Ad Widget

ಗುತ್ತಿಗಾರು: ಅಡ್ಡನಪಾರೆಯಲ್ಲಿ  ಕೊಳೆತ ಸ್ಥಿತಿಯಲ್ಲಿ  ಯುವಕನ ಮೃತದೇಹ ಪತ್ತೆ

ಅಮಲು ಪದಾರ್ಥ ಸೇವಿಸಿ ತನ್ನ ಮನೆಗೆ ಬೆಂಕಿ ಹಚ್ಚಿ ನಾಪತ್ತೆಯಾಗಿದ್ದ ಯುವಕ

. . . . . . . . .

ಯುವಕನೋರ್ವನ ಮೃತದೇಹ ಶೌಚಾಲಯದೊಳಗೆ  ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗುತ್ತಿಗಾರು ಗ್ರಾಮದ ಅಡ್ಡನಪಾರೆಯಲ್ಲಿ ಫೆ.12ರಂದು ಸಂಜೆ ವರದಿಯಾಗಿದೆ..

. . . . . . .

ಅಡ್ಡನಪಾರೆ ಗೋಪಾಲ ನಾಯ್ಕ ಅವರ ಪುತ್ರ ಮಹಾಬಲ ಅವರು ಫೆ.4ರಂದು ರಾತ್ರಿ ಅಮಲು ಪದಾರ್ಥ ಸೇವಿಸಿ, ಮನೆಗೆ ಬಂದು ತನ್ನ ಮನೆಗೆ ಬೆಂಕಿ ಹಚ್ಚಿ ಅಲ್ಲಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಮನೆಗೆ ಬೆಂಕಿ ಹಚ್ಚಿದ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆಯಲ್ಲಿ ಅವರ ತಂದೆ ಗೋಪಾಲ ನಾಯ್ಕ ಅವರು ದೂರು ನೀಡಿದ್ದರು. 
ನಾಪತ್ತೆಯಾಗಿದ್ದ ಮಹಾಬಲ ಅವರ ಮೃತದೇಹ  ಅವರ ಮನೆಯ ಬಳಿಯಿಂದ ಅರ್ಧ ಕಿ. ಮೀ. ದೂರದ ವಾಸವಿಲ್ಲದ ಮನೆಯೊಂದರ ಶೌಚಾಲಯದ ಒಳಗೆ  ಫೆ.12ರಂದು ಸಂಜೆ ಪತ್ತೆಯಾಗಿದೆ.
ಸ್ಥಳೀಯ ಮನೆಯವರಿಗೆ ವಾಸನೆ ಬರುತ್ತಿರುವುದನ್ನು ಗಮನಿಸಿ,  ಶೌಚಾಲಯದೊಳಗೆ ನೋಡಿದಾಗ ಮೃತದೇಹ ಪತ್ತೆಯಾಯಿತೆನ್ನಲಾಗಿದೆ.
ಬಳಿಕ  ಅವರ ಮನೆಯವರಿಗೆ ವಿಷಯ ತಿಳಿಸಿದರೆನ್ನಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಇನ್ನಷ್ಟೆ ಆಗಮಿಸಬೇಕೆಂದು ತಿಳಿದುಬಂದಿದೆ.
ಮಹಾಬಲ ಅವಿವಾಹಿತನಾಗಿದ್ದು   27 ವರ್ಷ ವಯಸ್ಸಾಗಿತ್ತು. ತಂದೆ,  ತಾಯಿ ಉಮಾವತಿಯವರನ್ನು ಅಗಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading