Ad Widget

ಫೆ.15 ರಂದು ಸುಳ್ಯದಲ್ಲಿ ಆಜಾದ್ ಟ್ರೋಪಿ ವಾಲಿಬಾಲ್ ಪಂದ್ಯಾಟ – ಕರಪತ್ರ ಹಾಗೂ ಟೀ-ಶರ್ಟ್ ಬಿಡುಗಡೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಹಾಗೂ ಖೇಲೊ ಭಾರತ್ ಇವರ ವತಿಯಿಂದ ಫೆಬ್ರವರಿ 15 ರಂದು ಸುಳ್ಯದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ ಆಜಾದ್ ಟ್ರೋಪಿ ವಾಲಿಬಾಲ್ ಪಂದ್ಯಾವಳಿಯ ಕರಪತ್ರ ಹಾಗೂ ಟೀ-ಶರ್ಟ್ ಬಿಡುಗಡೆ ಕಾರ್ಯಕ್ರಮ ಫೆ.07 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.

. . . . . . . . .

ಪಂದ್ಯಾವಳಿಯ ಉದ್ದೇಶ, ಮಹತ್ವ ಹಾಗೂ ಆಯೋಜನಾ ವಿವರಗಳನ್ನು ಆಯೋಜಕರು ತಿಳಿಸಿದರು.. ತಾಲ್ಲೂಕಿನ ವಿವಿಧ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಈ ಪಂದ್ಯಾಟವು ಫೆಬ್ರವರಿ 15 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿಯ ಜೆಓಸಿ ಮೈದಾನದಲ್ಲಿ ನಡೆಯಲಿದೆ ಎಂದರು.

. . . . . . .

ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಪುನೀತ್ ಹೆಚ್, ಖೇಲೋ ಭಾರತ್ ಪ್ರಮುಖ್ ಧನುಷ್, ಹೋರಾಟ ಪ್ರಮುಖ್ ಮನ್ವಿತ್, ಕೀರ್ತನ್, ಶ್ರಾವ್ಯ, ಭಾಗ್ಯೇಶ್, ಕಿಶನ್ , ಹರ್ಷ, ಪವನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading