Ad Widget

ಗಾಯಕ ವಿಜಯಕುಮಾರ್ ಸುಳ್ಯ ನೇತೃತ್ವದಲ್ಲಿ ಜಾತ್ರೋತ್ಸವದಲ್ಲಿ ಮನರಂಜಿಸಿದ “ವಿಜಯ್ ಮ್ಯೂಸಿಕಲ್ ನೈಟ್ -2026”

ಸುಳ್ಯ ಜಾತ್ರಾ ಪ್ರಯುಕ್ತ ಜ.10 ರಂದು ಸುಳ್ಯದ ಖಾಸಗಿ ಬಸ್‌ ನಿಲ್ದಾಣದಲ್ಲಿ ನಡೆದ “ವಿಜಯ್ ಮ್ಯೂಸಿಕಲ್ ನೈಟ್-2026” ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.
ಕಾರ್ಯಕ್ರಮದ ಸಂಚಾಲಕರಾದ ರಾಷ್ಟ್ರಮಟ್ಟದ ಗಾನಗಂಧರ್ವ ಪ್ರಶಸ್ತಿ ಪುರಸ್ಕೃತರಾದ ವಿಜಯಕುಮಾ‌ರ್ ಸುಳ್ಯ ಇವರ ಸಾರಥ್ಯದಲ್ಲಿ ಮತ್ತು ವಿವಿಧ ಜಿಲ್ಲೆಯ ಪ್ರಖ್ಯಾತ ಗಾಯಕ, ಗಾಯಕಿಯರು ಹಾಡಿ ಮನ ರಂಜಿಸಿದರು. ವಿಶೇಷ ಆಕರ್ಷಣೆಯಾಗಿ ನೃತ್ಯ ವೈವಿಧ್ಯ ನಡೆಯಿತು. ನಿರೂಪಕ ಸುಮಂತ್ ಸುಳ್ಯ ಹಾಗೂ ನಿರೂಪಕಿಯಾದ ಯಶುಭ ರೈ ಪುತ್ತೂರು ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ದೀಪ ಪ್ರಜ್ವಲನೆಯನ್ನು ಸ್ವಾಗತ್ ಐಸ್ ಕ್ರೀಂ ಮಾಲಕ ಪ್ರಭಾಕರ್ ನಾಯರ್ ನೆರವೇರಿಸಿದರು. ಹಲವಾರು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

ಖ್ಯಾತ ಗಾಯಕಿ ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಶೀಲಾ ಪಡೀಲ್ ಜೊತೆಗೆ ಗಾಯಕಿ ರೇಷ್ಮಾ ಯೆಯ್ಯಾಡಿ ಮಂಗಳೂರು, ಸುಪ್ರಸಿದ್ಧ ಗಾಯಕಿ ಅಂಜಲಿ ಪಾಂಡವಪುರ ಮಂಡ್ಯ ,ಪ್ರಶಸ್ತಿ ವಿಜೇತ ಸಕಲೇಶಪುರ ರಮೇಶ್ , ಕೇರಳದಿಂದ ಸುನೀಶ್ ಪಂಜಿಕಲ್ಲು , ಪ್ರಸಿದ್ಧ ಗಾಯಕ  ಸಂದೀಪ್ ಸುಳ್ಯ  ಇವರಿಂದ ಗಾಯನ ಹಾಗೂ ವೇದಿಕೆಯಲ್ಲಿ ಡ್ಯಾನ್ಸ್ ನೃತ್ಯ ಮಾಡಿದ ಪುತ್ತೂರಿನ ಮಹಿಳಾ ಕಲಾವಿದರ ಒಕ್ಕೂಟ, ಪುಟಾಣಿ ಮಕ್ಕಳ ನೃತ್ಯವು ವಿಶೇಷ ಆಕರ್ಷಣೆಯೊಂದಿಗೆ ವೇದಿಕೆಯಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಂಜೀವ ರಾವ್ ಮುಳ್ಯ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading