Ad Widget

ಕೊಲ್ಲಮೊಗ್ರು : ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಒತ್ತೆಕೋಲ ಉತ್ಸವ”

ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಒತ್ತೆಕೋಲ ಉತ್ಸವ”ವು ನಡೆಯಲಿದ್ದು, ಫೆ.08 ಆದಿತ್ಯವಾರದಂದು ಗೊನೆ ಮುಹೂರ್ತ ಹಾಗೂ ಫೆ.12 ಗುರುವಾರದಂದು ಸಂಕ್ರಮಣ ಪೂಜೆ ನೆರವೇರಲಿದೆ.
ಒತ್ತೆಕೋಲ ಉತ್ಸವದ ಮೊದಲನೇ ದಿನವಾದ ಫೆ.15 ಆದಿತ್ಯವಾರದಂದು ಪ್ರಾತಃಕಾಲ 5:00 ಗಂಟೆಗೆ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30ಕ್ಕೆ ಗಣಪತಿ ಹೋಮ, ಬೆಳಿಗ್ಗೆ 10:00 ಗಂಟೆಗೆ ಉಗ್ರಾಣ ಮುಹೂರ್ತ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6:00 ಗಂಟೆಗೆ ಸ್ಥಾನದಿಂದ ಭಂಡಾರ ತೆಗೆಯುವುದು, ಸಂಜೆ 6:45ಕ್ಕೆ ತೊಡಂಙಲ್ ಹಾಗೂ ರಾತ್ರಿ 7:00 ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಶ ನಡೆದು ನಂತರ ರಾತ್ರಿ 7:45ರಿಂದ ಅಂಗನವಾಡಿ ಪುಟಾಣಿಗಳಿಂದ, ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ರಾತ್ರಿ 9:00 ಗಂಟೆಯಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ 10:30ರಿಂದ ಶ್ರೀ ದೈವದ ಕುಳ್ಚಾಟ ನಡೆಯಲಿದೆ.
ಒತ್ತೆಕೋಲ ಉತ್ಸವದ ಎರಡನೇ ದಿನವಾದ ಫೆ.16 ಸೋಮವಾರದಂದು ಬೆಳಿಗ್ಗೆ 4:30ಕ್ಕೆ ಶ್ರೀ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 6:30ಕ್ಕೆ ಶ್ರೀ ದೈವದ ಬಾರಣೆ, ಬೆಳಿಗ್ಗೆ 7:00 ಗಂಟೆಗೆ ಮಾರಿಕಳ, ಬೆಳಿಗ್ಗೆ 8:30ಕ್ಕೆ ಗುಳಿಗ ನೇಮ ಹಾಗೂ ಬೆಳಿಗ್ಗೆ 10:00 ಗಂಟೆಗೆ ಪ್ರಸಾದ ವಿತರಣೆ ನಡೆಯುವುದರೊಂದಿಗೆ ಒತ್ತೆಕೋಲ ಉತ್ಸವವು ಸಂಪನ್ನಗೊಳ್ಳಲಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading