Ad Widget

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ; “ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ವಿವಿಧತೆಯಲ್ಲಿ ಏಕತೆ” : ಜಾಕೆ ಸದಾನಂದ

“ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇವೆ. ಆದರೆ ಇಂದಿನ ದಿನಗಳಲ್ಲಿ ಜಾತಿ-ಧರ್ಮಗಳ ವ್ಯವಸ್ಥೆಯಲ್ಲಿ ಸಮಾಜದಲ್ಲಿ ಏಕತೆಯನ್ನು ಕಾಣದೆ ಭಯದ ವಾತಾವರಣ ಸೃಷ್ಠಿಯಾಗುತ್ತಿದೆ. ಈ ಬಗ್ಗೆ ಇಡೀ ಸಮುದಾಯ, ಸೇರಿದಂತೆ ವಿದ್ಯಾರ್ಥಿಗಳು ಇಂತಹ ವಾತಾವರಣಗಳಿಂದ ದೂರವಿರಬೇಕೆಂದು”  ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾದ ಜಾಕೆ ಸದಾನಂದ ಹೇಳಿದರು.
ಅವರು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ, ಮುಖ್ಯ ಶಿಕ್ಷಕಿ ಜಯಲತಾ.ಕೆ.ಆರ್, ಶಿಕ್ಷಕರಾದ ಮೀನಕುಮಾರಿ.ಕೆ, ಶಿವಪ್ರಕಾಶ್ ಕೆ, ಕುಮಾರ್ ಲಮಾಣಿ, ಸವಿತಾಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ.ಕೆ ಇದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading