Ad Widget

ಹರಿಹರ ಪಳ್ಳತ್ತಡ್ಕ : ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ “ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ”

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ಶುಕ್ರವಾರದಿಂದ ಫೆ.22 ಆದಿತ್ಯವಾರದವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ “ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ”ವು ಜರುಗಲಿದ್ದು, ಫೆ.14ರಂದು ಗೊನೆ ಮುಹೂರ್ತ ನೆರವೇರಿತು.ಜಾತ್ರೋತ್ಸವದ ಮೊದಲನೇ ದಿನವಾದ ಫೆ.20ನೇ ಶುಕ್ರವಾರದಂದು ಬೆಳಿಗ್ಗೆ 9:00 ಗಂಟೆಗೆ ಹಸಿರು ಕಾಣಿಕೆ ಪ್ರಾರಂಭ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ 8:00 ಗಂಟೆಗೆ ಮಹಾಪೂಜೆ, ರಾತ್ರಿ 8:15ರಿಂದ ಅನ್ನಸಂತರ್ಪಣೆ ನೆರವೇರಲಿದೆ. ಜೊತೆಗೆ ಫೆ.20 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 4:30 ರಿಂದ 6:30 ರವರೆಗೆ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 6:30 ರಿಂದ 8:00 ರವರೆಗೆ ಕಪಿಲೇಶ್ವರ ಮ್ಯೂಸಿಕ್ ತಂಡ ಇವರಿಂದ ಪಿಟೀಲು, ಕೊಳಲು ಮತ್ತು ಚೆಂಡೆ ವಾದನ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದ್ದು, ನಂತರ ರಾತ್ರಿ 8:00 ರಿಂದ 9:30 ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಥರ್ ಗೌಡ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರಬೀಡು ಹಾಗೂ ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್ ಗಂಗಾಧರ ರವರು ಉಪಸ್ಥಿತರಿರಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ ಅವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ನಂತರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರುಗಳಾದ ರಾಮಕೃಷ್ಣ ಕುದ್ಕುಳಿ ಮತ್ತು ಡಾ| ಚಂದ್ರಶೇಖರ ಕಿರಿಭಾಗ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಬ್ರಹ್ಮಕಲಶೋತ್ಸವ ನಿಧಿ ಸಂಗ್ರಾಹಕ ಸಮಿತಿಯ ಮಾಜಿ ಅಧ್ಯಕ್ಷರಾದ ಭವಾನಿಶಂಕರ ಪಿಂಡಿಮನೆ, ಸುಬ್ರಹ್ಮಣ್ಯ ಮೆಸ್ಕಾಂ ನ ದೇವಪ್ಪ, ಹರಿಹರ ಪಳ್ಳತ್ತಡ್ಕ ಮೆಸ್ಕಾಂ ನ ವಿಜಯ ಕುಮಾರ್ ಮತ್ತು ಪ್ರಶಾಂತ್ ಪೂಜಾರಿ ಹಾಗೂ ಕೊಲ್ಲಮೊಗ್ರು ಮೆಸ್ಕಾಂ ಮೆಕ್ಯಾನಿಕ್ ನಿತ್ಯಾನಂದ.ವೈ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ನಂತರ ರಾತ್ರಿ 9:30 ರಿಂದ 11:00 ರವರೆಗೆ ಊರು ಕೂಡುಕಟ್ಟಿನ ಮಕ್ಕಳಿಂದ ಮತ್ತು ಸಂಘ-ಸಂಸ್ಥೆಗಳ ಸದಸ್ಯರುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಜಾತ್ರೋತ್ಸವದ ಎರಡನೇ ದಿನವಾದ ಫೆ.21ನೇ ಶನಿವಾರದಂದು ಬೆಳಿಗ್ಗೆ 6:00 ಗಂಟೆಯಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6:00 ಗಂಟೆಗೆ ದೀಪಾರಾಧನೆ, ಚೆಂಡೆವಾದನ, ರಾತ್ರಿ 7:00 ಗಂಟೆಗೆ ಮಹಾಪೂಜೆ ಹಾಗೂ ರಾತ್ರಿ 8:00 ಗಂಟೆಯಿಂದ ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಮತ್ತು ರಾಜಾಂಗಣ ಪ್ರಸಾದ ನಡೆಯಲಿದೆ.ಜೊತೆಗೆ ಫೆ.21 ರಂದು ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ ಹಾಗೂ ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಬಾಳುಗೋಡು ಗ್ರಾಮಗಳ ಎಲ್ಲಾ ಭಜನಾ ಮಂಡಳಿಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6:00 ಗಂಟೆಯಿಂದ ದೀಕ್ಷಿತ್ ಎನ್.ವಿ, ರಾಮದಾಸ್ ಇಜಿನಡ್ಕ, ಹರ್ಷ ಕಲ್ಲೇಮಠ ಹಾಗೂ ಕಾರ್ತಿಕ್ ಇಜಿನಡ್ಕ ರವರ ಪ್ರಾಯೋಜಕತ್ವದಲ್ಲಿ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದ್ದು, ರಾತ್ರಿ 11:30 ರಿಂದ ಹರಿಹರ ಪಳ್ಳತ್ತಡ್ಕದ ಹರಿಹರೇಶ್ವರ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ಬಯಲಾಟ ನಡೆಯಲಿದೆ.ಜಾತ್ರೋತ್ಸವದ ಮೂರನೇ ಹಾಗೂ ಕೊನೆಯ ದಿನವಾದ ಫೆ.22ನೇ ಭಾನುವಾರದಂದು ಬೆಳಿಗ್ಗೆ 6:00 ಗಂಟೆಯಿಂದ ಸಂಜೆಯವರೆಗೆ ಉಳ್ಳಾಗುಳು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವವು ಸಂಪನ್ನಗೊಳ್ಳಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading