Ad Widget

ಜಾಲ್ಸೂರು : “ಬೃಹತ್ ಹಿಂದೂ  ಸಂಗಮ”ದ ಪೂರ್ವಭಾವಿಯಾಗಿ ಇಂದು(ಜ.22) ಸಂಜೆ ಬೈಕ್ ರ‌್ಯಾಲಿ

ಜಾಲ್ಸೂರಿನಲ್ಲಿ ಜ.25 ರಂದು ನಡೆಯುವ “ಬೃಹತ್ ಹಿಂದೂ  ಸಂಗಮ”ದ ಪೂರ್ವಭಾವಿಯಾಗಿ ಇಂದು(ಜ.22) ಸಂಜೆ ಬೈಕ್  ರ‌್ಯಾಲಿ ನಡೆಯಲಿದೆ. 
ಆರೊ.ಎಸ್.ಎಸ್ ಶತಾಬ್ಧಿ ವರ್ಷ ಹಿನ್ನೆಲೆಯಲ್ಲಿ ಪಂಚಪರಿವರ್ತನೆ ಉದ್ದೇಶವನ್ನುಟ್ಟುಕೊಂಡು ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಅಯೋಜಿಸಲಾಗಿದ್ದು, ಜ.25ರಂದು ಜಾಲ್ಸೂರಿನ ಜೆ.ಕೆ ಮೈದಾನದಲ್ಲಿ ನಡೆಯಲಿದೆ.

ಜಾಲ್ಸೂರು ಮುಖ್ಯ ಪೇಟೆ ಕೇಸರಿಮಯಗೊಂಡಿದ್ದು,  ಮೈದಾನದ ಸುತ್ತಮುತ್ತ ಬಂಟಿಂಗ್ಸ್ ಮೂಲಕ  ಸಜ್ಜುಗೊಳಿಸಲಾಗಿದೆ. ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಅದಕ್ಕೂ  ಮುಂಚಿತವಾಗಿ 3.30ಕ್ಕೆ  ಅಡ್ಕಾರ್ ಅಯ್ಯಪ್ಪ ಮಂದಿರದ ಬಳಿಯಿಂದ ಶೋಭಾಯಾತ್ರೆ ಮೈದಾನದವರೆಗೆ ಸಾಗಿ ಬರಲಿದೆ. 
ಹಿಂದೂ ಸಂಗಮದ ಪೂರ್ವಭಾವಿಯಾಗಿ ಜ.22 ರಂದು ಸಂಜೆ 4:00 ಗಂಟೆಗೆ ಬೈಕ್ ರ್ಯಾಲಿ ನಡೆಯಲಿದೆ. 
ಕನಕಮಜಲು ಆತ್ಮರಾಮ ಭಜನಾ ಮಂದಿರದಿಂದ ಹೋರಟು ಜಾಲ್ಸೂರು, ಮೂಲಕ ಮೂರೂರು, ಮಂಡೆಕೊಲು ಆಗಿ ಅಡ್ಕಾರ್, ಪೈಚಾರ್ ನಂತರ ಸೋಣಂಗೇರಿಯಾಗಿ  ಜಾಲ್ಸೂರು ಜೆ.ಕೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading