Ad Widget

ಸುಳ್ಯ : ಹಿಂದೂ ಸಂಗಮ ; “ಸಂಪ್ರದಾಯ, ಆಚರಣೆ, ಪದ್ಧತಿ ಹಾಗೂ ಪೂಜಾ ಸ್ವಾತಂತ್ರ್ಯ ನಮ್ಮ ಹಿಂದೂ ಧರ್ಮ ನಮಗೆ ನೀಡಿದೆ” : ಗಣಪತಿ ಹೆಗಡೆ

ಹಿಂದೂ ಸಂಗಮ ಸುಳ್ಯ ಮಂಡಲ ಇದರ ವತಿಯಿಂದ ಜ.25ರಂದು ಸುಳ್ಯದ ಪ್ರಭು ಮೈದಾನದಲ್ಲಿ “ಹಿಂದೂ ಸಂಗಮ” ಕಾರ್ಯಕ್ರಮ ನಡೆಯಿತು.
ಹಿರಿಯ ಸಾಹಿತಿಗಳಾದ ಶ್ರೀಮತಿ ಜಯಮ್ಮ ಚೆಟ್ಟಿಮಾಡ ರವರು ಭಾರತಮಾತೆಯ ಭಾವಚಿತ್ರದ ಮುಂದೆ ದೀಪ ಬೆಳಗಿಸುವ ಮೂಲಕ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುರೋಹಿತ ನಾಗರಾಜ್ ಭಟ್ ರವರು ಶಂಖನಾದಗೈದರು.
ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರತಿನಿಧಿಗಳಾದ ಗಣಪತಿ ಹೆಗಡೆ ರವರು ಮಾತನಾಡುತ್ತಾ “ಸಕಲ ಚರಾಚರಗಳಲ್ಲೂ ದೇವರನ್ನು ಕಾಣುವ ಧರ್ಮ ಹಿಂದೂ ಧರ್ಮ ಮಾತ್ರ. ನಾವು ದೇವರನ್ನೂ ಪೂಜಿಸಬಹುದು. ಆಯ್ಕೆಯ ಸ್ವಾತಂತ್ರ್ಯ ನಮಗಿದೆ. ಒಳ್ಳೆಯದನ್ನು ಅನುಸರಣೆ ಮಾಡುವುದೇ ಧರ್ಮ. ನಮ್ಮ ಸಮಾಜದ ತಪ್ಪುಗಳನ್ನು ನಾವೇ ಸರಿಪಡಿಸಬೇಕು. ದೇವಸ್ಥಾನ, ನೀರು ಮತ್ತು ಸ್ಮಶಾನ ಈ ಮೂರರಲ್ಲಿ ಜಾತಿಯನ್ನು ತರಬಾರದು” ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ತಾಲೂಕಿನ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷರಾದ ಎಂ.ಬಿ.ಸದಾಶಿವ ರವರು “ನಾವು ಮಾದರಿ ಹಿಂದೂಗಳಾಗಬೇಕು. ನನ್ನ ಧರ್ಮ-ನನ್ನ ಹೆಮ್ಮೆ. ಪರಧರ್ಮ ಸಹಿಷ್ಣುತೆ ನನ್ನ ಹಿರಿಯರು ನನಗೆ ಕಲಿಸಿದ ಸಂಸ್ಕಾರ” ಎಂದರು.

ಗೌರವ ಸಲಹೆಗಾರರಾದ ಡಾ.ಯಶೋದಾ ರಾಮಚಂದ್ರ ರವರು ಮಾತನಾಡುತ್ತಾ “ನಮ್ಮ ಸಂಸ್ಕೃತಿಯ ಬೇರುಗಳು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿವೆ. ಆದ್ದರಿಂದ ಅವುಗಳ ನಾಶ ಎಂದಿಗೂ ಸಾಧ್ಯವಿಲ್ಲ” ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜನಪದ ವಿದ್ವಾಂಸ ಕೇಪು ಅಜಿಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರತಿನಿಧಿಗಳಾದ ಗಣಪತಿ ಹೆಗಡೆ, ಹಿರಿಯ ಸಾಹಿತಿಗಳಾದ ಶ್ರೀಮತಿ ಜಯಮ್ಮ ಚೆಟ್ಟಿಮಾಡ, ತಾಲೂಕಿನ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷರಾದ ಎಂ.ಬಿ.ಸದಾಶಿವ, ಗೌರವ ಸಲಹೆಗಾರರಾದ ಡಾ.ಯಶೋದಾ ರಾಮಚಂದ್ರ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್‌ ಹಾಗೂ ಸಂಚಾಲಕರಾದ ಚಂದ್ರಶೇಖರ ನಲ್ಲೂರಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಗರ ಹಿಂದೂ ಸಂಗಮದ ಸಂಯೋಜಕ ಎ.ಟಿ.ಕುಸುಮಾಧರ ರವರು ಸ್ವಾಗತಿಸಿ, ಸುನಿಲ್ ಕೇರ್ಪಳ ವಂದಿಸಿದರು.
ಉದಯಭಾಸ್ಕರ್ ಸುಳ್ಯ ಹಾಗೂ ಶ್ರೀಮತಿ ಗಾಯತ್ರಿ ಚಿದಾನಂದ್ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading