Ad Widget

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವವು ಫೆ.20 ರಿಂದ 22ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಇಂದು(ಫೆ.14) ಶ್ರೀ ದೇವಳದಲ್ಲಿ ಗೊನೆ ಮುಹೂರ್ತ ನೆರವೇರಿತು.
ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಸದಸ್ಯರಾದ ದಯಾನಂದ ಕಟ್ಟೆಮನೆ, ಗುಣವರ್ಧನ ಕೆದಿಲ, ಬೆಳ್ಯಪ್ಪ ಖಂಡಿಗೆ, ವಿನೂಪ್ ಮಲ್ಲಾರ, ಕೇಶವ ಕೊಪ್ಪತ್ತಡ್ಕ, ಸವಿತಾ ಕಟ್ಟೆಮನೆ, ಪದ್ಮಿನಿ ಪಲ್ಲತ್ತಡ್ಕ, ಲಕ್ಷ್ಮಣ ಕುಂಜತ್ತಾಡಿ, ರಾಮಕೃಷ್ಣ ಬಾಳುಗೋಡು, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಗೌಡ ಕಿರಿಭಾಗ ಮತ್ತು ಸದಸ್ಯರು, ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು ಹಾಗೂ ಕೂಡುಗಟ್ಟಿನ ಭಕ್ತಾದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading