ್ರಿಯ ರವಿವಾರದಂದು ಬಹಳಷ್ಟು ದೇವಸ್ಥಾನಗಳಲ್ಲಿ ಭಕ್ತರು ಜಮಾಯಿಸಿ ದೇವರ ದರ್ಶನ ಪಡೆಯುತ್ತಿದ್ದರೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮರುದಿನ ಅಂದರೆ ಸೋಮವಾರ ಬೆಳಗ್ಗಿನ ಜಾವದಿಂದಲೇ ಅಧಿಕ ಸಂಖ್ಯೆಯ ಭಕ್ತರು ಬಸ್ಸು ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು.ಬೆಳ್ಳಂಬೆಳಗ್ಗೆ ಬಸ್ಸು ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಿದ ಭಕ್ತಾದಿಗಳು ಪವಿತ್ರ ಕುಮಾರಧಾರ ಹೊಳೆಯಲ್ಲಿ ತೀರ್ಥ ಸ್ನಾನ ಮಾಡಿ ಅಲ್ಲಿಂದ ನಡಿಗೆಯಲ್ಲಿ ಶ್ರೀ ದೇವಳಕ್ಕೆ ಬಂದರು. ಕುಕ್ಕೆ ದೇವಳದಲ್ಲಿ ಶಿವಭಕ್ತರ ಸುಗಮ ದರ್ಶನ ಹಾಗೂ ಪ್ರಸಾದ ವ್ಯವಸ್ಥೆಗೆ ಸಕಲ ಸಿದ್ಧತೆಗಳನ್ನ ದೇವಳದ ಅಧಿಕಾರಿ ವರ್ಗದವರು ಮಾಡಿದ್ದರು. ದೇವಳದ ಹೊರಗೆ ಬೀದಿಯಲ್ಲಿ ವಿಪರೀತ ಬಿಸಿಲಿದ್ದ ಕಾರಣ ನೆರಳಿನ ಆಶ್ರಯಕ್ಕಾಗಿ ಶಾಮಿಯಾನ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೊರಗಡೆ ಪಾರ್ಕಿಂಗ್ ನ ಎಲ್ಲಾ ಪ್ರದೇಶಗಳು ವಾಹನಗಳಿಂದ ತುಂಬಿದ್ದು, ಕೆ‌.ಎಸ್.ಆರ್.ಟಿ.ಸಿ ಬಸ್ಸುಗಳು ನಿರಂತರವಾಗಿ ಭಕ್ತರ ಪ್ರಯಾಣಕ್ಕೆ ಹೊರಡಲು ಸಜ್ಜಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದವು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading