Ad Widget

ಕುಕ್ಕೆ ಸುಬ್ರಹ್ಮಣ್ಯ : ಮಾ.03 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರುಶನ ಸಮಯದಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.03 ಮಂಗಳವಾರದಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರೀ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ ಮಾಡಲಾಗಿದ್ದು, ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಪಸಂಸ್ಕಾರ ಪ್ರಾರಂಭ ಇಲ್ಲ : ಮಾ.02 ಸೋಮವಾರ ಮತ್ತು ಮಾ.03 ಮಂಗಳವಾರದಂದು ಸರ್ಪಸಂಸ್ಕಾರ ಪೂಜೆ ಪ್ರಾರಂಭವಿರುವುದಿಲ್ಲ. ಮಾ.03ರಂದು ಯಾವುದೇ ಸೇವೆಗಳು ದೇವಳದಲ್ಲಿ ನಡೆಯುವುದಿಲ್ಲ. ಈ ದಿನ ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 8:00 ಗಂಟೆಗೆ ನಡೆಯಲಿದೆ. ಬೆಳಗ್ಗೆ 9:00 ಗಂಟೆಯ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ. ಬೆಳಗ್ಗಿನ ಉಪಹಾರ 9:00 ಗಂಟೆ ತನಕ ಮಾತ್ರ ನಡೆಯಲಿದೆ. ಮಧ್ಯಾಹ್ನ ಪ್ರಸಾದ ಬೋಜನ ವ್ಯವಸ್ಥೆ ಇರುವುದಿಲ್ಲ. ರಾತ್ರಿ ಗಂಟೆ 7:00ರ ನಂತರ ಶ್ರೀ ದೇವಳದಲ್ಲಿ ಬಾಗಿಲು ತೆರೆಯಲಾಗುವುದು. ಬಳಿಕ ಶ್ರೀ ದೇವರ ಮಹಾಪೂಜೆ ನಡೆಯಲಿದೆ ಎಂದು ಶ್ರೀ ದೇವಳದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading