Ad Widget

ಪಂಜದಲ್ಲಿ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ ಹಾಗೂ ಕನ್ಸಲ್ಟೆನ್ಸಿ ಸೇವಾಕೇಂದ್ರ ಶುಭಾರಂಭ

ಸುಬ್ರಹ್ಮಣ್ಯ ಜನವರಿ 23 : ಪಂಜದ ನಾಯರ್ಕೆರೆ ಸಿರಿ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಅಭಿಷೇಕ್ ನಡುತೋಟ ಮಾಲಕತ್ವದ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ಸ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭಗೊಂಡಿತು.

ಸುಬ್ರಹ್ಮಣ್ಯ ದ ನಿವೃತ್ತ ಪ್ರಾಂಶುಪಾಲ ನೀಲಪ್ಪ ಗೌಡ ನಡುತೋಟ ಸೇವಾ ಕೇಂದ್ರವನ್ನು ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪಂಜ ಸಿಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸುಮತಿ ದಿವಾಕರ ನಡುತೋಟ, ಕಾರ್ತಿಕ್ ನಡುತೋಟ, ಹೇಮ ವಸಂತ ಚಿದ್ಗಲ್, ಶ್ರೀಮತಿ ಶಾಂತಿ ನೀಲಪ್ಪಗೌಡ  ನಡುತೋಟ, ಶ್ರೀಮತಿ ಲೀಲಾಕುಮಾರಿ ವಿಶ್ವನಾಥ ನಡುತೋಟ, ಅನಿತಾ ಗಿರಿಧರ ನಡುತೋಟ ಗೀತಾ ವಿಜಯಕುಮಾರ ನಡುತೋಟ, ಗಿರಿಧರ ನಡುತೋಟ, ಸಿರಿ ಕಾಂಪ್ಲೆಕ್ಸ್ ಸಿಬ್ಬಂದಿ ವರ್ಗದವರು ಸ್ನೇಹಿತರು ಉಪಸ್ಥಿತರಿದ್ದರು.

ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading