Ad Widget

“ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ಹೋರಾಟಕ್ಕೆ ಸಂದ ಜಯ, ಬಸ್ ವ್ಯವಸ್ಥೆಗೆ ಎ.ಬಿ.ವಿ.ಪಿ ಹೋರಾಟವೇ ಕಾರಣ” – ಮುಳಿಯ ಸಾತ್ವಿಕ್

“ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎ.ಬಿ.ವಿ.ಪಿ) ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಬಸ್ ಸೇವೆಯನ್ನು ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಿಗೂ ಹಾಗೂ ಕೆ.ಎಸ್‌.ಆರ್‌.ಟಿ.ಸಿ ಸುಳ್ಯ ಡಿಪೋ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ. ಈ ಬಸ್ ಸೇವೆ ಎ.ಬಿ.ವಿ.ಪಿ ನಡೆಸಿದ ಪ್ರತಿಭಟನೆ, ನಿರಂತರ ಹೋರಾಟ ಹಾಗೂ ಶಾಸಕರಿಗೆ ಸಲ್ಲಿಸಿದ ಮುಂದುವರಿದ ಮನವಿಗಳ ನೇರ ಫಲಿತಾಂಶವಾಗಿಯೇ ಲಭ್ಯವಾಗಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಕಾಂಗ್ರೆಸ್ ನಾಯಕರು 2025ರ ಜೂನ್ 27ರಂದು ಮನವಿ ಸಲ್ಲಿಸಿದ್ದೇವೆ ಎಂದು ಹೇಳಿಕೊಂಡಿದ್ದರೂ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೇ ಆ ಮನವಿಯ ನಂತರವೂ ಆರು ತಿಂಗಳಿಗಿಂತ ಹೆಚ್ಚು ಕಾಲ ಬಸ್ ಸೇವೆ ಒದಗಿಸದೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆದರೆ ಎ.ಬಿ.ವಿ.ಪಿ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ನಡೆಸಿ, ಮುಂದುವರಿದ ಮನವಿಗಳನ್ನು ಸಲ್ಲಿಸಿದ ನಂತರ ಕೇವಲ ಒಂದೇ ತಿಂಗಳೊಳಗೆ ಬಸ್ ಸೇವೆ ಒದಗಿರುವುದು, ನೈಜ ಹೋರಾಟವೇ ಫಲ ಕೊಡುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿದ್ಯಾರ್ಥಿಗಳೂ ಸಾರ್ವಜನಿಕರೂ ಈ ಬಸ್ ಸೇವೆಗೆ ಕಾರಣವಾದ ನೈಜ ಹೋರಾಟವನ್ನು ಚೆನ್ನಾಗಿ ಅರಿತಿದ್ದಾರೆ. ಸಮಸ್ಯೆ ಇದ್ದಾಗ ಮೌನ ವಹಿಸಿ, ಪರಿಹಾರ ಬಂದ ನಂತರ ಮಾತ್ರ ಕಾಣಿಸಿಕೊಂಡು ಶ್ರೇಯಸ್ಸು ಪಡೆಯಲು ಮುಂದಾಗುವ ಕೆಲವರ ನಡೆ ಖಂಡನೀಯವಾಗಿದೆ. ಪ್ರಚಾರ ಮತ್ತು ಹೇಳಿಕೆಗಳ ಮೂಲಕ ರಾಜಕೀಯ ಆಟ ಆಡಲು ಯತ್ನಿಸುವುದು ವಿದ್ಯಾರ್ಥಿ ಹಿತಾಸಕ್ತಿಗೆ ಧಕ್ಕೆಯಾಗಿದೆ. ಇನ್ನು ಮುಂದೆ ಈ ವಿಷಯದ ಕುರಿತು ರಾಜಕೀಯ ಉದ್ದೇಶದಿಂದ ಹೇಳಿಕೆಗಳನ್ನು ನೀಡುವವರಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲವೆಂದು ಎ.ಬಿ.ವಿ.ಪಿ. ಸ್ಪಷ್ಟಪಡಿಸುತ್ತದೆ. ಏಕೆಂದರೆ ನಮ್ಮ ಗಮನ ವಿದ್ಯಾರ್ಥಿಗಳ ಅಧ್ಯಯನ, ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳು ಹಾಗೂ ನೈಜ ವಿದ್ಯಾರ್ಥಿ ಸಮಸ್ಯೆಗಳ ಪರಿಹಾರದ ಮೇಲಿದ್ದು, ರಾಜಕೀಯ ಆಟವಾಡುವವರಿಗೆ ಪ್ರತಿಕ್ರಿಯಿಸುವುದಕ್ಕಿಂತ ಕಾರ್ಯಕ್ಕೆ ಆದ್ಯತೆ ನೀಡುವುದು ನಮ್ಮ ಧೋರಣೆ. ಈ ಬಸ್ ಸೇವೆ ಯಾರ ಹೋರಾಟದಿಂದ ಲಭ್ಯವಾಗಿದೆ ಎಂಬುದನ್ನು ವಿದ್ಯಾರ್ಥಿಗಳೂ ಸಾರ್ವಜನಿಕರೂ ಈಗಾಗಲೇ ಚೆನ್ನಾಗಿ ಅರಿತಿದ್ದಾರೆ” ಎಂದು ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading