Ad Widget

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಕಾಂಕ್ರಿಟೀಕರಣ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ

ಸುಳ್ಯ ನಗರದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣ ಮತ್ತು ಆಟೋ ಪಾರ್ಕಿಂಗ್ ಮಧ್ಯ ನಿಲ್ದಾಣದ ಪ್ರವೇಶ ರಸ್ತೆ ಭಾಗದಲ್ಲಿರುವ ಪ್ರದೇಶವು ತೀರಾ ಹಾಳಾಗಿರುವುದನ್ನು ಮನಗಂಡು ನಗರ ಪಂಚಾಯತ್ ವತಿಯಿಂದ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡ ಕಾಂಕ್ರೀಟೀಕರಣ ವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಬಳಿಕ ಮಾತನಾಡಿದ ನಗರ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ “ನಗರದ ಪ್ರಮುಖ ಜಾಗವನ್ನು ಸುಸಜ್ಜಿತಗೊಳಿಸಿ ಸ್ಥಳೀಯರ ಬೇಡಿಕೆಯನ್ನು ಈಡೇರಿಸಿದ ಸದಸ್ಯ ಕೆ.ಎಸ್. ಉಮ್ಮರ್ ರವರು ಸಾಮಾಜಿಕ ಕಳಕಳಿಯ ಜನಪ್ರತಿನಿಧಿ” ಎಂದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಾಫ ಮಾತನಾಡಿ “ಸುಳ್ಯ ನಗರದ ಮೂಲ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಮಹತ್ತರ ವಾದದ್ದು” ಎಂದರು.
ನಗರ ಪಂಚಾಯತ್ ನಿಕಟಪೂರ್ವ ಸದಸ್ಯರು ಗಳಾದ ಕೆ.ಎಸ್. ಉಮ್ಮರ್, ಶರೀಫ್ ಕಂಠಿ, ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ರಶೀದ್ ಜಟ್ಟಿಪಳ್ಳ, ಸ್ಥಳೀಯ ಉದ್ಯಮಿಗಳಾದ ರಜಾಕ್ ಹಾಜಿ ಶೀತಲ್, ನಾಗೇಶ್ ಹಮೀದ್ ಸಮ್ಮರ್ ಕೂಲ್, ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸುಂದರ್, ಗುರೂಜಿ ಬಸ್ ನ ಮಾಲಕ ಮೋಹನ್, ಟೂರ್ ಆಪರೇಟರರ್ಸ್ ಭಟ್ ಮೊದಲಾದವರು ಉಪಸ್ಥಿರಿದ್ದರು,
ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯರಾಗಿ 5 ವರ್ಷ ಸೇವೆ ಸಲ್ಲಿಸಿದ ಕೆ.ಎಸ್. ಉಮ್ಮರ್ ರವರನ್ನು ಸ್ಥಳೀಯ ನಾಗರಿಕರು, ಉದ್ಯಮಿಗಳು ಆಟೋ ಮಾಲಕರ ಚಾಲಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading