Ad Widget

ಸುಬ್ರಹ್ಮಣ್ಯ : ತೃಪ್ತಿ ಜಿ.ಎನ್ ಅವರಿಗೆ ಡಾಕ್ಟರೇಟ್ ಪದವಿ

ಸುಬ್ರಹ್ಮಣ್ಯ ಜನವರಿ 22 : ತೃಪ್ತಿ ಜಿ.ಎನ್ ಅವರು “Ecological Study of Selected Lakes and Their Biodiversity in Somwarpet” ಎಂಬ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಜನವರಿ 05ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಜರಗಿದ ಪದ ಪ್ರಧಾನ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು. ಪ್ರಸ್ತುತ ಅವರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಫೆಲೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೃಪ್ತಿ ಜಿ.ಎನ್ ಅವರು ಚೇರಂಬಾಣೆ ಬಿ.ಬಾಡಗ ಗ್ರಾಮದ ಗುತ್ತಿಮುಂಡನ ನಾಣಯ್ಯ ಹಾಗೂ ಹುದೇರಿ ಯಶೋಧ ದಂಪತಿ ಅವರ ಪುತ್ರಿಯಾಗಿದ್ದು, ಏನೆಕಲ್ಲು ಗ್ರಾಮದ ಪದೇಲ ಸುಜನ್ ಅವರ ಧರ್ಮಪತ್ನಿ ಹಾಗೂ ಇವರು ಪದೇಲ ನೇಮಿರಾಜ್ ಹಾಗೂ ಜಯಶೀಲ ಕಡೀರ ದಂಪತಿ ಅವರ ಸೊಸೆಯಾಗಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading