Ad Widget

ಬೆಳ್ಳಾರೆಯ ಪಳ್ಳಿಮಜಲು ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್

ಸಿರಾಜುಲ್ ಇಸ್ಲಾಂ ಕಮಿಟಿ ಪಳ್ಳಿಮಜಲು ಹಾಗೂ ಎಸ್ಸೆಸ್ಸೆಫ್ ಪಳ್ಳಿಮಜಲು ಘಟಕದ ಆಶ್ರಯದಲ್ಲಿ
ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಫೆ 8 ರಂದು ಮುಸ್ಸಂಜೆ ಮಗ್ರಿಬ್ ನಮಾಝಿನ ನಂತರ ನಡೆಯಿತು.ಪಳ್ಳಿಮಜಲು ಜುಮುಅ: ಮಸೀದಿಯ ಖತೀಬರಾದ ಮುಹಮ್ಮದ್ ರಫೀಖ್ ಬಾಹಸನಿ ನೇತೃತ್ವ ನೀಡಿದರು.ಇಶಾ: ನಮಾಝಿನ ನಂತರ ‘ರಮಲಾನ್ ತಿಂಗಳಿಗೆ ಪೂರ್ವ ಸಿದ್ಧತಾ ತರಗತಿ’ಎಂಬ ವಿಷಯದಲ್ಲಿ ಅರಿಯಡ್ಕ ಜುಮುಅ: ಮಸೀದಿಯ ಖತೀಬರು,ಕುಂಬ್ರ ಮರ್ಕಝುಲ್ ಹುದಾದ ಮುದರ್ರಿಸರಾದ ಬಹು ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ವಿಷಯ ಮಂಡಿಸಿ ದು:ಆ ನೆರವೇರಿಸಿದರು.ಅರಿಯಡ್ಕ ಮದರಸದ ‌ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಬಾಹಸನಿ,ಪಳ್ಳಿಮಜಲು ಮದರಸ
ಮುಖ್ಯೋಪಾಧ್ಯಾಯ ಮಹಮೂದ್ ಸಖಾಫಿ,ಕೆ.ಎಂ.ಜೆ ಸುಳ್ಯ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಝಂ.ಝಂ,ಪಳ್ಳಿಮಜಲು ಸಿರಾಜುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹನೀಫ್ ಸಲಾಲ,ಪಳ್ಳಿಮಜಲು ಮಸೀದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ‌ಬೀಡು, ಪಳ್ಳಿಮಜಲು ಸ್ವಲಾತ್ ಕಮಿಟಿ ಅಧ್ಯಕ್ಷ ಮೂಸಾ ಬೀಡು,ಪಳ್ಳಿಮಜಲು ಜಮಾಅತ್ ಕಮಿಟಿ ಸದಸ್ಯರು,ಸ್ವಲಾತ್ ಕಮಿಟಿ ಸದಸ್ಯರು,ಎಸ್ಸೆಸ್ಸೆಫ್ ಪಳ್ಳಿಮಜಲು ಘಟಕದ ಅಧ್ಯಕ್ಷ ಹಫೀಝ್ ಪಳ್ಳಿಮಜಲು ಹಾಗೂ ಸದಸ್ಯರು, ಜಮಾಅತರು,ಊರಿನವರು ಉಪಸ್ಥಿತರಿದ್ದರು.ಪಳ್ಳಿಮಜಲು ಮಸೀದಿಯ ಖತೀಬರಾದ ಮುಹಮ್ಮದ್ ರಫೀಖ್ ಬಾಹಸನಿ
ಸ್ವಾಗತಿಸಿದರು.ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿತ್ತು. ಕೊನೆಗೆ ಸೀರಣಿ ವಿತರಣೆ ನಡೆಯಿತು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading