Ad Widget

“ಧಾರ್ಮಿಕ ಆಚರಣೆಯು  ಸಂಘ ಮತ್ತು ಸಮುದಾಯವನ್ನು ಶ್ರೀಮಂತಗೊಳಿಸುತ್ತದೆ” : ಗಣೇಶ್ ಪಾರಕಟ್ಟ ; ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

“ಧಾರ್ಮಿಕ ಆಚರಣೆಗಳು ಸಂಘ ಮತ್ತು ಸಮುದಾಯಗಳನ್ನು ಶ್ರೀಮಂತ ಗೊಳಿಸುತ್ತವೆ,  ಸೇವೆಯೆ ಸಂಘಗಳ ಕರ್ತವ್ಯ ಹಾಗೂ ಮುಖ್ಯ ದ್ಯೇಯವಾಗರಲಿ” ಎಂದು ಕ್ಯಾoಪ್ಕೋ ನಿರ್ದೇಶಕ ಗಣೇಶ್ ಪಾರಕಟ್ಟ ಹೇಳಿದರು.

ಅವರು ಫೆಬ್ರವರಿ 1 ರಂದು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸುಳ್ಯದ ಕೇರ್ಪಳ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಸಾಂಸ್ಕೃತಿಕ ಸಂಭ್ರಮ 2026 ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಟ್ರಮಣ ಬೇರ್ಪಡ್ಕ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಅಧ್ಯಕ್ಷ ಶ್ರೀ ರಾಮ ಮುಗ್ರೋಡಿ ಹಾಗೂ  ಸುಳ್ಯದ ಉದ್ಯಮಿ ಪ್ರಸಾದ್ ಎ ಎಸ್ ಜಯನಗರ, ಸ್ವಿಗ್ಗಿ ಇಂಡಿಯಾ ಸಂಸ್ಥೆಯ ನಿರ್ದೇಶಕ  ಪ್ರೀತಂ ಶಂಕರ್,  ಪಿಡಬ್ಲ್ಯೂಡಿ  ಗುತ್ತಿಗೆದಾರರಾದ ಬಾಲಚಂದ್ರ ಅಡ್ಕಾರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘದ ಕೋಶಧಿಕಾರಿ ವಿಜಯ್ ಕುಮಾರ್ ಎರ್ಮೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮುದಾಯ ಬಾಂಧವರಿಗೆ ನಡೆಸಿದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜೇತರ ಪಟ್ಟಿಯನ್ನು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ಕುಮಾರ್ ಎ.ಎಂ  ವಾಚಿಸಿದರು.
ಸಂಘದ ಪೂರ್ವಧ್ಯಕ್ಷ   ಚಂದ್ರಶೇಖರ ಪನ್ನೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಇರಂತಮಜಲು ವಂದಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಸಚಿತ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಮುದಾಯ ಬಾಂಧವರಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading