Ad Widget

ಜ.01 ರಿಂದ 03 ರವರೆಗೆ ಬಾಳಿಲ ಅತ್ತಿಕರಮಜಲು ಮಖಾಂ ಉರೂಸ್

ಬಾಳಿಲ ಗ್ರಾಮದ ಅತ್ತಿಕರಮಜಲು 
ಪಾಜಪಳ್ಳ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಹಝ್ರತ್ ವಲಿಯುಲ್ಲಾಹಿ ಸಯ್ಯದ್ ಹುಸೈನ್ 
ಆಟಕ್ಕೋಯ ತಂಙಲ್ ಅಲ್ ಮುಶೈಖಿ(ರ.ಅ)ರವರ ಹೆಸರಿನಲ್ಲಿ ಎರಡು ವರುಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಜ 2026 ನೇ  1,2,3 ರಂದು ಬಾಳಿಲ ಅತ್ತಿಕರಮಜಲಿನ ಮುಹಿಯುದ್ದೀನ್ ಜುಮುಅ: ಮಸೀದಿಯ ವಠಾರದಲ್ಲಿ ಮಗ್ರಿಬ್ ನಮಾಝಿನ ಬಳಿಕ ನಡೆಯಲಿದ್ದು, ಪ್ರಮುಖ
ವಿದ್ವಾಂಸರು ಹಾಗೂ ಖ್ಯಾತ ವಾಗ್ಮಿಗಳಿಂದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಜರುಗಲಿದೆ‌.ಜ 1ರಂದು ಸಂಜೆ 4 ಗಂಟೆಗೆ ಅತ್ತಿಕರಮಜಲು ಜುಮುಅ: ಮಸೀದಿ ಅಧ್ಯಕ್ಷ ಹಾಜಿ.ಪಿ.ಇಸ್ಹಾಖ್ ಸಾಹೇಬ್ ಪಾಜಪಳ್ಳ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.ಅಂದು ಮಗ್ರಿಬ್ ನಮಾಝಿನ ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದ್ದು ಅತ್ತಿಕರಮಜಲು ಜುಮುಅ: ಮಸೀದಿ ಮುಅಲ್ಲಿಂ ಬಹು ಝುಬೈರ್ ಮುಸ್ಲಿಯಾರ್ ಸ್ವಾಗತ ನೆರವೇರಿಸಲಿದ್ದಾರೆ. ಬಹು ಮುಸ್ತ್ವಫಾ ತಂಙಲ್ ಅಲ್ ಮುಶೈಖಿ ಆದೂರು
ಉದ್ಘಾಟನೆ ಮತ್ತು ದು:ಆಶೀರ್ವಚನವನ್ನು ನಡೆಸಲಿದ್ದಾರೆ.ಅಧ್ಯಕ್ಷತೆಯನ್ನು ಅತ್ತಿಕರಮಜಲು ಉರೂಸ್ ಸಮಿತಿಯ ಅಧ್ಯಕ್ಷರಾದ ಜನಾಬ್ ಇಬ್ರಾಹಿಂ ಅತ್ತಿಕರಮಜಲು ವಹಿಸಲಿದ್ದಾರೆ.ಪ್ರಾಸ್ತಾವಿಕ ಭಾಷಣವನ್ನು ಅತ್ತಿಕರಮಜಲು ಜುಮುಅ: ಮಸೀದಿಯ ಖತೀಬರಾದ ಬಹು:ಯಾಸೀರ್ ಅರಾಫತ್ ಖೌಸರಿ ಮಾಡಲಿದ್ದಾರೆ.ಮುಖ್ಯ ಪ್ರಭಾಷಣವನ್ನು ಕಕ್ಕಿಂಜೆ ಮುದರ್ರಿಸ್ ಬಹು ಅಬೂಬಖರ್ ಸ್ವಿದ್ದೀಖ್ ಅಹ್ಮದ್ ಅಲ್ ಜಲಾಲಿ ಮಾಡಲಿದ್ದಾರೆ.ಗೌರವ ಉಪಸ್ಥಿತರಾಗಿ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಸೆಖೊಂಡರಿ ಮದರಸದ ಸದರ್ ಮುಅಲ್ಲಿಂ ಬಹು ಮುಹಮ್ಮದ್ ನವವಿ ಮುಂಡೋಳೆ,ಐವರ್ನಾಡು ಜುಮುಅ: ಮಸೀದಿಯ ಖತೀಬರಾದ ಅಬ್ದುಲ್ ಖಾದರ್ ಫೈಝಿ, ಸುಳ್ಯ ಅನ್ಸಾರಿಯ ಎಜುಕೇಷನ್ ಸೆಂಟರ್ ಪ್ರಧಾನ ಕಾರ್ಯದರ್ಶಿಗಳಾದ ಲತೀಫ್ ಹರ್ಲಡ್ಕ,ಕಜೆ ನಿಂತಿಕಲ್ಲು ಜುಮುಅ: ಮಸೀದಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ಲಾ ನಿಂತಿಕಲ್ಲು,ಇಂದ್ರಾಜೆ ಮಸೀದಿಯ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಇಂದ್ರಾಜೆ,ಕಳಂಜ ಜುಮುಅ: ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್
ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಜ 2 ರಂದು ಕೆ.ಎಂ.ಇಖ್ಬಾಲ್ ಬಾಳಿಲ ಸ್ವಾಗತ ನೆರವೇರಿಸಲಿದ್ದಾರೆ.ಮುಖ್ಯ ಪ್ರಭಾಷಣವನ್ನು ಬಹು ಅಬ್ದುಲ್ ಸ್ವಮದ್ ಸಖಾಫಿ ವಯನಾಡ್ ಕೇರಳ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಇಂದ್ರಾಜೆ ಮಸೀದಿಯ ಖತೀಬರಾದ ಬಹು ಮುಖ್ತಾರ್
ಸಅದಿ ಅಜ್ಜಾವರ,ಬೆಂಗಳೂರು ಅಲ್ ಸಲಾಮ ಫೌಂಡೇಶನ್ ಸಂಚಾಲಕರಾದ ಜನಾಬ್ ಅಬ್ದುಲ್ ರಹಿಮಾನ್ ಸಂಕೇಶ್,ಎಣ್ಮೂರು ಜುಮುಅ: ಮಸೀದಿ ಅಧ್ಯಕ್ಷರಾದ ಜನಾಬ್ ಇಸ್ಮಾಯಿಲ್ ಪಡ್ಪಿನಂಗಡಿ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಜ 3 ರಂದು ಮಗ್ರಿಬ್ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು ಸ್ವಾಗತವನ್ನು ಅತ್ತಿಕರಮಜಲು ಜುಮುಅ: ಮಸೀದಿಯ ಉಪಾಧ್ಯಕ್ಷರಾದ ಜನಾಬ್ ಹಾಜಿ ಶರೀಫ್ ಭಾರತ್ ಬಾಳಿಲ ನೆರವೇರಿಸಲಿದ್ದಾರೆ. ಆದೂರು ಮಂಞಪಾರೆಯ ಬಹು ಸಯ್ಯದ್ ಮುಹಮ್ಮದ್ ಅಶ್ರಫ್ ತಂಙಲ್ ಅಲ್ ಮುಶೈಖಿ ಉದ್ಘಾಟನೆಯನ್ನು ಮಾಡಲಿದ್ದಾರೆ.ದು:ಆಶೀರ್ವಚನವನ್ನು ಕೇರಳ ಏಝುಮಲದ ಬಹು ಸಯ್ಯದ್ ಸಫ್ವಾನ್ ತಂಙಲ್ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು  ಅತ್ತಿಕರಮಜಲು ಜುಮುಅ: ಮಸೀದಿಯ ಅಧ್ಯಕ್ಷರಾದ ಜನಾಬ್ ಹಾಜಿ ಪಿ.ಇಸ್ಹಾಖ್ ಸಾಹೇಬ್ ಪಾಜಪಳ್ಳ ವಹಿಸಲಿದ್ದಾರೆ.ಮುಖ್ಯ ಪ್ರಭಾಷಣವನ್ನು ಬಹು ಅಬ್ದುಲ್ ರಝಾಖ್ ಅಬ್ರಾರಿ ಪತ್ತನಂತಿಟ್ಟ ಕೇರಳ ಮಾಡಲಿದ್ದಾರೆ.ಗೌರವ ಉಪಸ್ಥಿತರಾಗಿ ಬೆಳ್ಳಾರೆ ಝಕರಿಯ ಜುಮುಅ: ಮಸೀದಿಯ ಖತೀಬರಾದ ಬಹು ನಸೀಹ್ ದಾರಿಮಿ,ದಾರುಲ್ ಹುದಾ 
ತಂಬಿನಮಕ್ಕಿ ಖತೀಬರಾದ ಬಹು ಅಲ್ ವಾರಿಸಿ ಜಾಫರ್ ಸಖಾಫಿ,ಕಳಂಜ ಬದ್ರಿಯಾ ಜುಮುಅ: ಮಸೀದಿ ಖತೀಬರಾದ ಬಹು ಉಮ್ಮರ್ ಫೈಝಿ ಕಡಬ ಉಪಸ್ಥಿತಿಯಲ್ಲಿರಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್,ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಂ.ಮುಸ್ತ್ವಫಾ,ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಅಧ್ಯಕ್ಷರಾದ ಅಬೂಬಖರ್ ಹಾಜಿ ಮಂಗಳ,ಬೆಳ್ಳಾರೆ ಶಂಸುಲ್ ಉಲಮಾ ಚಾರಿಟೇಬಲ್ ಟ್ರುಸ್ಟ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ,ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ,ಸುಳ್ಯ ತಾಲೂಕು ಗ್ಯಾರಂಟಿ
ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ,ಸುಳ್ಯ ಮದ್ರಸಾ ಮ್ಯಾನೇಜ್ಮೆಂಟ್ ಕೋಶಾಧಿಕಾರಿ ಹಮೀದ್ ಹಾಜಿ ಸುಳ್ಯ,ಸುಳ್ಯ ಸಮಸ್ತ ಸಂಯುಕ್ತ ಜಮಾಅತ್ ಉಪಾಧ್ಯಕ್ಷರಾದ ಇಬ್ರಾಹಿಂ ಹಾಜಿ ಕತಾರ್,ಮಾಡಾವು ಜುಮುಅ: ಮಸೀದಿಯ ಅಧ್ಯಕ್ಷರಾದ ಹಸೈನಾರ್ ಹಾಜಿ ಸಂತೋಷ್,ಬೈತಡ್ಕ ಉರೂಸ್ ಸಮಿತಿ ಅಧ್ಯಕ್ಷರಾದ ಹಮೀದ್ ಹಾಜಿ ಬೈತಡ್ಕ,ಗೂನಡ್ಕ ಜುಮುಅ: ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ,ಸುಳ್ಯ ಅನ್ಸಾರಿಯ ಎಜುಕೇಷನ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಜನತಾ,ಸುಳ್ಯ ಅನ್ಸಾರಿಯ ಎಜುಕೇಷನ್ ಸೆಂಟರ್ ಉಪಾಧ್ಯಕ್ಷರಾದ ಇಖ್ಬಾಲ್ ಎಲಿಮಲೆ,ಸುಳ್ಯ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ಸಂಪಾಜೆ,ಬೈತಡ್ಕ ಜುಮುಅ: ಮಸೀದಿ ಅಧ್ಯಕ್ಷರಾದ ಇಖ್ಬಾಲ್ ಹಾಜಿ ಬೈತಡ್ಕ,ಪೆರ್ಲಂಪಾಡಿ ಜುಮುಅ: ಮಸೀದಿ ಅಧ್ಯಕ್ಷರಾದ ಶಾಫಿ ಹಾಜಿ ಪೆರ್ಲಂಪಾಡಿ,ಸುಳ್ಯ ನೋಟರಿ ಮತ್ತು ವಕೀಲರಾದ ಪವಾಝ್ ಕನಕಮಜಲು,ಸುಳ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸ್ವಿದ್ದೀಖ್ ಕೋಕೊ ಭಾಗವಹಿಸಲಿದ್ದಾರೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading