Ad Widget

ಸುಳ್ಯದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಧಕರಿಗೆ ಸನ್ಮಾನ

ಸುಳ್ಯದ ಸಂತ ಜೋಸೆಫ್ ಶಾಲೆಯಲ್ಲಿ ರಾಷ್ಟ್ರಮಟ್ಟದ ಯೋಗ ಹಾಗೂ ರಾಜ್ಯಮಟ್ಟದ ಗೀತಾ ಗಾಯನ ಸ್ಪರ್ಧೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ತರಬೇತಿ ಹಾಗು ಪ್ರೋತ್ಸಾಹ ನೀಡಿದ ಶಿಕ್ಷಕರುಗಳಿಗೆ ಅಭಿನಂದನ ಕಾರ್ಯಕ್ರಮವು ಫೆ.09 ರಂದು ನಡೆಯಿತು.

ಸಾಧಕರನ್ನು ಜ್ಯೋತಿ ಸರ್ಕಲ್ ನಿಂದ ಶಾಲಾ ವಠಾರದವರೆಗೆ ತೆರೆದ ಜೀಪಿನಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಸಂಸ್ಥೆಯ ಜೊತೆ ಕಾರ್ಯದರ್ಶಿ ರೆ.ಫಾ.ಆಲ್ವಿನ್ ಎಡ್ವರ್ಡ್ ಡಿ ಕುನ್ಹ ವಹಿಸಿದ್ದರು.

ವೇದಿಕೆಯಲ್ಲಿ ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯದ ಸೂಫಿ ಪೆರಾಜೆ ಮಾತನಾಡುತ್ತಾ “ಈ ರೀತಿಯ ಸನ್ಮಾನವೂ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆ  ನೀಡುತ್ತದೆ. ಮತ್ತು ಉಳಿದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸಾಧನೆಯನ್ನು ಮಾಡಬೇಕು” ಎಂದು ಶುಭ ಕೋರಿದರು.

ಶಿಕ್ಷಕ ರಕ್ಷಕ ಸಂಘದ  ಉಪಾಧ್ಯಕ್ಷರಾದ ಶ್ರೀಮತಿ ಸುಮಲತಾ, ಶ್ರೀಮತಿ ಸುನಿತಾ ಮೊಂತೆರೊ, ಪ್ರವೀಣ್ ಕುಮಾರ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನಿಲ್ ಮಸ್ಕರೇನಸ್  ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಸೋನಾ ಅಡ್ಕಾರ್ ಹಾಗೂ ಒಂಬತ್ತನೆ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದ ಹಾರ್ದಿಕ ಕೆ.ಕೆ ಇವರನ್ನು ಶಾಲಾ ಜತೆ ಕಾರ್ಯದರ್ಶಿ  ರೆ.ಫಾ. ಎಡ್ವರ್ಡ್ ಡಿ ಕುನ್ಹ ಸನ್ಮಾನಿಸಿದರು.

ನಂತರ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಸ್ಕೌಟ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಯೋಗ  ತಂಡದ ಟೀಮ್ ಮೆನೇಜರ್  ಆಗಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕಿ ಶ್ರೀಮತಿ ಶೋಭ ಹಾಗೂ ಎಲ್ಲ ದಾಖಲೆಗಳನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪುಷ್ಪವೇಣಿಯವರನ್ನು  ಅಭಿನಂದಿಸಲಾಯಿತು.

ಹಾಗೆಯೇ ರಾಜ್ಯಮಟ್ಟದ  ಗೀತ ಗಾಯನ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಸ್ಕೌಟ್ ಶಿಕ್ಷಕ ಭಾನುಪ್ರಕಾಶ್ ರವರನ್ನು ಅಭಿನಂದಿಸಲಾಯಿತು.

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ 6ನೇ ತರಗತಿ ವಿದ್ಯಾರ್ಥಿ ಸುಶಾನ್.ಡಿ  ಹಾಗೂ ಜಿಲ್ಲಾ ಮಟ್ಟದ ಗೀತಾ ಗಾಯನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅಶ್ವಿಜ್ ಅತ್ರೆಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ಸಭಾಧ್ಯಕ್ಷರ ನೆಲೆಯಲ್ಲಿ  ಶಾಲಾ ಜತೆ ಕಾರ್ಯದರ್ಶಿ ರೆ. ಫಾ. ಎಡ್ವರ್ಡ್ ಡಿ ಕುನ್ಹ ಸಾಧಕರಿಗೆ, ಎಲ್ಲ ಶಿಕ್ಷಕರಿಗೆ ಶುಭ ಕೋರಿದರು.

ಶಾಲಾ ಮುಖೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಸ್ವಾಗತಿಸಿ,  ಶಿಕ್ಷಕಿ ಶ್ರೀಮತಿ ಅನಿತಾ ಮಸ್ಕರೇನಸ್  ವಂದಿಸಿದರು.

ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ ಜೆ ರೈ  ಹಾಗೂ ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಯಶಸ್ವಿಗೆ  ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading