ಬೆಳ್ಳಾರೆ : ಪಳ್ಳಿಮಜಲು ಮಸೀದಿಯಲ್ಲಿ ಲೈಲತುಲ್ ಬರಾಅ:

ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ರಮಾಲಾನ್ ತಿಂಗಳಿಗಿಂತ ಹದಿನೈದು ದಿನ ಮುನ್ನ ಆಗಮಿಸುವ ಲೈಲತುಲ್ ಬರಾಅ:(ಶಬೇ ಬರಾಅತ್)ರಾತ್ರಿಯನ್ನು ವರ್ಷಂಪ್ರತಿಯಂತೆ ಅರೆಬಿಕ್
ತಿಂಗಳ ಶಅಬಾನ್ 15(ಫೆ 2)ರಂದು ಮುಸ್ಸಂಜೆ ನಡೆಸಲಾಯಿತು. ಮಗ್ರಿಬ್ ನಮಾಝಿನ ನಂತರ ದೀರ್ಘಾಯುಷ್ಯ ಲಭಿಸಲು, ಆಹಾರದಲ್ಲಿ ವಿಶಾಲತೆ ಲಭಿಸಲು, ಸರ್ವ ಆಪತ್ತು, ವಿಪತ್ತುಗಳಿಂದ ರಕ್ಷಣೆ ಹೊಂದಲು
ಕ್ರಮವಾಗಿ ಮೂರು ಯಾಸೀನ್ ಸೂರತುಗಳನ್ನು ಪಠಿಸಲಾಯಿತು. ನಂತರ ಸೂರತ್ ದುಕಾನ್ ಪಠಿಸಲಾಯಿತು. ಪಳ್ಳಿಮಜಲು ಮಸೀದಿಯ ಖತೀಬ್ ಮುಹಮ್ಮದ್ ರಫೀಖ್ ಬಾಹಸನಿ ನೇತೃತ್ವ ನೀಡಿ ತಪ್ಪುಗಳಿಂದ ದೂರವಿರುವಂತೆ ಹಾಗೂ ಮುಂಬರುವ ರಮಲಾನ್ ತಿಂಗಳಿಗಿಂತ ಮೊದಲು ನಮ್ಮ ಹೃದಯಗಳನ್ನು ಶುದ್ಧಗೊಳಿಸಿಕೊಳ್ಳುವಂತೆ  ಕರೆ ನೀಡಿದರು. ನಂತರ ಅವರು ಮಹಾ ಪ್ರಾರ್ಥನೆ ನೆರವೇರಿಸಿದರು. ಮಜ್ಲಿಸಿನಲ್ಲಿ ಪಳ್ಳಿಮಜಲು ಮದರಸದ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ, ಪಳ್ಳಿಮಜಲು ಸಿರಾಜುಲ್‌
ಇಸ್ಲಾಂ ಕಮಿಟಿ ಪದಾಧಿಕಾರಿಗಳು, ಸ್ವಲಾತ್ ಕಮಿಟಿ ಪದಾಧಿಕಾರಿಗಳು, ಜಮಾಅತರು ಉಪಸ್ಥಿತರಿದ್ದರು. ಇಶಾ: ನಮಾಝಿನ ನಂತರ ಪಳ್ಳಿಮಜಲು ವಲಿಯುಲ್ಲಾಹಿ ಅವರ ಸಮಾಧಿ ಸಂದರ್ಶನ ನಡೆಯಿತು. ಮಹಮೂದ್ ಸಖಾಫಿ ದು:ಆ ನೆರವೇರಿಸಿದರು. ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading