Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಾಲ್ಕು ದಿನದಲ್ಲಿ ಎರಡು ಲಕ್ಷಕ್ಕೂ ಅಧಿಕ ಭಕ್ತಾದಿಗಳ ಆಗಮನ

ಸುಬ್ರಹ್ಮಣ್ಯ ಜನವರಿ 26 : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಳೆದ ನಾಲ್ಕು ದಿನಗಳಿಂದ ಸರಣಿ ರಜೆ ಇದ್ದು, ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಇದರೊಂದಿಗೆ ಶ್ರೀ ಕ್ಷೇತ್ರದ ನಾಲ್ಕು ದಿನಗಳ ಒಟ್ಟು ಆದಾಯ ನಾಲ್ಕು ಕೋಟಿಗೂ ಮಿಕ್ಕಿ ಆಗುವ ನಿರೀಕ್ಷೆ ಇದೆ. ಇದರಲ್ಲಿ ಹುಂಡಿ ಹಣ, ಸೇವಾ ರಸೀದಿಗಳಿಂದ ಬಂದ ಹಣ, ಅನ್ನದಾನ ದೇಣಿಗೆಯಿಂದ  ಬಂದ ಹಣ, ವಸತಿ ಛತ್ರಗಳ ಬಾಡಿಗೆಯಿಂದ ಬಂದ ಹಣ, ಹರಿಕೆ ಸಾಮಗ್ರಿಗಳಾದ ಬೆಳ್ಳಿ ಹಾಗೂ ಚಿನ್ನ ಇತ್ಯಾದಿಗಳಿಂದ ಬಂದ ಒಟ್ಟು ಆದಾಯ  ಸೇರಿರುತ್ತದೆ.

ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಅನ್ನಪ್ರಸಾದ ಭೋಜನ ಶಾಲೆಯಲ್ಲಿ ಮಾತ್ರವಲ್ಲದೆ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಬಫೆ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
ಕ್ಷೇತ್ರದ ಸುತ್ತು ಮತ್ತು ಇರುವ ಪಾರ್ಕಿಂಗ್ ಪ್ರದೇಶಗಳೆಲ್ಲ ವಾಹನಗಳಿಂದ ಭರ್ತಿಯಾಗಿರುತ್ತದೆ.
ಶ್ರೀ ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಒಳಾಂಗಣದಲ್ಲಿ ಇದ್ದು ಭಕ್ತರನ್ನು ಸುಗಮ ದರ್ಶನಕ್ಕಾಗಿ ಕಳಿಸುವಲ್ಲಿ ಸಿಬ್ಬಂದಿಯವರಿಗೆ ಸೂಚನೆ ನೀಡುತ್ತಿದ್ದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಅವರು ಹೊರಾಂಗಣ ಹಾಗೂ ಪ್ರವೇಶ ದ್ವಾರದ ಬಳಿ ಇದ್ದು ಸಿಬ್ಬಂದಿಗಳ ನೆರವಿನೊಂದಿಗೆ ಭಕ್ತರ ಸುಗಮ ದರ್ಶನಕ್ಕಾಗಿ ಸೇವೆ ಸಲ್ಲಿಸುತ್ತಿದ್ದು, ಕಂಡು ಬಂತು. ರಥ ಬೀದಿ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸೆಕ್ಯೂರಿಟಿಯವರು ವಾಹನಗಳ ನಿಯಂತ್ರಣ ಹಾಗೂ ಸುಗಮ ಪಾರ್ಕಿಂಗ್ ಪ್ರದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading