Ad Widget

ಎಲಿಮಲೆ : ರಕ್ತದಾನ ಮತ್ತು ಅರೋಗ್ಯ ತಪಾಸಣಾ ಶಿಬಿರ – ಸನ್ಮಾನ

ಗ್ರಾಮ ಪಂಚಾಯತ್ ದೇವಚಳ್ಳ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಅರೋಗ್ಯ ಉಪಕೇಂದ್ರ ಮಾವಿನಕಟ್ಟೆ ಮತ್ತು ಕಂದ್ರಪ್ಪಾಡಿ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರೌಢಶಾಲೆ ಎಲಿಮಲೆ, ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಲಯನ್ಸ್ ಕ್ಲಬ್ ಗುತ್ತಿಗಾರು, ಜೇಸಿ ಸುಳ್ಯ ಪಯಸ್ವಿನಿ, ಶಿವಾಜಿ ಫ್ರೆಂಡ್ಸ್ ಕ್ಲಬ್ (ರಿ) ಹುರುಳಿಯಡ್ಕ, ನುಸ್ರುತ್ತುಲ್ ಇಸ್ಲಾಂ ಅಸೋಸಿಯೇಷನ್ (ರಿ) ಎಲಿಮಲೆ ಇವರ ಸಂಯುಕ್ತ ಆಶ್ರಯದಲ್ಲಿ ಫೆ. 15ರಂದು ಬೃಹತ್ ರಕ್ತದಾನ ಮತ್ತು ಅರೋಗ್ಯ ತಪಾಸಣಾ ಶಿಬಿರವು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೇಕಲ್ಲು ವಹಿಸಿದ್ದರು. ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿಗಳಾದ ಡಾ. ರಾಮಕೃಷ್ಣ ರಾವ್ ರವರು ದೀಪ ಬೆಳಗುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿ ರಕ್ತದಾನದ ಮಹತ್ವ, ಇದರಿಂದ ರಕ್ತದಾನಿಗಳಿಗಾಗುವ ಪ್ರಯೋಜನ ಮತ್ತು ಯಾರ್ಯಾರು ರಕ್ತದಾನ ಮಾಡಬಹುದು ಎಂಬುದನ್ನು ಸವಿವರವಾಗಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಸುಬ್ರಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಯವರು ಆಗಮಿಸಿದ್ದರು. ಈ ಸಂಧರ್ಭದಲ್ಲಿ ಯೋಧರಾಗಿ ದೇಶ ಸೇವೆ ಮಾಡುತ್ತಿರುವ ಸ್ಥಳೀಯ ಯುವಕರಾದ ಶಶಿ ಶೇಖರ್ ಕಲ್ಲುಕಟ್ಟೆ, ಹರ್ಷಿತ್ ಎಸ್ ಎನ್, ಪೂರ್ಣೇಶ್ವರ ನಾರ್ಕೊಡು, ರೋಟರಿ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ , ಶ್ರೀಮತಿ ಸಜನಿ ಮಾರ್ಟಿಸ್, ಶ್ರೀ. ಕುಲದೀಪ್ ಇವರುಗಳನ್ನು ಸಂಘಟಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಆಂಜನೇಯ ರೆಡ್ಡಿಯವರು ಯೋಧರು ನಮ್ಮ ದೇಶದ ಹೆಮ್ಮೆ. ಯೋಧರು ತಮ್ಮ ಮನೆ ಮತ್ತು ತಮ್ಮವರನ್ನೆಲ್ಲಾ ಬಿಟ್ಟು ಹಗಲು ಇರುಳೆನ್ನದೆ ದೇಶ ಸೇವೆಯಲ್ಲಿ ತೊಡಗಿರುವುದರಿಂದ ನಾವಿಲ್ಲಿ ಆರಾಮವಾಗಿ ಜೀವನ ಸಾಗಿಸುತ್ತಿದ್ದೇವೆ. ಅಂತಹ ಯೋಧರ ಕುಟುಂಬದವರ ಕಷ್ಟ ಹಾಗೂ ನೋವಿಗೆ ನಾವು ಸಕಾಲದಲ್ಲಿ ಸ್ಪಂದಿಸುವುದೇ ನಾವು ನಮ್ಮ ಸೈನಿಕರಿಗೆ ಸಲ್ಲಿಸುವ ಕೃತಜ್ಞತೆ ಎಂದರು . ಇಂದಿನ ಯುವಜನಾಂಗ ದುಶ್ಚಟಗಳ ದಾಸರಾಗುತ್ತಿದ್ದು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ತೀರಾ ಕಳವಳಕಾರಿ ವಿಚಾರವಾಗಿದ್ದು ಯುವ ಜನಾಂಗ ದುಷ್ಚಟಗಳಿಂದ ದೂರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು. ನಾವಿಂದು ವಿಶ್ವಗುರುವಿನ ಸ್ಥಾನದಲ್ಲಿದ್ದು, ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ.ನಾವು ನಮ್ಮ ವೇದ ಪುರಾಣಗಳನ್ನು ರಾಮಾಯಣ, ಮಹಾಭಾರತದಂತಹ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ಹಿತನುಡಿ ಗಳನ್ನಾಡಿದರು. ದಕ್ಷಿಣ ಕನ್ನಡ ವಿದ್ಯಾವಂತರ, ಬುದ್ದಿವಂತರ ನಾಡು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಆದರೆ ನಮ್ಮ ಯುವಜನಾಂಗ ಸರಕಾರಿ ಸೇವೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಯುವಕರು ಸರಕಾರಿ ಸೇವೆಗೆ ಸೇರುವ ಮೂಲಕ ದೇಶದ ರಕ್ಷಣೆಯ ಹಾಗೂ ಸಮಾಜದ ಅಭಿವೃದ್ಧಿ ಹಾಗೂ ಉನ್ನತಿಗೆ ಕಟಿಬದ್ದರಾಗಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸುಬ್ರಮಣ್ಯ ಠಾಣಾಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಶ್ರೀ. ಆಂಜನೇಯ ರೆಡ್ಡಿಯವರನ್ನು ಗ್ರಾಮಸ್ಥರ ಪರವಾಗಿ ಗ್ರಾಮದ ಪ್ರಥಮ ಪ್ರಜೆ ಶೈಲೇಶ್ ಅಂಬೆಕಲ್ಲು ಸನ್ಮಾನಿಸಿ ಗೌರವಿಸಿದರು .ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಅಧ್ಯಕ್ಷರಾದ ಪ್ರವೀಣ್ ಮುಂಡೋಡಿ, ಜೇಸಿ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರೂ, ರೂವಾರಿಗಳೂ ಆದ ಶೈಲೇಶ್ ಅಂಬೇಕಲ್ಲು ಮಾತನಾಡಿ ರಕ್ತದಾನದಿಂದ ನಾವು ಅರೋಗ್ಯವಂತರಾಗಿ ಜೀವನವನ್ನು ನಡೆಸಬಹುದು ಮತ್ತು ರಕ್ತದಾನ ಮಾಡುವ ಮೂಲಕ ಇನ್ನೊಂದು ಅಮೂಲ್ಯ ಜೀವವನ್ನು ಕಾಪಾಡುವಂತ ಪುಣ್ಯಕಾರ್ಯವನ್ನು ಮಾಡಬಹುದು ಎಂದರು. ಅದೇ ರೀತಿ ನಮ್ಮ ರಕ್ತದಾನ ಶಿಬಿರವು ಇನ್ನು ಮುಂದೆಯೂ ನಿರಂತರವಾಗಿ ನಡೆಯುತ್ತದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಹಾಗೂ ಸಹಬಾಗಿತ್ವ ಸದಾ ಇರಲಿ ಎಂದರು.ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ – ಸರಕಾರಿ ಪ್ರೌಢಶಾಲೆ ಎಲಿಮಲೆ ಇದರ ಅಧ್ಯಕ್ಷರಾದ ರಾಜೇಶ್ ಅಂಬೇಕಲ್ಲು, ಶಿವಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಹಿಮಕರ ಪರ್ಲೇಡಿ, ಕಾರ್ಯದರ್ಶಿ ರೂಪಾನಂದ ಚಳ್ಳ, ನುಸ್ರುತ್ತುಲ್ ಇಸ್ಲಾಂ ಅಸೋಸಿಯೇಷನ್ ಎಲಿಮಲೆ ಇದರ ಕಾರ್ಯದರ್ಶಿ ಸೂಫಿ ಎಲಿಮಲೆ, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಮೂಲೆತೋಟ ಉಪಸ್ಥಿತರಿದ್ದರು. ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರುಗಳಾದ ದುರ್ಗಾದಾಸ್ ಮೆತ್ತಡ್ಕ, ಪ್ರಶಾಂತ್ ಮೆದು, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯರಾದ ವೇಣುಗೋಪಾಲ್ ಪುನ್ಕುಟ್ಟಿ, ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಮತಿ ಸಂಧ್ಯಾ ಮುರಳೀಧರ ಪುನ್ಕುಟ್ಟಿ ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಪದಾಧಿಕಾರಿಗಳಾದ ಆನಂದ ಗೌಡ ಅಂಬೇಕಲ್ಲು, ಪುರೊಷೋತ್ತಮ ಮಣಿಯಾನ, ಜೆಸಿಐ ಕಾರ್ಯದರ್ಶಿ ಶ್ರೀಮತಿ. ತಾರಾ ಚೂಂತಾರು, ಜೊತೆ ಕಾರ್ಯದರ್ಶಿ ವಿನೋದ್ ಮೂಡಗದ್ದೆ, ಜೆಸಿಐ ಪ್ರಶಾಂತ್ ಅಂಬೇಕಲ್ಲು, ಜೆಸಿಐ ಮಹೇಶ್ ಮೇರ್ಕಜೆ, ಕಿಶೋರ್ ಅಂಬೇಕಲ್ಲು, ಸುಪ್ರೀತ್ ಮೋಂಟಡ್ಕ, ಹಿರಿಯ ವಿದ್ಯಾರ್ಥಿ ಸಂಘ – ಸರಕಾರಿ ಪ್ರೌಢ ಶಾಲೆ ಎಲಿಮಲೆ ಇದರ ಕಾರ್ಯದರ್ಶಿಗಳಾದ ಮುರಳೀಧರ ಪುನ್ಕುಟ್ಟಿ, ಉಪಾಧ್ಯಕ್ಷರಾದ ಹಾರಿಸ್ ಪಳ್ಳಿಕಲ್, ಕ್ರೀಡಾ ಕಾರ್ಯದರ್ಶಿ ಪ್ರಸನ್ನ ಎಸ್ ಎನ್ ಹಾಗೂ ಸಮಿತಿ ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ. ಪುರುಷೋತ್ತಮ್ ಸುಳ್ಳಿ, ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಇದರ ಸ್ಥಾಪಕಾಧ್ಯಕ್ಷ ವಿಜಯಕಾಂತ್ ಮಾವಿನಕಟ್ಟೆ, ಅಧ್ಯಕ್ಷರಾದ ಪ್ರವೀಣ್ ಮಾವಿನಕಟ್ಟೆ ಹಾಗೂ ಪದಾಧಿಕಾರಿಗಳು, ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಇದರ ಪದಾಧಿಕಾರಿಗಳು, ನುಸ್ರುತ್ತುಲ್ ಇಸ್ಲಾಂ ನ ಪದಾಧಿಕಾರಿಗಳು, ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯಧಿಕಾರಿ ಶ್ರೀಮತಿ. ಮೋನಿಷಾ , ಆಶಾ ಕಾರ್ಯಕರ್ತರು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸರಕಾರಿ ಪ್ರೌಢಶಾಲೆ ಎಲಿಮಲೆ ಇದರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೇಕಲ್ಲು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿ ತಮ್ಮ ಅರೋಗ್ಯ ತಪಾಸಣೆ ಮಾಡಿಸಿಕೊಂಡು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು ಹಾಗೂ 7 ಮಂದಿ ಮಹಿಳೆಯರೂ ಸೇರಿದಂತೆ ಒಟ್ಟು 58 ಜನ ರಕ್ತದಾನ ಮಾಡಿದರು. ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆದ ಶಿಬಿರದಲ್ಲಿ ಹಾಜರಿದ್ದ ಪ್ರತಿಯೊಬ್ಬರಿಗೂ ಉಪಹಾರ ಹಣ್ಣುಹಂಪಲು ಹಾಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading