Ad Widget

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗಕ್ಕೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಕರ್ನಾಟಕ ಪಬ್ಲಿಕ್ ಸ್ಕೂಲ್,  ಬೆಳ್ಳಾರೆಯ ಪ್ರಾಥಮಿಕ ವಿಭಾಗಕ್ಕೆ ಯುವ ಬೆಂಗಳೂರು ಟ್ರಸ್ಟ್ ಇವರು ಕೊಡ ಮಾಡಿರುವ ಸ್ಮಾರ್ಟ್ ಕ್ಲಾಸ್ ಇದರ ಉದ್ಘಾಟನೆಯನ್ನು  ದಿನಾಂಕ 08-01-2026 ರಂದು ನಡೆಸಲಾಯಿತು. 
ಯುವ ಬೆಂಗಳೂರು ಟ್ರಸ್ಟ್ ಇದರ ಸ್ಥಾಪಕರು ಮತ್ತು ಟ್ರಸ್ಟಿಯು ಆಗಿರುವಂತಹ ಜಿ.ಕಿರಣ್ ಸಾಗರ್ ಇವರು ದೀಪ ಬೆಳಗಿಸಿ, ಪರದೆ ಸರಿಸುವ ಮೂಲಕ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, “ಶಾಲೆ ಎಂಬುದು ಒಂದು ದೇಗುಲವಿದ್ದಂತೆ, ಮಕ್ಕಳು ದೇವರ ಪ್ರತಿರೂಪ ಇದ್ದಂತೆ. ಶಾಲಾ ಶಿಕ್ಷಕರು ಈ ದೇಶದ ನಿಜವಾದ ನಿರ್ಮಾತೃಗಳು ಮತ್ತು ನಿರ್ಮಾಪಕರು. ಶಾಲೆಗಳಲ್ಲಿ ಇರುವ ಶಿಕ್ಷಕರು ಶಾಲೆಗಳಲ್ಲಿ ಶಿಕ್ಷಕರಾಗಿಯೇ ಉಳಿಯುತ್ತಾರೆ. ಆದರೆ ಅವರಿಂದ ಬೋಧನೆಯನ್ನು ಪಡೆದ ವಿದ್ಯಾರ್ಥಿಗಳು ದೇಶದ, ಪ್ರಪಂಚದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವುದರ ಮೂಲಕ ಶಿಕ್ಷಕರಿಗೆ ಗೌರವವನ್ನು ತಂದುಕೊಡುತ್ತಾರೆ. ಇಂದಿನ ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕೂಡ ತಂತ್ರಜ್ಞಾನ ಬಳಸಿ ಪಾಠ ಮಾಡಲು ಅನುಕೂಲವಾಗುವಂತೆ ನಾವು ಸ್ಮಾರ್ಟ್ ಕ್ಲಾಸ್ಗಳನ್ನು ನೀಡುತ್ತಿದ್ದೇವೆ” ಎಂದರು. ಯುವ ಬೆಂಗಳೂರು ಟ್ರಸ್ಟಿನ ಅಧ್ಯಕ್ಷರಾಗಿರುವಂತಹ ಶ್ರೀ ಬಿ.ವಿ ಸುನಿಲ್ ಇವರು ಪ್ರಸ್ತಾವಿಕ ಮಾತುಗಳನ್ನಾಡಿ, “ಸರಕಾರಿ ಶಾಲೆಗಳನ್ನು ಉಳಿಸುವ ಬೆಳೆಸುವ ಪ್ರಯತ್ನವನ್ನು ಯುವ ಬೆಂಗಳೂರು ಟ್ರಸ್ಟ್ ಮಾಡುತ್ತಿದೆ. ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳು  ಕೂಡ ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕೆಯನ್ನು  ಇನ್ನಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿಯ ಕಾರ್ಯಾಧ್ಯಕ್ಷರಾದ ಹರ್ಷ ಜೋಗಿಬೆಟ್ಟು ವಹಿಸಿದ್ದು, ಕೊಡುಗೆಯನ್ನು ನೀಡಿದ ಯುವ ಬೆಂಗಳೂರು ಸಂಸ್ಥೆಗೆ ವಂದನೆಗಳನ್ನು ಸಮರ್ಪಿಸಿದರು.
ಶಿಕ್ಷಕರಾದ ದಿನೇಶ್ ಮಾಚಾರ್ ಎಲ್ಲರನ್ನು ಸ್ವಾಗತಿಸಿ, ಅತಿಥಿಗಳ ಪರಿಚಯವನ್ನು ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. 
ಶಾಲಾ ಪದವೀಧರೇತರ ಮುಖ್ಯೋಪಾಧ್ಯಾಯರಾದ ಮಾಲಪ್ಪ.ಜಿ ಯವರು ಧನ್ಯವಾದ ಸಮರ್ಪಿಸಿದರು.  ಯುವ ಬೆಂಗಳೂರು ಟ್ರಸ್ಟ್ ನ ಜಿ.ಕಿರಣ್ ಸಾಗರ್ ಮತ್ತು ಬಿ.ವಿ ಸುನಿಲ್ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಯ ನಿಕಟಪೂರ್ವ ಕಾರ್ಯಾಅಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ,  ಕೆಪಿಎಸ್ ಬೆಳ್ಳಾರೆಯ  ಪ್ರಾಂಶುಪಾಲರಾದ ಜನಾರ್ಧನ ಕೆ.ಎನ್ ಇವರುಗಳು ಉಪಸ್ಥಿತರಿದ್ದರು. 
ಈ ಕಾರ್ಯಕ್ರಮದಲ್ಲಿ ಎಸ್.ಡಿಎಂ.ಸಿಯ ಸದಸ್ಯರುಗಳು, ಪೋಷಕರುಗಳು, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading